ಗುಣಮಟ್ಟದ ಶಿಕ್ಷಣದ ಜತೆ ಸಂಸ್ಕಾರ ನೀಡಿ

ವಡಗೇರಾ ತಾಲೂಕಿನ ಉಳ್ಳೆಸೂಗೂರನಲ್ಲಿ ನಿರ್ಮಾಣವಾದ ಜ್ಞಾನಾಮೃತ ಶಾಲೆಯ ನೂತನ ಕಟ್ಟಡವನ್ನು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯರು ಉದ್ಘಾಟಿಸಿ ಮಾತನಾಡಿದರು. ಮಹೇಶರಡ್ಡಿ ಮುದ್ನಾಳ್​, ಸೂಗೂರೇಶ್ವರ ಸ್ವಾಮೀಜಿ, ರೇಣುಕಾ ಶಾಂತಮಲ್ಲ ಶಿವಾಚಾರ್ಯ, ದೇವತ್ಕಲ್​ನ ಸಾಬಣ್ಣ ಪೂಜಾರಿ, ಶ್ರೀನಿವಾಸರಡ್ಡಿ ಪಾಟೀಲ್​ ಚನ್ನೂರ, ಸಿದ್ದಣ್ಣಗೌಡ ಕಾಡಂನೋರ, ಬಸ್ಸುಗೌಡ ಬಿಳ್ಹಾರ, ದಂಡಪ್ಪಗೌಡ ಉಳ್ಳೆಸೂಗೂರ, ವಿಶ್ವನಾಥರಡ್ಡಿ ನಾಯ್ಕಲ್​ ಇತರರಿದ್ದರು.
ವಡಗೇರಾ ತಾಲೂಕಿನ ಉಳ್ಳೆಸೂಗೂರನಲ್ಲಿ ನಿರ್ಮಾಣವಾದ ಜ್ಞಾನಾಮೃತ ಶಾಲೆಯ ನೂತನ ಕಟ್ಟಡವನ್ನು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯರು ಉದ್ಘಾಟಿಸಿ ಮಾತನಾಡಿದರು. ಮಹೇಶರಡ್ಡಿ ಮುದ್ನಾಳ್​, ಸೂಗೂರೇಶ್ವರ ಸ್ವಾಮೀಜಿ, ರೇಣುಕಾ ಶಾಂತಮಲ್ಲ ಶಿವಾಚಾರ್ಯ, ದೇವತ್ಕಲ್​ನ ಸಾಬಣ್ಣ ಪೂಜಾರಿ, ಶ್ರೀನಿವಾಸರಡ್ಡಿ ಪಾಟೀಲ್​ ಚನ್ನೂರ, ಸಿದ್ದಣ್ಣಗೌಡ ಕಾಡಂನೋರ, ಬಸ್ಸುಗೌಡ ಬಿಳ್ಹಾರ, ದಂಡಪ್ಪಗೌಡ ಉಳ್ಳೆಸೂಗೂರ, ವಿಶ್ವನಾಥರಡ್ಡಿ ನಾಯ್ಕಲ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ಸಲಹೆ
ವಡಗೇರಾ: ಶಿಕ್ಷರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ನೀಡಿದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ ಎಂದು ಶ್ರೀಶೈಲನ 1008 ಜಗದ್ಗುರು ಶ್ರೀ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾ ಸ್ವಾಮೀಜಿ ನುಡಿದರು.
ತಾಲೂಕಿನ ಉಳ್ಳೆಸೂಗೂರ ಗ್ರಾಮದಲ್ಲಿ ಶುಕ್ರವಾರ ಜ್ಞಾನಾಮೃತ ಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಇತ್ತೀಚಿನ ದಿನಗಳಲ್ಲಿ ಶಿಣಕ್ಕೆ ಹೆಚ್ಚಿನ ಮೌಲ್ಯವಿದೆ. ಗ್ರಾಮೀಣ ಭಾಗದ ಪಾಲಕರು ತಮ್ಮಬದುಕಿನಲ್ಲಿ ಎಂತದೆ ಸಂಕಷ್ಟ ಎದುರಾದರೂ ಮಕ್ಕಳಿಗೆ ಗುಣಮಟ್ಟದ ಮತ್ತು ಮೌಲ್ಯಯುತ ಶಿಕ್ಷಣ ಒದಗಿಸುವುದರ ಜತೆಗೆ ಹಾಗೂ ಮಾನವೀಯ ಮೌಲ್ಯವನ್ನು ಬೆಳೆಸಿದಾಗ ಮಾತ್ರ ಅವರ ಭವಿಷ್ಯ ಉಜ್ವಲವಾಗಲು ಸಾಧ್ಯ ಎಂದರು.
