ಸಂಗಮ ಕ್ಷೇತ್ರದಲ್ಲಿ ಮೂಲಸೌಕರ್ಯ ಕಲ್ಪಿಸಿ

ದೇವಲಗಾಣಗಾಪುರದ ಭೀಮಾ&ಅಮರ್ಜಾ ಸಂಗಮ ಕ್ಷೇತ್ರಕ್ಕೆ ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​ ಮಂಗಳವಾರ ಭೇಟಿ ನೀಡಿ ಸ್ವಚ್ಛತೆ, ಮೂಲಸೌಕರ್ಯ ಪರಿಶೀಲಿಸಿದರು. ಸಾಹಿತ್ಯ ಆಲದಕಟ್ಟಿ, ಸಂಜೀವಕುಮಾರ ದಾಸರ, ಶಂಕರ ರಾಠೋಡ್​ ಇತರರಿದ್ದರು.
ದೇವಲಗಾಣಗಾಪುರದ ಭೀಮಾ&ಅಮರ್ಜಾ ಸಂಗಮ ಕ್ಷೇತ್ರಕ್ಕೆ ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​ ಮಂಗಳವಾರ ಭೇಟಿ ನೀಡಿ ಸ್ವಚ್ಛತೆ, ಮೂಲಸೌಕರ್ಯ ಪರಿಶೀಲಿಸಿದರು. ಸಾಹಿತ್ಯ ಆಲದಕಟ್ಟಿ, ಸಂಜೀವಕುಮಾರ ದಾಸರ, ಶಂಕರ ರಾಠೋಡ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​ ತಾಕೀತು
  • ಗಾಣಗಾಪುರದಲ್ಲಿ ವಿವಿಧ ಕಾಮಗಾರಿ ಪರಿಶೀಲನೆ
ಅಫಜಲಪುರ: ದೇವಲಗಾಣಗಾಪುರದ ಸಂಗಮ ಕ್ಷೇತ್ರಕ್ಕೆ ಪ್ರತಿದಿನ ಸಾವಿರಾರು ಭಕ್ತರು ದರ್ಶನ ಮತ್ತು ಪುಣ್ಯಸ್ನಾನಕ್ಕಾಗಿ ಆಗಮಿಸುತ್ತಾರೆ. ಅವರಿಗೆ ಕುಡಿವ ನೀರು, ಶೌಚಗೃಹ, ವಾಹನ ನಿಲುಗಡೆ ಹಾಗೂ ಸ್ವಚ್ಛತಾ ವ್ಯವಸ್ಥೆಗಳು ಸಮರ್ಪಕವಾಗಿ ದೊರೆಯಬೇಕು ಎಂದು ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​ ಸೂಚನೆ ನೀಡಿದರು.
ದೇವಲಗಾಣಗಾಪುರದ ಸಂಗಮ ಕ್ಷೇತ್ರಕ್ಕೆ ಮಂಗಳವಾರ ಭೇಟಿ ನೀಡಿ ಅಗತ್ಯ ಸೌಕರ್ಯ ಪರಿಶೀಲಿಸಿದ ಅವರು, ಅಗತ್ಯವಿದ್ದರೆ ಹೆಚ್ಚುವರಿ ಸಿಬ್ಬಂದಿ ಹಾಗೂ ಯಂತ್ರೋಪಕರಣಗಳನ್ನು ಬಳಸಿಕೊಂಡು ಸ್ವಚ್ಛತೆ ಕಾರ್ಯ ನಡೆಸಿ. ೂಳನೂರ ಬ್ರಿಡ್ಜ್​ ಕಂ ಬ್ಯಾರೇಜ್​ ಕಾಮಗಾರಿ ಒಂದು ತಿಂಗಳೊಳಗೆ ಪೂರ್ಣಗೊಳಿಸಬೇಕು. ಗಾಣಗಾಪುರ ೇತ್ರದ ಸುತ್ತಮುತ್ತ ಹಾಗೂ ಪ್ರಮುಖ ರಸ್ತೆ ಬದಿಗಳಲ್ಲಿ ಕಂಡುಬರುವ ಅನಧಿಕೃತ ಕಟ್ಟಡ ಮತ್ತು ಒತ್ತುವರಿಗಳನ್ನು ಗುರುತಿಸಿ ತೆರವುಗೊಳಿಸುವ ಕಾರ್ಯ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.
ದೇವಸ್ಥಾನದ ಆಡಳಿತಾಧಿಕಾರಿ ಶಿವಕಾಂತಮ್ಮ ಪ್ರತಿಕ್ರಿಯಿಸಿ, ಅಧಿಕ ಮಾಸದ ಹಿನ್ನೆಲೆ ಭಕ್ತರ ಸಂಖ್ಯೆ ಹೆಚ್ಚಿದ್ದು, ನಿರ್ವಹಣೆಯಲ್ಲಿ ಒತ್ತಡ ಉಂಟಾಗಿದೆ. ಆದರೂ ನಿಗದಿತ ಅವಧಿಯೊಳಗೆ ಸಂಗಮ ಪ್ರದೇಶ ಸಂಪೂರ್ಣ ಸ್ವಚ್ಛಗೊಳಿಸಲಾಗುವುದು ಎಂದು ತಿಳಿಸಿದರು.
ಸಹಾಯಕ ಆಯುಕ್ತೆ ಸಾಹಿತ್ಯ ಆಲದಕಟ್ಟಿ, ತಹಸೀಲ್ದಾರ್​ ಸಂಜೀವಕುಮಾರ ದಾಸರ, ತಾಪಂ ಇಒ ಶಂಕರ ರಾಠೋಡ್​, ಲೋಕೋಪಯೋಗಿ ಇಲಾಖೆ ಎಇಇ ಲ್ಮಕಾಂತ ಬಿರಾದಾರ, ಸಣ್ಣ ನೀರಾವರಿ ಇಲಾಖೆ ಎಇಇ ಶಾಂತಪ್ಪ ಜಾಧವ್​, ಪಿಡಿಒ ಅನಸೂಯ ಅಷ್ಟಗಿ, ಪ್ರಮುಖರಾದ ಶೇಖರ ಮಾಗ, ಶಿವಕುಮಾರ ಸ್ವಾಮಿ, ಸಂತೋಷ ಸಜ್ಜನ್​, ಸಂತೋಷಕುಮಾರ ಪಾಟೀಲ್​, ಸಂತೋಷ ಪಾಟೀಲ್​, ಫಕ್ರುದ್ದಿನ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net