ಬಸವಕಲ್ಯಾಣ: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಸಂಕೇಶ್ವರಹಾಳ್ ಗ್ರಾಮದ ಬಹುಜನ ಸಮಾಜ ಪಾರ್ಟಿಯ ರಾಯಚೂರು ಜಿಲ್ಲಾ ಉಸ್ತುವಾರಿಯಾಗಿದ್ದ ಭೂಮಾನಂದ ಕೊಲೆ ಮಾಡಿದವರನ್ನು ಬಂಧಿಸಬೇಕು. ಹತ್ಯೆಯಾದ ಭೂಮಾನಂದ ಕುಟುಂಬಕ್ಕೆ ಭದ್ರತೆ ಮತ್ತು ಪರಿಹಾರ ನೀಡಬೇಕು ಎಂದು ಬಹುಜನ ಸಮಾಜ ಪಕ್ಷದ ತಾಲೂಕು ಘಟಕ ಒತ್ತಾಯಿಸಿದೆ. ಪಕ್ಷದ ಪದಾಧಿಕಾರಿಗಳ ನಿಯೋಗದಿಂದ ಸೋಮವಾರ ತಾಲೂಕು ಆಡಳಿತ ಸೌಧಕ್ಕೆ ತೆರಳಿ ಹಕ್ಕೋತ್ತಾಯಗಳ ಕುರಿತು ಮುಖ್ಯಮಂತ್ರಿಗೆ ಹಾಗೂ ಗೃಹ ಸಚಿವರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ಡಾ.ದತ್ತಾತ್ರೇಯ ಗಾದಾ ಅವರಿಗೆ ಸಲ್ಲಿಸಿ, ಭೂಮಾನಂದ ಚಿವರ ಹತ್ಯೆಯ ಕುರಿತು ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖೆ ನಡೆಸಬೇಕು, ಮೃತರ ಕುಟುಂಬಕ್ಕೆ ಸಂಪೂರ್ಣ ಭದ್ರತೆ ಒದಗಿಸಿ ಸೂಕ್ತ ಪರಿಹಾರ ಹಾಗೂ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗವನ್ನು ನೀಡಬೇಕು, ಕೊಲೆ ಮಾಡಿದ ಎಲ್ಲರನ್ನು ತಕ್ಷಣ ಬಂಧಿಸಿ, ಕಾನೂನು ಅಡಿಯಲ್ಲಿ ಶಿಕ್ಷೆಗೆ ಒಳಪಡಿಸಬೇಕು. ಪ್ರಕರಣದ ತನಿಖೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿ ನ್ಯಾಯ ದೊರಕಿಸಬೇಕು ಒತ್ತಾಯಿಸಲಾಯಿತು. ಬಿಎಸ್ಪಿ ತಾಲೂಕು ಅಧ್ಯಕ್ಷ ಶಂಕರ ಫುಲೆ, ಸಂಯೋಜಕರಾದ ಮಕುಬುಲ್ ಸಾಬ್, ದತ್ತು ಸುಠಾಣೆ, ಪ್ರಧಾನ ಕಾರ್ಯದರ್ಶಿ ರವಿ ಉದಾನೆ, ಉಪಾಧ್ಯಕ್ಷ ರಮೇಶ ರಾಠೋಡ, ಕಾರ್ಯದರ್ಶಿ ಮಹಾದೇವ ಗಾಯಕವಾಡ, ಪ್ರಮುಖರಾದ ಮಸ್ತಾನಸಾಬ ಲದಾಫ್, ಚಂದ್ರಶಿಲ ಗಾಯಕವಾಡ, ದಿಲೀಪ ಸಿರೋಳೆ, ಪ್ರಶಾಂತ ಗುಡ್ಡೆ, ಮಾರುತಿ ಮೇಕಾಲೆ ಇತರರಿದ್ದರು.