ಪುಟ್​ಪಾತ್​ ಕಸಮಯ, ಸಂಚಾರ ಕಷ್ಟಕರ

 ಭಂಕೂರಿನಿಂದ ಶಹಾಬಾದ್​ಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿನ ಪಾದಚಾರಿ ಮಾರ್ಗದಲ್ಲಿ  ಕಸ ಎಸೆದಿರುವುದು.
ಭಂಕೂರಿನಿಂದ ಶಹಾಬಾದ್​ಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿನ ಪಾದಚಾರಿ ಮಾರ್ಗದಲ್ಲಿ ಕಸ ಎಸೆದಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಗಿಡ-ಗಂಟಿ, ಕಸದಿಂದ ಶಹಾಬಾದ್​&ಭಂಕೂರ ಪಾದಚಾರಿ ಮಾರ್ಗ ಬಂದ್​
ಶಹಾಬಾದ್​: ನಗರದಿಂದ ಭಂಕೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ-150ರಲ್ಲಿನ ಪಾದಚಾರಿ ಮಾರ್ಗ ಕಸ ಹಾಗೂ ಗಿಡ-ಗಂಟಿಗಳಿಂದ ತುಂಬಿಕೊಂಡಿದ್ದು, ಜನರ ಸುಗಮ ಸಂಚಾರಕ್ಕೆ ತೊಂದರೆ ಆಗುತ್ತಿದೆ.
ಸುಮಾರು 2 ಕಿಮೀ ದೂರದ ಮಾರ್ಗದಲ್ಲಿ ಪುಟ್​ಪಾತ್​ ನಿರ್ಮಿಸಲಾಗಿದೆ. ಭಂಕೂರಿಗೆ ಹೋಗುವ ಜನರಿಗೆ ಹಾಗೂ ಜೆಪಿ ಕಾರ್ಖಾನೆ ಕಾಲನಿ ನಿವಾಸಿಗಳಿಗೆ ಸುಗಮ ಸಂಚಾರಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಪುಟ್​ಪಾತ್​ ನಿರ್ಮಿಸಲಾಗಿದೆ. ಶಾಂತನಗರ ಮಸೀದಿ ವೃತ್ತದಿಂದ ಜಿಇ ಕಾರ್ಖಾನೆ ಗೇಟ್​ವರೆಗಿನ ರಸ್ತೆ ಪಕ್ಕದಲ್ಲಿ ಮುಳ್ಳುಕಂಟಿ ಹಾಗೂ ಇತರೆ ಗಿಡಗಳು ಬೆಳೆದು ನಿಂತಿವೆ. ಅಲ್ಲದೆ ಸುತ್ತಲಿನ ಬಡಾವಣೆ ಜನರು ಮನೆಯ ತ್ಯಾಜ್ಯ, ಮಾಸಂದಂಗಡಿ ವ್ಯಾಪಾರಿಗಳು ಕಸವನ್ನು ಪುಟ್​ಪಾತ್​ನಲ್ಲಿ ಹಾಕುತ್ತಿದ್ದಾರೆ. ಇದರಿಂದ ದಾರಿ ಬಂದ್​ ಆಗಿದ್ದು, ಅಲ್ಲದೆ ದುರ್ವಾಸನೆಯಿಂದ ಜನರ ಸಂಚಾರ ಕಮ್ಮಿಯಾಗಿದೆ.
ಮಳೆಗಾಲ ಪ್ರಾರಂಭವಾಗಿದ್ದರಿಂದ ರಸ್ತೆಯ ಎರಡು ಬದಿಯ ಪುಟ್​ಪಾತ್​ ಸ್ವಚ್ಛಗೊಳಿಸಬೇಕು, ಜನರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂಬುದು ಸ್ಥಳಿಯರ ಒತ್ತಾಯವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net