

ಯಡ್ರಾಮಿ: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹೋರಾಟಗಾರ ತ್ಯಾಗ, ಹೋರಾಟ ಹಾಗೂ ದೇಶ ಸೇವೆ ಗೌರವಿಸಬೇಕು ಎಂದು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ದೇವಿಂದ್ರ ಬಡಿಗೇರ ತಿಳಿಸಿದರು. ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಅನೇಕ ಮಹನೀಯರ ಹೋರಾಟದ ಫಲವಾಗಿ ಸ್ವಾತಂತ್ರ್ಯ ಲಭಿಸಿದೆ. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣ ಬಿಟ್ಟು ಪುಸ್ತಕದ ಕಡೆ ಒಲವು ತೋರಬೇಕು ಎಂದರು. ತಹಸೀಲ್ದಾರ್ ಯಲ್ಲಪ್ಪ ಸುಬೇದಾರ, ಟಿಎಪಿಸಿಎಂಎಸ್ ಅಧ್ಯಕ್ಷ ಬಸವರಾಜ ಖಾನಗೌಡರ, ಸರ್ಕಾರಿ ನೌಕರರ ಸಂದ ತಾಲೂಕು ಅಧ್ಯಕ್ಷ ಶಿವಕುಮಾರ ಡಂಬಳ, ತಾಪಂ ಇಒ ವೀರಣ್ಣ ಕೌಲಗಿ, ಪಪಂ ಮುಖ್ಯಾಧಿಕಾರಿ ಶ್ಯಾಮ ಭಜಂತ್ರಿ, ಪಿಎಸ್ಐ ಶ್ರೀಶೈಲ ಅಂಬಾಟಿ, ಸಿಆರ್ಪಿ ಭೀಮಾಶಂಕರ, ಕೆಪಿಎಸ್ ಶಾಲೆ ಮುಖ್ಯಶಿಕ್ಷಕ ಬಸವರಾಜ ಪಾಟೀಲ್ ಇತರರಿದ್ದರು.