ವಾಡಿ: ಸಮರ್ಪಕ ಸೌಕರ್ಯಗಳಿಲ್ಲದೆ ಪಟ್ಟಣದ ಜನತೆ ಪರದಾಡುತ್ತಿದ್ದು, ಹೀಗಾಗಿ ಚರಂಡಿ, ರಸ್ತೆ, ಸ್ವಚ್ಛತೆ ಕಾರ್ಯಕ್ಕೆ ಪ್ರಥಮಾದ್ಯತೆ ನೀಡಬೇಕು ಎಂದು ಬಿಜೆಪಿ ವಾಡಿ ಟಕ ಅಧ್ಯಕ್ಷ ವೀರಣ್ಣ ಯಾರಿ ಒತ್ತಾಯಿಸಿದರು. ಈ ಕುರಿತು ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ಅವರಿಗೆ ಮನವಿಪತ್ರ ಸಲ್ಲಿಸಿದ ಅವರು, ಮಳೆಗಾಲದಲ್ಲಿ ರಸ್ತೆ, ಚರಂಡಿ ನೀರು ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನುಗ್ಗುವುದ ಸಾಮಾನ್ಯವಾಗಿದೆ. ಅದನ್ನು ತಡೆಯುವುದಕ್ಕೆ ಕ್ರಮ ಕೈಗೊಳ್ಳಬೇಕು. ಒಳ ಬಡಾವಣೆಗಳಲ್ಲಿ ಚರಂಡಿ ವ್ಯವಸ್ಥೆಯಿಲ್ಲದಿರುವುದರಿಂದ ಕೊಳಚೆ ನೀರು ರಸ್ತೆಗೆ ನುಗ್ಗುತ್ತಿವೆ. ಅಲ್ಲದೆ ದುರ್ವಾಸನೆಯಿಂದ ಜನರು ಪರದಾಡುವಂತಾಗಿದೆ. ಹೀಗಾಗಿ ಕೂಡಲೇ ಚರಂಡಿಗಳನ್ನು ಸ್ವಚ್ಛಗೊಳಿಸುವ ಕೆಲಸ ಆಗಬೇಕು. ಕೋಟ್ಯಂತರ ರೂ. ಖರ್ಚು ಮಾಡಿ ಶುದ್ಧ ಕುಡಿವ ನೀರಿನ ಟಕ ಸ್ಥಾಪನೆ ಮಾಡಿದ್ದು, ಸಮರ್ಪಕ ನಿರ್ವಹಣೆ ಇಲ್ಲದೆ ಹಾಳಾಗುತ್ತಿದೆ. ಕೂಡಲೇ ಗಮನಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಕಿಶನ್ ಜಾಧವ್ ಇದ್ದರು.