ಏಳು ಗಂಟೆ ನಿರಂತರ ವಿದ್ಯುತ್​ ಪೂರೈಸಿ

ಹುಮನಾಬಾದ್​ ತಾಲೂಕಿನ ಮಲ್ಕಾಪುರವಾಡಿ ಗ್ರಾಮಕ್ಕೆ ಏಳು ಗಂಟೆ ನಿರಂತರ ತ್ರಿಫೇಸ್​ ವಿದ್ಯುತ್​ ಪೂರೈಕೆ ಕಲ್ಪಿಸುವಂತೆ ಆಗ್ರಹಿಸಿ ಹುಮನಾಬಾದ್​ ಕೆಪಿಟಿಸಿಎಲ್​ ಕಚೇರಿಯಲ್ಲಿ ಸೋಮವಾರ ಎಇಇ ರಮೇಶಕುಮಾರ ಮೈನಾಳೆ ಅವರಿಗೆ ರೈತರು ಮನವಿ ಸಲ್ಲಿಸಿದರು. ರೈತರಾದ ವೈಜಿನಾಥ ಪಾಟೀಲ್​, ಆನಂದ ದಾಡಗಿ, ಈಶ್ವರ ಚಿದ್ರಿ, ರೇವಣಯ್ಯ ಸ್ವಾಮಿ ಇತರರಿದ್ದರು.
ಹುಮನಾಬಾದ್​ ತಾಲೂಕಿನ ಮಲ್ಕಾಪುರವಾಡಿ ಗ್ರಾಮಕ್ಕೆ ಏಳು ಗಂಟೆ ನಿರಂತರ ತ್ರಿಫೇಸ್​ ವಿದ್ಯುತ್​ ಪೂರೈಕೆ ಕಲ್ಪಿಸುವಂತೆ ಆಗ್ರಹಿಸಿ ಹುಮನಾಬಾದ್​ ಕೆಪಿಟಿಸಿಎಲ್​ ಕಚೇರಿಯಲ್ಲಿ ಸೋಮವಾರ ಎಇಇ ರಮೇಶಕುಮಾರ ಮೈನಾಳೆ ಅವರಿಗೆ ರೈತರು ಮನವಿ ಸಲ್ಲಿಸಿದರು. ರೈತರಾದ ವೈಜಿನಾಥ ಪಾಟೀಲ್​, ಆನಂದ ದಾಡಗಿ, ಈಶ್ವರ ಚಿದ್ರಿ, ರೇವಣಯ್ಯ ಸ್ವಾಮಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹುಮನಾಬಾದ್​ನಲ್ಲಿ ರೈತರ ಪ್ರತಿಭಟನೆ
ಹುಮನಾಬಾದ್​ ಹಳ್ಳಿಖೇಡ (ಬಿ) ಸರ್ಕಲ್​ ವ್ಯಾಪ್ತಿಯ ಮಲ್ಕಾಪುರವಾಡಿ ಗ್ರಾಮದ ಕೃಷಿ ಪಂಪ್​ಸೆಟ್​ಗಳಿಗೆ ನಿಗಧಿಯಂತೆ ಏಳು ಗಂಟೆ ನಿರಂತರ ತ್ರಿಫೇಸ್​ ವಿದ್ಯುತ್​ ಪೂರೈಕೆ ಕಲ್ಪಿಸುವಂತೆ ಆಗ್ರಹಿಸಿ ಗ್ರಾಮದ ರೈತರು ಸೋಮವಾರ ಪಟ್ಟಣದ ಕೆಪಿಟಿಸಿಎಲ್​ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಇಲಾಖೆೆಯ ಎಇಇ ರಮೇಶಕುಮಾರ ಮೈನಾಳೆ ಅವರಿಗೆ ಮನವಿ ಸಲ್ಲಿಸಿದ ರೈತರು, ಕಳೆದ ಒಂದು ತಿಂಗಳಿಂದ ಮಲ್ಕಾಪುರವಾಡಿ ಗ್ರಾಮದ ಕೃಷಿ ಜಮೀನುಗಳಿಗೆ ಸಮರ್ಪಕ ವಿದ್ಯುತ್​ ಪೂರೈಕೆ ಆಗುತ್ತಿಲ್ಲ. ಬೇನಚಿಂಚೋಳಿ ಸಮೀಪದ ಜಿವೋಎಸ್​ (ಜಿಒಎಸ್​) ತೆರೆಯುತ್ತಿರುವ ಕಾರಣ ನಿಗದಿತ ಏಳು ಗಂಟೆಗಳ ನಿರಂತರ ತ್ರಿಫೇಸ್​ ವಿದ್ಯುತ್​ ಸಿಗುತ್ತಿಲ್ಲ. ಇದರಿಂದ ಬೆಳೆಗಳಿಗೆ ನೀರುಣಿಸಲು ತೊಂದರೆಯಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ದೂರಿದರು.
ರೈತರ ಹಾಗೂ ವಿದ್ಯುತ್​ ಗ್ರಾಹಕರ ಸಮಸ್ಯೆಗಳಿಗೆ ಸ್ಪಂದಿಸದೆ, ನಿರಂತರ ವಿದ್ಯುತ್​ ಕೊರತೆ ಉಂಟಾಗುವಂತೆ ವರ್ತಿಸುತ್ತಿರುವ ಶಾಖಾಧಿಕಾರಿಯ ವಿರುದ್ಧ ಹಿರಿಯ ಅಧಿಕಾರಿಗಳು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕೃಷಿ ಚಟುವಟಿಕೆಗಳಿಗೆ ಯಾವುದೇ ಅಡಚಣೆಯಾಗದಂತೆ ಪ್ರತಿದಿನ ಏಳು ಗಂಟೆಗಳ ನಿರಂತರ ತ್ರಿಫೇಸ್​ ವಿದ್ಯುತ್​ ಪೂರೈಕೆ ಕಲ್ಪಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿದ ಎಇಇ ರಮೇಶಕುಮಾರ ಮೈನಾಳೆ ಅವರು ಸಮಸ್ಯೆಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಗ್ರಾಮದ ರೈತರಾದ ವೈಜಿನಾಥ ಪಾಟೀಲ್​, ಆನಂದ ದಾಡಗಿ, ಈಶ್ವರ ಚಿದ್ರಿ, ರೇವಣಯ್ಯ ಸ್ವಾಮಿ, ಶಿವರಾಜ ಕಲಗೊಂಡ, ವೈಜಿನಾಥ ಮಿತ್ರ, ಶಿವರಾಜ ಜವಳಗಿ, ಜಗನಾಥ ಕಠಳ್ಳಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net