ಶೈಕ್ಷಣಿಕವಾಗಿ ಗಿರಿ ಜಿಲ್ಲೆ ಸಾಧನೆ ಮಾಡಬೇಕಾದದ್ದು ಬಹಳಷ್ಟಿದೆ. ಈ ಭಾಗದಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಾಗಬೇಕು, ಶಿಕ್ಷಣದಿಂದ ಮಾತ್ರ ನಾವು ಎಲ್ಲ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು.
ಇಲ್ಲಿನ ಜನರು ಹೆಚ್ಚು ಕೃಷಿ ಅವಲಂಬಿಸಿ ಜೀವನ ಸಾಗಿಸುತ್ತಿದ್ದು, ಮಾನವ ಸಂಪನ್ಮೂಲಕ್ಕೆ ಯಾವುದೇ ಕೊರತೆ ಇಲ್ಲ. ಏಕೆಂದರೆ ಈ ವರ್ಷ ನಡೆದ ದೇಶದ ಪ್ರಮುಖ ಐಎಎಸ್​ ಪರೀೆಯಲ್ಲಿ ಜಿಲ್ಲೆಯ ನಾಲ್ಕು ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಅವರ ಸೇವೆ ಬರುವ ದಿನಗಳಲ್ಲಿ ಈ ಭಾಗಕ್ಕೆ ಲಭಿಸಲಿ ಎಂದು ಹಾರೈಸಿದರು.
ನಾಡಿನ ಪ್ರಗತಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರವಾಗಿದೆ ಈ ಹಿಂದೆ ದೇಶದಲ್ಲಿ ಮಠ&ಮಾನ್ಯಗಳು ಶಿಕ್ಷಣದ ಮೂಲಕ ವಿದ್ಯಾರ್ಥಿಗಳಲ್ಲಿ ನೈತಿಕ ಶಿಕ್ಷಣ ನೀಡುವುದರ ಜತೆಗೆ ಅವರಲ್ಲಿ ಆತ್ಮವಿಶ್ವಾಸದ ಸ್ವಾವಲಂಬನೆ ಬದುಕು ರೂಪಿಸಿಕೊಳ್ಳುವಂತೆ ಗಮನ ನೀಡಲಾಗಿತ್ತು. ಆ ದಿಶೆಯಲ್ಲಿ ಈ ಭಾಗದಲ್ಲಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯವರು ಹಾಗೂ ಶಿಕ್ಷಕರ ತಂಡ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿ ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಅವರನ್ನು ಪ್ರೊತ್ಸಾಹಿಸಬೇಕು ಎಂದು ಹೇಳಿದರು.
ಜಗತ್ತಿನಲ್ಲಿ ಎಲ್ಲ ಸಂಪತ್ತುಗಳಲ್ಲಿ ವಿದ್ಯಾ ಸಂಪತ್ತು ಶ್ರೇಷ್ಠವಾದದ್ದು, ಕಾರಣ ಅದು ಎಲ್ಲ ದಾನಗಳಲ್ಲಿಯೂ ಕೂಡ ವಿದ್ಯಾದಾನ ಉನ್ನತ ಸ್ಥಾನ ಪಡೆದಿದೆ, ನಾವೂ ಆಧ್ಯಾತ್ಮಿಕ ಚಟುವಟಿಕೆಗಳಿಗೆ ಹಾಗೂ ಕೌಟುಂಬಿಕ ಕಾರ್ಯಗಳಿಗೆ ನೀಡುವಷ್ಟು ಗೌರವ ಶಾಲೆಗಳಿಗೆ ನೀಡಬೇಕಾಗಿರುವುದು ಬಹಳ ಅಗತ್ಯವಾಗಿದೆ ಎಂದರು.
