ಈ ವೇಳೆ ಮಾತನಾಡಿದ ಹೊಸಮನಿ, ಶಹಾಪುರ ತಾಲೂಕು ಹತ್ತಿಗೂಡುರ ಗ್ರಾಮದ ಸರ್ವೇ ನಂ.62/1/2/3/4/15 ಭೂ ಮಾಲಿಕರು ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಭೂಮಿ ನೀಡಿದ್ದು, ಇದನ್ನು ಜಿಲ್ಲಾಧಿಕಾರ ಅಧ್ಯತೆಯಲ್ಲಿ ಸಭೆ ನಡೆಸಿ ಭೂಮಿ ಹಂಚಿಕೆ ಮಾಡಬೇಕು. ಹತ್ತಿಗುಡೂರ, ಯಕ್ಕಿಂತಿ, ಅನವಾರ, ಕೊಂಗಂಡಿ, ತುಮಕೂರ, ಬೊಮ್ಮನಹಳ್ಳಿ, ಹೈಯ್ಯಾರ (ಕೆ), ಗೋಗಿ, ಕಾಡಂಗೇರಾ, ಹೋತಪೇಟ, ಐಕೂರ, ವಿವೂರ, ಹಸನಾಪೂರ, ರಸ್ತಾಪೂರ, ಮಾಲಹಳ್ಳಿ, ಟಿ. ವಡಗೇರಾ ಈ ಗ್ರಾಮದ ದಲಿತ ಕುಟುಂಬಗಳಿಗೆ ನಿವೇಶನ ವಸತಿ (ಮನೆಗಳು) ಮಂಜೂರು, ಸಿಸಿ ರಸ್ತೆ, ಚರಂಡಿ ನಿರ್ಮಾಣ ಮತ್ತು ಅಂಬೇಡ್ಕರ್ ಸಮುದಾಯ ಭವನ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.