

ಅಕ್ಕಲಕೋಟ: ರಕ್ಷಾಬಂಧನ ಹಬ್ಬ ಅಣ್ಣ-ತಂಗಿಯರ ಸಂಬಂಧಕ್ಕೆ ಸೀಮಿತಗೊಳಿಸದೆ, ಸಾಮಾಜಿಕ ಬದ್ಧತೆ ಹಾಗೂ ಮಾನವೀಯತೆಯ ಸಂದೇಶ ಸಾರುವ ರೀತಿಯಲ್ಲಿ ಬೋರೋಟಿ ಸರ್ಕಾರಿ ಪ್ರಾಥಮಿಕ ಕನ್ನಡ ಶಾಲೆ ವಿದ್ಯಾರ್ಥಿನಿಯರು ವಿಶಿಷ್ಟವಾಗಿ ಆಚರಿಸಿದರು. ವಿದ್ಯಾರ್ಥಿನಿಯರು ಗ್ರಾಮದ ಮನೆ ಕಟ್ಟಡ ನಿಮಾರ್ಣ ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿ, ಅಲ್ಲಿನ ಕಾರ್ಮಿಕರಾದ ನಾಗಪ್ಪ ಪೂಜಾರಿ, ರಮೇಶ ಪಾಟೀಲ್, ಶ್ರೀಶೈಲ ಕುಂಬಾರ, ಯುವರಾಜ ಪಾಟೀಲ್, ಅಮೃತ ಸನಗುಂದಿ ಹಾಗೂ ಮನೆ ಮಾಲೀಕ ಲಕ್ಷಿ$್ಮಕಾಂತ ಪಾಟೀಲ್ ಅವರಿಗೆ ರಾಖಿ ಕಟ್ಟಿದರು. ವಿದ್ಯಾರ್ಥಿನಿಯರ ಸಾಮಾಜಿಕ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಯಿತು. ನಂತರ ಶಾಲೆಯಲ್ಲಿ ಸಾಮೂಹಿಕ ರಕ್ಷಾಬಂಧನ ನಡೆಯಿತು. ವಿದ್ಯಾರ್ಥಿಗಳು ತಮ್ಮ ಸಹೋದರಿಯರಿಗೆ ಪೆನ್, ನೋಟ್ಬುಕ್ ಹಾಗೂ ನಗದು ಹಣ ನೀಡಿ ಹಾರೈಸಿದರು. ಮುಖ್ಯೋಪಾಧ್ಯಾಯಿನಿ ರಾಜಶ್ರೀ ತಾಂಬೆ, ಅಂಜಲಿ ವಾಘಮಾರೆ, ಶರಣಪ್ಪ ಫುಲಾರಿ ಇದ್ದರು.