ಅಡ್ಡ ಮತದಾನ ರಾಜಶೇಖರ ಗೂಗಲ್​ ಆಕ್ರೋಶ

ರಾಜಶೇಖರಗೂಗಲ್​ ನಗನೂರ.
ರಾಜಶೇಖರಗೂಗಲ್​ ನಗನೂರ.
Published on
ಕೆಂಭಾವಿ: 30-3 ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಕೆಲ ಸೋ ಕಾಲ್ಡ್​ ನಾಯಕರು ಷಡ್ಯಂತ್ರ ರೂಪಿಸಿದ್ದು, ಅದರ ಭಾಗವಾಗಿ ಈಚೆಗೆ ನಡೆದ ವಿಧಾನ ಪರಿಷತ್​ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಲು ಪ್ರೇರೆಪಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿ ಸದಸ್ಯ ರಾಜಶೇಖರ ಗೂಗಲ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ ನಬಿನ್​ ಅವರಿಗೆ ಪತ್ರ ಬರೆದಿರುವ ಅವರು, ರಾಜ್ಯ ಬಿಜೆಪಿ ಅಧ್ಯಕ್ಷರು ಯಾರೇ ಆಗಲಿ ಅದು ಹೈಕಮಾಂಡ್​ ತೀರ್ಮಾನ. ಅದನ್ನು ನಾವು ಕಾರ್ಯಕರ್ತರು ಒಪ್ಪಿಕೊಂಡು ಗೌರವಿಸಬೇಕು. ಆದರೆ ಬಿವೈ ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧಕ್ಷರಾದ ಮೇಲೆ ರಾಜ್ಯಮಟ್ಟದ ಸ್ವಯಂೂಷಿತ ನಾಯಕರು ವಿಜಯೇಂದ್ರ ಅವರನ್ನು ಟೀಕಿಸುತ್ತಾ ಬಂದರು. ಪಕ್ಷದಿಂದ ಉಚ್ಚಾಟಿತ ನಾಯಕರೊಂದಿಗೆ ಸಭೆ ಮಾಡುತ್ತಾ ಬಿಜೆಪಿ ಕಾರ್ಯಕರ್ತರಲಿ ಗೋಂದಲ ಮೂಡಿಸುತ್ತಾ ಬಂದರು.
ಈ ಸ್ವಯಂಘೋಷಿತ ನಾಯಕರು ತಮ್ಮ ಪಕ್ಕದ ತಾಲೂಕಿನಲ್ಲಿ 10 ಮತಗಳನ್ನು ಸಹ ಹಾಕಿಸಲು ಆಗುವುದಿಲ್ಲ. ಈಗಿನ ಅವರ ಪರಿಸ್ಥಿತಿಯಲ್ಲಿ ಅವರು ಸಹ ಗೆದ್ದು ಬರುವುದಿಲ್ಲ. ಇಂಥವರ ಹೇಳಿಕೆಯಿಂದ ಪಕ್ಷದಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಇಂಥ ಗೊಂದಲದಿಂದ ಪಕ್ಷಕ್ಕೆ ಧಕ್ಕೆಯಾಗಿ 2028ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ತೀವ್ರ ಹೆಣಗಾಡಬೇಕಾರುತ್ತದೆ ಎಂದು ಎಚ್ಚರಿಕೆ ನೀಡಿದರು.
ದೇಶಾದ್ಯಂತ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರ ಪಡೆ ಇದ್ದು, ಹಾಗಾಗಿ ಯಾವುದೇ ವಿಚಾರ ಮಾಡದೆ ಇವರನ್ನು ಪಕ್ಷದಿಂದ ಉಚ್ಚಾಟಿಸಬೇಕು. ಮುಂದೆ ಬರುವ ಜಿಪಂ, ತಾಪಂ ಮತ್ತು ಗ್ರಾಪಂ ಚುನಾವಣೆ ಗೆಲ್ಲಬೇಕಾಗಿದೆ. ಬಿ.ವೈ.ವಿಜಯೇಂದ್ರ ರಾಜ್ಯದ ತುಂಬೆಲ್ಲ ತಿರುಗಾಡಿ ಎಲ್ಲ ಸಮುದಾಯದವರ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದು ಪಕ್ಷದ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net