ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ಇರಲಿ

ಭಾಲ್ಕಿಯ ಕಾರಂಜಾ ರೈತ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ೇತ್ರ ಶಿಕ್ಷಣಾಧಿಕಾರಿ ಸಿ.ಜಿ.ಹಳ್ಳದ್​ ಉದ್ಘಾಟಿಸಿದರು. ಮಲ್ಲಿಕಾರ್ಜುನ ಹಲಮಂಡಗೆ, ಅಮರ ಹಲಮಂಡಗೆ, ಮೀನಾ ಪಾಟೀಲ, ಮುಸ್ತಾಕ್​ ಪಟೇಲ್​,  ನಾಗಭೂಷಣ ಮಾಮಡಿ, ತಿಪ್ಪಣ್ಣ ಶಿವಪುರೆ ಇತರರಿದ್ದರು.
ಭಾಲ್ಕಿಯ ಕಾರಂಜಾ ರೈತ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ೇತ್ರ ಶಿಕ್ಷಣಾಧಿಕಾರಿ ಸಿ.ಜಿ.ಹಳ್ಳದ್​ ಉದ್ಘಾಟಿಸಿದರು. ಮಲ್ಲಿಕಾರ್ಜುನ ಹಲಮಂಡಗೆ, ಅಮರ ಹಲಮಂಡಗೆ, ಮೀನಾ ಪಾಟೀಲ, ಮುಸ್ತಾಕ್​ ಪಟೇಲ್​, ನಾಗಭೂಷಣ ಮಾಮಡಿ, ತಿಪ್ಪಣ್ಣ ಶಿವಪುರೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಿಇಒ ಸಿ.ಜಿ.ಹಳ್ಳದ್​ ಸಲಹೆ
  • ಭಾಲ್ಕಿಯಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ
ಭಾಲ್ಕಿ: ಶಿಕ್ಷಕರು ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ೇತ್ರ ಶಿಕ್ಷಣಾಧಿಕಾರಿ ಸಿ.ಜಿ.ಹಳ್ಳದ್​ ಹೇಳಿದರು.
ಪಟ್ಟಣದ ರೈತ ಸಮುದಾಯ ಭವನದಲ್ಲಿ ಆಯೋಜಿಸಿದ್ದ ನಿರ್ಮಲಾ ಹಲಮಂಡಗೆ ಕ್ರಿಯೇಟಿವ್​ ಸ್ಟಡಿಜ್​ ಪ್ರೌಢಶಾಲೆಯ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಂದು ಮಕ್ಕಳಲ್ಲಿ ತನ್ನದೇ ಆದ ಪ್ರತಿಭೆ ಇರುತ್ತದೆ, ಆ ಪ್ರತಿಭೆಯನ್ನು ಹೊರತರುವ ಕಾರ್ಯ ಶಿಕ್ಷಕರದ್ದಾಗಿದೆ. ಶಿಕ್ಷಕರು ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ ಪಾಠ ಮಾಡಬೇಕು. ಸಂಸ್ಕಾರಯುತ ಗುಣಮಟ್ಟದ ಶಿಕ್ಷಣ ನೀಡುವುದರೊಂದಿಗೆ ಮಕ್ಕಳಿಗೆ ಉತ್ತಮ ದಾರಿಯಲ್ಲಿ ನಡೆಸುವ ಕಾರ್ಯಮಾಡಬೇಕು ಎಂದು ಸಲಹೆ ನೀಡಿದರು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮಲ್ಲಿಕಾರ್ಜುನ ಹಲಮಂಡಗೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಅಮರ ಹಲಮಂಡಗೆ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯ ಶಿಕ್ಷಕಿ ಮೀನಾ ಪಾಟೀಲ ಶಾಲಾ ವಾರ್ಷಿಕ ವರದಿ ಮಂಡಿಸಿದರು. ಪ್ರಮುಖರಾದ ಮುಸ್ತಾಕ್​ ಪಟೇಲ್​, ಕಸಾಪ ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ, ನಿವೃತ್ತ ಶಿಕ್ಷಕ ತಿಪ್ಪಣ್ಣ ಶಿವಪುರೆ, ಜಾಲಿಂದರ ಮೇತ್ರೆ, ಬಸವರಾಜ ರಂಜೆರೆ, ಜಯರಾಜ ದಾಬಶೆಟ್ಟಿ, ಸಂತೊಷ ಬಿಜಿಪಾಟೀಲ ಇದ್ದರು. ಇದೇ ವೇಳೆ ತಂದೆ& ತಾಯಿ ಪಾದಪೂಜೆ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net