ಎಸ್.ಸಿ.ಬಾಲಕೃಷ್ಣ ಸಚಿವರಾದ ಹಿನ್ನೆಲೆಯಲ್ಲಿ ಮಾಗಡಿ ಪಟ್ಟಣದ ಕಲ್ಯಾಗೇಟ್ ನ ವರಸಿದ್ದಿ ವಿನಾಯಕ ದೇವಾಲಯದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು. ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ರವೀಶ್, ಪಾಪಣ್ಣ, ಶ್ರೀನಿವಾಸ ಮೂರ್ತಿ, ವೆಂಕಟೇಶ್, ಅನಿಲ್ ಕುಮಾರ್, ಸುದೀಂದ್ರ, ರಾಜಣ್ಣ ಇತರರು ಇದ್ದರು.
ಎಚ್.ಸಿ.ಬಾಲಕೃಷ್ಣ ಸಚಿವರಾಗುವ ಮೂಲಕ ಮಾಗಡಿ ತಾಲೂಕಿನ ಕನಸು ನನಸಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಕೃಷ್ಣಮೂರ್ತಿ ತಿಳಿಸಿದರು.
ಬಾಲಕೃಷ್ಣ ಸಚಿವರಾದ ಹಿನ್ನಲೆಯಡಿ ಪಟ್ಟಣದ ಕಲ್ಯಾಗೇಟ್‌ನ ವರಸಿದ್ದಿ ವಿನಾಯಕ ದೇವಾಲಯದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿ ಮಾತನಾಡಿ, ಶಾಸಕರಾಗಿದ್ದ ಅವಧಿಯಲ್ಲೂ ಕ್ಷೇತ್ರದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಈಗ ಸಚಿವರಾಗಿ ಮಾಗಡಿ ಅಭಿವೃದ್ಧಿಯತ್ತ ಮುನ್ನಡೆಸಲಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ತಿಪ್ಪಸಂದ್ರ, ಕುದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಜಿ.ವೆಂಕಟೇಶ್ ಮಾತನಾಡಿ, ತಾಲೂಕಿಗೆ ಹೇಮಾವತಿ ನೀರು ತರಲು ಸಾಕಷ್ಟು ಶ್ರಮಿಸಿರುವ ಬಾಲಕೃಷ್ಣ ಅವರು ಈಗ ಸಚಿವರಾಗಿರುವುದರಿಂದ ತುರ್ತಾಗಿ ಕೆರೆಗಳಿಗೆ ನೀರು ಹರಿಸಲಿದ್ದಾರೆ ಎಂದರು.
ಬಮುಲ್ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ಎಚ್.ಸಿ. ಬಾಲಕೃಷ್ಣ ಅವರ ಕಾರ್ಯವೈಖರಿ ಮತ್ತು ಪಕ್ಷಕ್ಕೆ ನೀಡಿದ ಕೊಡುಗೆ ಗುರುತಿಸಿ ಸಚಿವ ಸ್ಥಾನ ನೀಡಿದ್ದಾರೆ ಎಂದರು.