ಮಹಿಳೆ, ವೈದ್ಯರಿಗೆ ಸೂಕ್ತ ರಕ್ಷಣೆ ಒದಗಿಸಿ

: ಅಭಯ ದಿನದ ನಿಮಿತ್ತ  ಬಸವಕಲ್ಯಾಣ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ  ಸೂಸೈಟಿ ನೇತೃತ್ವದಲ್ಲಿ ಬಸವಕಲ್ಯಾಣದಲ್ಲಿ ಭಾನುವಾರ ಆಯೋಜಿಸಿದ್ದ ಜಾಗೃತಿ ರ್ಯಾಲಿಯಲ್ಲಿ ಬಿಕೆಒಜಿಎಸ್​ ಅಧ್ಯಕ್ಷೆ ಡಾ.ಶಾಂತಾ ದುರ್ಗೆ ಮಾತನಾಡಿದರು. ಡಾ.ಮಹೇಶ ಪಾಟೀಲ್​, ಡಾ.ಸುಶೀಲಾ ಹೊಳಕುಂದೆ, ಜ್ಯೋತಿ ಹಂಚಾಟೆ, ಡಾ.ಜಿ.ಎಸ್​.ಭುರಳೆ, ಡಾ.ಬಸವರಾಜ ಸ್ವಾಮಿ, ಉಮೇಶ ಶೀಲವಂತ ಇತರರಿದ್ದರು.
: ಅಭಯ ದಿನದ ನಿಮಿತ್ತ ಬಸವಕಲ್ಯಾಣ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸೂಸೈಟಿ ನೇತೃತ್ವದಲ್ಲಿ ಬಸವಕಲ್ಯಾಣದಲ್ಲಿ ಭಾನುವಾರ ಆಯೋಜಿಸಿದ್ದ ಜಾಗೃತಿ ರ್ಯಾಲಿಯಲ್ಲಿ ಬಿಕೆಒಜಿಎಸ್​ ಅಧ್ಯಕ್ಷೆ ಡಾ.ಶಾಂತಾ ದುರ್ಗೆ ಮಾತನಾಡಿದರು. ಡಾ.ಮಹೇಶ ಪಾಟೀಲ್​, ಡಾ.ಸುಶೀಲಾ ಹೊಳಕುಂದೆ, ಜ್ಯೋತಿ ಹಂಚಾಟೆ, ಡಾ.ಜಿ.ಎಸ್​.ಭುರಳೆ, ಡಾ.ಬಸವರಾಜ ಸ್ವಾಮಿ, ಉಮೇಶ ಶೀಲವಂತ ಇತರರಿದ್ದರು.
Published on
ಬಸವಕಲ್ಯಾಣ: ಮಹಿಳೆಯರ ಮತ್ತು ವೈದ್ಯರ ಮೇಲಿನ ದೌರ್ಜನ್ಯದ ವಿರುದ್ಧ ಜಾಗೃತಿ ಮೂಡಿಸಲು ಹಾಗೂ ಅವರಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಒತ್ತಾಯಿಸಿ ಬಸವಕಲ್ಯಾಣ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸೂಸೈಟಿ(ಬಿಕೆಒಜಿಎಸ್​) ನೇತೃತ್ವದಲ್ಲಿ ನಗರದಲ್ಲಿ ಭಾನುವಾರ ಜಾಗೃತಿ ರ್ಯಾಲಿ ನಡೆಸಲಾಯಿತು.
ಅಭಯ ದಿನದ ನಿಮಿತ್ತ ನಗರದ ಅಂಬೇಡ್ಕರ್​ ವೃತ್ತದಿಂದ ಮುಖ್ಯರಸ್ತೆ ಮಾರ್ಗವಾಗಿ ಬಸವೇಶ್ವರ ವೃತ್ತದವರೆಗೆ ರ್ಯಾಲಿ ನಡೆಸಿ ಘೋಷಣೆಗಳ ಮೂಲಕ ಜಾಗೃತಿ ಮೂಡಿಸಲಾಯಿತು. ರ್ಯಾಲಿಯಲ್ಲಿ ಬಿಕೆಒಜಿಎಸ್​ ಅಧ್ಯಕ್ಷೆ ಡಾ.ಶಾಂತಾ ದುರ್ಗೆ, ಕಾರ್ಯದರ್ಶಿ ಡಾ.ಪ್ರಿಯಾಂಕಾ ವರವಟ್ಟೆ, ಭಾರತೀಯ ವೈದ್ಯಕಿಯ ಸಂಘ. ಆಯುಷ್​ ಅಸೋಸಿಯೇಷನ್​, ಸ್ಕೌಟ್ಸ್​ ಸಂಸ್ಥೆ, ರೋಟರಿ ಕ್ಲಬ್​, ಬಸವೇಶ್ವರ ಪ್ರೌಢಶಾಲೆ ಹಾಗೂ ಸಂಕಲ್ಪ ಕಾಲೇಜಿನ ವೈದ್ಯರು, ಸಂಘ-& ಸಂಸ್ಥೆ ಪದಾಧಿಕಾರಿಗಳು, ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ರ್ಯಾಲಿಗೆ ಚಾಲನೆ ನೀಡಿದ ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತ ