ಇಲ್ಲಿಗೆ ಬರುವ ಭಕ್ತರಿಗೆ ಸರಿಯಾದ ವಸತಿ ವ್ಯವಸ್ಥೆ ಇಲ್ಲ. ಕಳೆದ ಹಲವು ವರ್ಷಗಳಿಂದ ದೇವಸ್ಥಾನದ ಕಟ್ಟಡ ಅಪೂರ್ಣಗೊಂಡಿದೆ. ಭಕ್ತರ ಅನುಕೂಲಕ್ಕೆ ದೊಡ್ಡದಾದ ಕಲ್ಯಾಣ ಮಂಟಪ ನಿರ್ಮಾಣದ ಅಗತ್ಯವಿದೆ. ಬಂದಂತಹ ಭಕ್ತರಿಗೆ ಸ್ನಾನದ ಕೋಣೆ, ನೀರಿನ ವ್ಯವಸ್ಥೆ, ಮೊಕ್ಕಾಂ ಬಸ್ಗಳ ವ್ಯವಸ್ಥೆ ಇರುವುದಿಲ್ಲ. ಅಲ್ಲದೆ ಈ ದೇವಸ್ಥಾನ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿದ್ದು, ಲಕ್ಷಾಂತರ ಹಣ ಕೂಡ ಸಂಗ್ರಹವಾಗುತ್ತದೆ. ಆದರೆ ದೇವಸ್ಥಾನ ಮಾತ್ರ ಅಭಿವೃದ್ಧಿಪಡಿಸುತ್ತಿಲ್ಲ. ಹೀಗಾಗಿ ಕೂಡಲೇ ದೇವಸ್ಥಾನಕ್ಕೆ ವಿಶೇಷ ಅನುದಾನ ನೀಡಿ ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂದು ಅವರು ಮನವಿ ಮಾಡಿದರು.