ಗ್ರಾಮೀಣ ಭಾಗದಲ್ಲಿ ಒಂದು ಖಾಸಗಿ ಶಿಕ್ಷಣ ಸಂಸ್ಥೆ ನಡೆಸುವ ಕಾರ್ಯ ಸವಾಲಿನ ಕೆಲಸವಾಗಿದ್ದು ಅದನ್ನು ಗೌರವಯುತವಾಗಿ ಸಮಾಜಕ್ಕೆ ನೀಡುವ ಸೇವೆ ಎಂದು ಸ್ವೀಕರಿಸುವ ಪಂಪನಗೌಡ ಅವರ ತಂಡ ಯಶಸ್ಸು ಕಾಣಲಿ ಎಂದು ಹಾರೈಸಿದರು.
ಬಿಜೆಪಿ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ ಮಾತನಾಡಿ, ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಬೇರುರಿರುವ ಮೂಢನಂಬಿಕೆ ತೊಲಗಿಸಲು ಸಾಧ್ಯ. ಹಳ್ಳಿಯಲ್ಲಿಯೇ ಶಾಲೆ ಆರಂಭ ಮಾಡಿರುವುದರಿಂದ ಸುತ್ತ&ಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಅನುಕೂಲವಾಗುವ ಜತೆಗೆ ಉತ್ತಮ ಭದ್ರತೆ ಒದಗಿಸಿದಂತಾಗುತ್ತದೆ ಎಂದು ಹೇಳಿದರು.
ಶಹಾಪುರ ಹಿರೇಮಠದ ಸೂಗೂರೇಶ್ವರ ಸ್ವಾಮಿಜಿ ಮತನಾಡಿದರು.
ಈ ವೇಳೆ ಶ್ರೀ ರೇಣುಕಾ ಶಾಂತಮಲ್ಲ ಶಿವಾಚಾರ್ಯ, ದೇವತ್ಕನ ಸಾಬಣ್ಣ ಪೂಜಾರಿ, ಶ್ರೀನಿವಾಸರಡ್ಡಿ ಪಾಟೀಲ್​ ಚನ್ನೂರ, ಸಿದ್ದಣ್ಣಗೌಡ ಕಾಡಂನೋರ, ಬಸ್ಸುಗೌಡ ಬಿಳ್ಹಾರ, ದಂಡಪ್ಪಗೌಡ ಉಳ್ಳೆಸೂಗೂರ, ವಿಶ್ವನಾಥರಡ್ಡಿ ನಾಯ್ಕಲ್​, ರುದ್ರಗೌಡ ದೇವರಗುಡ್ಡ, ಬಸವಂತರಡ್ಡಿ ಮಲ್ಹಾರ, ಸದಾಶಿವಪ್ಪಗೌಡ ರೊಟ್ನಡಗಿ, ಬಸರಾಜಪ್ಪಗೌಡ ದಳಪತಿ ಮುಸ್ಟೂರ, ಡಾ. ರಾಹುಲ್​ ನಾಯ್ಕೋಡಿ, ಡಾ. ಶಿವಪುತ್ರರಡ್ಡಿ, ಶಿವುಗೌಡ ಕೊಂಗಂಡಿ, ಮಾಣಿಕರಡ್ಡಿ ಕುರಕುಂದಿ, ಸಿದ್ದಲಿಂಗರಡ್ಡಿ ಕೌಳೂರ, ಶಿಕ್ಷಣ ಸಂಸ್ಥೆ ಗೌರವಾಧ್ಯಕ್ಷ ಪಂಪಣ್ಣಗೌಡ ಶಾಂತವೀರ, ಬಸರಾಜಪ್ಪಗೌಡ ಗುರುಸಣಗಿ, ಪ್ರಮೋದ ಕುಲಕರ್ಣಿ, ಮಹಿಪಾಲರಡ್ಡಿ ಇತರರಿದ್ದರು.
ನಿವೃತ್ತ ಬ್ಯಾಂಕ್​ ಅಧಿಕಾರಿ ಬಾಲಪ್ಪ ಆರಂಭದಲ್ಲಿ ಸಂವಿಧಾನ ಪಿಠೀಕೆ ವಾಚಿಸಿದರು. ಶಂಕರ ಸೋನಾರ್​ ನಿರೂಪಿಸಿ, ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net