ಕಕ್ಕೇರಾಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಿ

ಕಕ್ಕೇರಾ ಪಟ್ಟಣಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಅಂಬೇಡ್ಕರ್​ ಸ್ವಾಭಿಮಾನಿ ಸೇನೆ ತಾಲೂಕು ಸಮಿತಿ ಪದಾಧಿಕಾರಿಗಳು ಪುರಸಭೆ ಮುಖ್ಯಾಧಿಕಾರಿಗೆ ಮನವಿಪತ್ರ ಸಲ್ಲಿಸಿದರು. ಬಸವರಾಜ ಹೊಸಮನಿ, ಸಂಗಣ್ಣ ಅಡಗಲ್​, ತಿಪ್ಪಣ್ಣ ಜಂಪಾ, ಅಯೂಬ್​, ನಾಗರಾಜ ಚನ್ನಪಟ್ಟಣ ಇತರರಿದ್ದರು.
ಕಕ್ಕೇರಾ ಪಟ್ಟಣಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಅಂಬೇಡ್ಕರ್​ ಸ್ವಾಭಿಮಾನಿ ಸೇನೆ ತಾಲೂಕು ಸಮಿತಿ ಪದಾಧಿಕಾರಿಗಳು ಪುರಸಭೆ ಮುಖ್ಯಾಧಿಕಾರಿಗೆ ಮನವಿಪತ್ರ ಸಲ್ಲಿಸಿದರು. ಬಸವರಾಜ ಹೊಸಮನಿ, ಸಂಗಣ್ಣ ಅಡಗಲ್​, ತಿಪ್ಪಣ್ಣ ಜಂಪಾ, ಅಯೂಬ್​, ನಾಗರಾಜ ಚನ್ನಪಟ್ಟಣ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಿಎಸ್​ಎಸ್​ ತಾಲೂಕು ಪದಾಧಿಕಾರಿಗಳ ಆಗ್ರಹ
  • ಪುರಸಭೆ ಮುಖ್ಯಾಧಿಕಾರಿಗೆ ಮನವಿ
ಕಕ್ಕೇರಾ: ಪಟ್ಟಣದ ಸಾರ್ವಜನಿಕ ಸ್ಮಶಾನ ಸ್ವಚ್ಛತೆ ಹಾಗೂ ಕಂಪೌಂಡ್​ ನಿರ್ಮಾಣ, ವಾರ್ಡ್​ 5 ಮತ್ತು 7ರಲ್ಲಿ ಶೌಚಗೃಹಗಳ ದುರಸ್ತಿ ಸೇರಿ ಮೂಲಭೂತ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಅಂಬೇಡ್ಕರ್​ ಸ್ವಾಭಿಮಾನಿ ಸೇನೆ ತಾಲೂಕು ಸಮಿತಿ ಪದಾಧಿಕಾರಿಗಳು ಸೋಮವಾರ ಪುರಸಭೆ ಮುಖ್ಯಾಧಿಕಾರಿಗೆ ಮನವಿಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸೇನೆ ಪದಾಧಿಕಾರಿಗಳು, ಅಲ್ಲದೆ ಅಂಬೇಡ್ಕರ್​ ಪುತ್ಥಳಿ ಬಳಿ ಇರುವ ಬಾವಿ ಸ್ವಚ್ಛಗೊಳಿಸಬೇಕು ಎಂದು ಆಗ್ರಹಿಸಿದರು.
ಪಟ್ಟಣದಲ್ಲಿರುವ ಸರ್ವೆ ನಂ.256ರಲ್ಲಿ ಸ್ಮಶಾನಕ್ಕೆ ಕಾಯ್ದಿರಿಸಿದ ಒಂದು ಎಕರೆ ಜಾಗದಲ್ಲಿ ಸ್ವಚ್ಛತೆ ಮಾಡಿ ಮತ್ತು ಕಂಪೌಂಡ್​ ನಿರ್ಮಾಣ ಮಾಡಬೇಕು. ವಾರ್ಡ್​ 5ರ ಗುರಿಕಾರ ಓಣಿ ಮತ್ತು ವಾರ್ಡ್​ 7ರ ಅಂಬೇಡ್ಕರ್​ ನಗರದಲ್ಲಿ ಕಳೆದ ಒಂದು ವರ್ಷದಿಂದ ಶೌಚಗೃಹಗಳ ದುರಸ್ತಿ ಇಲ್ಲದೇ ಮಹಿಳೆಯರು ಪರದಾಡುವಂತಾಗಿದೆ. ಮತ್ತು ಅಂಬೇಡ್ಕರ್​ ಪುತ್ಥಳಿ ಬಳಿ ಇರುವ ಬಾವಿ ಸ್ವಚ್ಛಗೊಳಿಸಬೇಕು ಎಂದು ಒತ್ತಾಯಿಸಿದರು.
ನಮ್ಮ ಸಮಸ್ಯೆಗಳನ್ನು ಕೂಡಲೇ ಈಡೇರಿಸಬೇಕು ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಸಾಮೂಹಿಕ ಸಂಟನೆಗಳು, ರೈತ ಸಂಟನೆಗಳು, ನೂರಾರು ಮಹಿಳೆಯರೊಂದಿಗೆ ಪುರಸಭೆ ಎದುರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಈ ವೇಳೆ ಬಸವರಾಜ ಹೊಸಮನಿ, ಸಂಗಣ್ಣ ಸುಬೇದಾರ್​, ನಿಂಗಪ್ಪ ಚಲುವಾದಿ, ಮಲ್ಲಪ್ಪ ಬಂಢಾರಿ, ಅಯೂಬ್​ ಸರ್ಕವಸ್​, ಪರಮಣ್ಣ ಭಜಂತ್ರಿ, ವೆಂಕಟೇಶ, ಭೀಮರಾಯ ದಿವಾಕರ್​, ಇಮಾಮಸಾಬ, ತಿಪ್ಪಣ್ಣ ಜಂಪಾ, ಜಟ್ಟೆಪ್ಪ ದೇವರಮನಿ, ಅಕ್ಬರ್​ ದಖನಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net