ರ‍್ಯಾಗಿಂಗ್​ನಿಂದ ವಿದ್ಯಾರ್ಥಿಗಳ ಭವಿಷ್ಯ ಹಾಳು

ಕಲಬುರಗಿಯ ಕೆಬಿಎನ್​ ವಿವಿಯಲ್ಲಿ ಹಮ್ಮಿಕೊಂಡಿದ್ದ ಆ್ಯಂಟಿ ರ‍್ಯಾಗಿಂಗ್​ ವೀಕ್​ ಕಾರ್ಯಕ್ರಮವನ್ನು ಸಮ ಉಪಕುಲಪತಿ ಪ್ರೊ.ಅಸ್ಫಾಕ್​ ಅಹ್ಮದ್​ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು. ಮೀರ್​ ವಿಲಾಯತ್​, ಡಾ.ಅಬ್ದುಲ್​ ಬಶೀರ್​, ಡಾ.ಗುರುಪ್ರಸಾದ, ಡಾ.ಅನೂಪ್​ ದೇಸಾಯಿ ಇದ್ದರು.
ಕಲಬುರಗಿಯ ಕೆಬಿಎನ್​ ವಿವಿಯಲ್ಲಿ ಹಮ್ಮಿಕೊಂಡಿದ್ದ ಆ್ಯಂಟಿ ರ‍್ಯಾಗಿಂಗ್​ ವೀಕ್​ ಕಾರ್ಯಕ್ರಮವನ್ನು ಸಮ ಉಪಕುಲಪತಿ ಪ್ರೊ.ಅಸ್ಫಾಕ್​ ಅಹ್ಮದ್​ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು. ಮೀರ್​ ವಿಲಾಯತ್​, ಡಾ.ಅಬ್ದುಲ್​ ಬಶೀರ್​, ಡಾ.ಗುರುಪ್ರಸಾದ, ಡಾ.ಅನೂಪ್​ ದೇಸಾಯಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರೊ.ಅಸ್ಫಾಕ್​ ಅಹ್ಮದ್​ ಹೇಳಿಕೆ
  • ಕೆಬಿಎನ್​ ಕಾಲೇಜಿನಲ್ಲಿ ಜಾಗೃತಿ ಕಾರ್ಯಕ್ರಮ
ಕಲಬುರಗಿ: ವಿದ್ಯಾರ್ಥಿ ಜೀವನ ಬದುಕಿನ ಮಹತ್ವದ ಟ್ಟ. ಒಳ್ಳೆಯ ನಡತೆ, ನಿರ್ಧಾರ ತೆಗೆದುಕೊಳ್ಳುವ ಸಮಯ. ರ‍್ಯಾಗಿಂಗ್​ನಿಂದಾಗಿ ಭವಿಷ್ಯ ಹಾಳಾಗುತ್ತದೆ ಎಂದು ಖ್ವಾಜಾ ಬಂದಾನವಾಜ್​ ವಿಶ್ವವಿದ್ಯಾಲಯದ ಸಮ ಉಪಕುಲಪತಿ ಪ್ರೊ.ಅಸ್ಫಾಕ್​ ಅಹ್ಮದ್​ ಹೇಳಿದರು.
ಖ್ವಾಜಾ ಬಂದಾನವಾಜ್​ ವಿಶ್ವವಿದ್ಯಾಲಯದ ಅನಾಟೋಮಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆ್ಯಂಟಿ ರ‍್ಯಾಗಿಂಗ್​ ವೀಕ್​ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರ್ಯಾಗಿಂಗ್​ನಿಂದ ಜೂನಿಯರ್​ ಜತೆಗೆ ಸೀನಿಯರ್​ ವಿದ್ಯಾರ್ಥಿಗಳು ತಮ್ಮ ಭವ್ಯ ಹಾಳು ಮಾಡಿಕೊಳ್ಳುತ್ತಾರೆ. ಇದೀಗ ಅದೊಂದು ಶಿಕ್ಷಾರ್ಹ ಅಪರಾಧವಾಗಿದ್ದು, ಅಡ್ಮಿಷನ್​ ಕ್ಯಾನ್ಸಲ್​ ಆಗಬಹುದು ಎಂದು ಎಚ್ಚರಿಕೆ ನೀಡಿದರು.
ರಿಜಿಸ್ಟ್ರಾರ್​ ಮೀರ್​ ವಿಲಾಯತ್​ ಮಾತನಾಡಿ, ಕೆಬಿಎನ್​ ವಿವಿಯಲ್ಲಿ ರ್ಯಾಗಿಂಗ್​ ನಡೆಯುವುದಿಲ್ಲ. ಯಾವುದೇ ವಿದ್ಯಾರ್ಥಿಗೆ ಮಾನಸಿಕ ಕಿರುಕುಳ, ತಮಾಷೆ ಹೆಸರಲ್ಲಿ ಅವಮಾನ ಮಾಡಲಾಗುವುದಿಲ್ಲ. ಜೀವನದ ಜತೆ ಚೆಲ್ಲಾಟ ಆಡಬೇಡಿ. ಅಕಸ್ಮಾತ್​ ಅಂತಹ ಟನೆಗಳು ಕಂಡು ಬಂದಲ್ಲಿ ಆ್ಯಂಟಿ ರ್ಯಾಗಿಂಗ್​ ಕಮಿಟಿ ಮ್ಯಾನೇಜಮೆಂಟ್​ ಗಮನಕ್ಕೆ ತರಬೇಕು ಎಂದರು.
ಸಹಾಯಕ ಪ್ರಾಧ್ಯಾಪಕಿ ಡಾ.ಸನಾ ಇಜಾಜ್​ ನಿರೂಪಣೆ ಮಾಡಿದರು. ಮಹಾಲ್ಮ ಉಪನ್ಯಾಸ ನೀಡಿದರು.
ಐಕ್ಯೂಎಸಿ ನಿರ್ದೇಶಕ ಡಾ.ಅಬ್ದುಲ್​ ಬಶೀರ್​, ಡೀನ್​ ಡಾ.ಗುರುಪ್ರಸಾದ, ಡಾ.ಅನೂಪ್​ ದೇಸಾಯಿ, ಡಾ.ಶ್ರೀನಿವಾಸ, ಡಾ.ಸುಭಾಸ ಕಮಲ, ಡಾ.ಇಕ್ಬಾಲ್​, ಡಾ.ಸಿದ್ದೇಶ ಸಿರವಾರ, ಡಾ.ಸಿದ್ಧಲಿಂಗ ಚೆಂಗಟಿ, ಡಾ.ಗೀತಾಂಜಲಿ ಇತರರಿದ್ದರು. ಡಾ.ಮಾರುಫ್​ ಸ್ವಾಗತಿಸಿದರು. ಡಾ.ಜಿಬ್ರಾನ್​ ಅನ್ವರ್​ ವಂದಿಸಿದರು. ಆ್ಯಂಟಿ ರಾಗಿಂಗ್​ ಜಾಗೃತಿ ಬಗ್ಗೆ ವಿಡಿಯೋ ತುಣುಕನ್ನು ಪ್ರದರ್ಶಿಸ ಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net