11ವರೆಗೆ ಕರಾವಳಿ, ಮಲೆನಾಡಲ್ಲಿ ಮಳೆ: 3ನೇ ವಾರದಿಂದ ಇಳಿಮುಖ- Rain in coastal

 ರಾಜ್ಯದಲ್ಲಿ ವಾರಪೂರ್ತಿ ಮಳೆ
ರಾಜ್ಯದಲ್ಲಿ ವಾರಪೂರ್ತಿ ಮಳೆ
Published on
ಬೆಂಗಳೂರು: ಆಂಧ್ರಪ್ರದೇಶದ ಉತ್ತರ ಭಾಗದಲ್ಲಿ ಮತ್ತು ಓರಿಸ್ಸಾದ ಕರಾವಳಿಯಲ್ಲಿ ವಾಯುಭಾರ ಕುಸಿತ ಹಾಗೂ ಮುಂಗಾರು ಚುರುಕುಗೊಂಡಿರುವ ಪರಿಣಾಮ ರಾಜ್ಯದಲ್ಲಿ ವಾರಪೂರ್ತಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಕರಾವಳಿ, ಮಲೆನಾಡಿನ ಕೆಲ ಪ್ರದೇಶಗಳಲ್ಲಿ ಶನಿವಾರವೂ 7ರಿಂದ 13 ಸೆಂಮೀವರೆಗೆ ಮಳೆಯಾಗಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ,ಚಿಕ್ಕಮಗಳೂರು, ಕೊಡಗು ಮತ್ತು ಹಾಸನದಲ್ಲಿ ಜು.5ರಿಂದ ಜು.11ವರೆಗೆ ಜೋರು ಮಳೆಯಾಗುವುದರಿಂದ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಕೊಟ್ಟಿದೆ. ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿಯಲ್ಲಿ ಮುಂದಿನ 7 ದಿನ ಯೆಲ್ಲೋ ಅಲರ್ಟ್ ಇರಲಿದೆ.
ಬೆಂಗಳೂರು ನಗರ, ಬೆಂಗ್ರಾಮಾಂತರ, ಬೆ.ದಕ್ಷಿಣ, ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಮತ್ತು ಬೀದರ್‌ನಲ್ಲಿ ಮುಂದಿನ 5 ದಿನ ಮೋಡ ಮುಸುಕಿದ ವಾತಾವರಣ ಇರಲಿದೆ. ಈ ವೇಳೆ ಸಾಧಾರಣ ಮಳೆಯಾಗಲಿದೆ.
ಹಿರಿಯ ಹವಾಮಾನ ತಜ್ಞ ಡಾ.ಶ್ರೀನಿವಾಸರೆಡ್ಡಿ ಮಾತನಾಡಿ, ಅರಬ್ಬಿ ಸಮುದ್ರದಲ್ಲಿರುವ ಮೋಡಗಳು ಕರಾವಳಿಯತ್ತ ಆಗಮಿಸುತ್ತಿರುವ ಪರಿಣಾಮ ಆ ಪ್ರದೇಶಗಳಲ್ಲಿ ಮುಂದಿನ ನಾಲ್ಕೈದು ದಿನ ಉತ್ತಮ ಮಳೆ ಸುರಿಯಲಿದೆ. ದಕ್ಷಿಣ ಕರ್ನಾಟಕದ ಭಾಗಗಳಲ್ಲಿ ಅಷ್ಟೇನೂಬೀಳುವುದಿಲ್ಲ. ಜುಲೈ 3ನೇ ವಾರದಿಂದ ರಾಜ್ಯದಲ್ಲಿ ಮಳೆ ಇಳಿಮುಖವಾಗಲಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net