ಗುಣಮಟ್ಟದ ಹಾಲು ಪೂರೈಕೆಯಾಗಲಿ

ಗೋಕಾಕ ನಗರದಲ್ಲಿ ರೈತ ಕುಟುಂಬಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಚೆಕ್​ ವಿತರಿಸಿದರು. ಮಲ್ಲಪ್ಪ ಪಾಟೀಲ, ನೀಲಕಂಠ ಕಪ್ಪಲಗುದ್ದಿ ಇತರರಿದ್ದರು.
ಗೋಕಾಕ ನಗರದಲ್ಲಿ ರೈತ ಕುಟುಂಬಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಚೆಕ್​ ವಿತರಿಸಿದರು. ಮಲ್ಲಪ್ಪ ಪಾಟೀಲ, ನೀಲಕಂಠ ಕಪ್ಪಲಗುದ್ದಿ ಇತರರಿದ್ದರು.
Published on
ಗೋಕಾಕ: ಹೈನುಗಾರರು ಗುಣಮಟ್ಟದ ಹಾಲು ಪೂರೈಸುವ ಮೂಲಕ ಒಕ್ಕೂಟದ ಸರ್ವತೋಮುಖ ಬೆಳವಣಿಗೆಗೆ ಕೈಜೋಡಿಸಬೇಕು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಇಲ್ಲಿನ ಎನ್​ಎಸ್​ಎ್​ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ರೈತ ಕುಟುಂಬಗಳಿಗೆ 5.70 ಲ ರೂ. ಮೊತ್ತದ ಚೆಕ್​ ವಿತರಿಸಿ ಮಾತನಾಡಿ, ನಂದಿನಿ ಹಾಲು ಮತ್ತು ಇತರೆ ಸಿಹಿ ಉತ್ಪನ್ನಗಳಿಗೆ ಗ್ರಾಹಕರಿಂದ ಉತ್ತಮ ಬೇಡಿಕೆ ಬರುತ್ತಿದೆ ಎಂದರು. ಪ್ರತಿನಿತ್ಯ ಒಕ್ಕೂಟಕ್ಕೆ 2.15 ಲ ಲೀಟರ್​ ಆಕಳು ಹಾಲು ಮತ್ತು 50 ಸಾವಿರ ಲೀ. ಎಮ್ಮೆ ಹಾಲು ಸಂಗ್ರಹವಾಗುತ್ತಿದೆ. ಆಕಳು ಮತ್ತು ಎಮ್ಮೆ ಹಾಲಿಗೆ ಪ್ರತಿ ಲೀ. ಕ್ರಮವಾಗಿ 33 ರೂ. ಹಾಗೂ 42 ರೂ. ದರ ನೀಡಲಾಗುತ್ತಿದೆ. ಎಮ್ಮೆ ಹಾಲಿಗೆ ಪ್ರತಿ ಲೀ.ಗೆ 5 ರೂ. ಹೆಚ್ಚಿಸಲು ಹಾಲು ಉತ್ಪಾದಕ ಸಹಕಾರ ಸಂಗಳು ಪ್ರಸ್ತಾವ ಸಲ್ಲಿಸಿವೆ. ಜಿಲ್ಲಾ ಹಾಲು ಒಕ್ಕೂಟದ ಸಭೆಯಲ್ಲಿ ಚರ್ಚಿಸಿ ಅಂತಿಮ ರ್ನಿಣಯ ಕೈಗೊಳ್ಳುವುದಾಗಿ ಶಾಸಕ ಬಾಲಚಂದ್ರ ಭರವಸೆ ನೀಡಿದರು. ಇಬ್ಬರು ಲಾನುಭವಿಗಳಿಗೆ ತಲಾ 50 ಸಾವಿರ ರೂ., ರೈತ ಕಲ್ಯಾಣ ಸಂದಿಂದ ಮೂಡಲಗಿ ತಾಲೂಕಿನ ಮುನ್ಯಾಳ ಸಂದ ನಿವೃತ್ತ ಕಾರ್ಯದರ್ಶಿಗೆ 50 ಸಾವಿರ ರೂ.ಹಾಗೂ 21 ಲಾನುಭವಿಗಳಿಗೆ ತಲಾ 20 ಸಾವಿರ ರೂ.ನಂತೆ 4.20 ಲಕ್ಷ ರೂ. ಸೇರಿ ಒಟ್ಟು 5.70 ಲ ರೂ. ಮೊತ್ತದ ಚೆಕ್​ ವಿತರಿಸಿದರು. ಬೆಮುಲ್​ ನಿರ್ದೇಶಕ ಮಲ್ಲಪ್ಪ ಪಾಟೀಲ, ಡಿಸಿಸಿ ಬ್ಯಾಂಕ್​ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ಡಾ.ವೀರಣ್ಣ ಕೌಜಲಗಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net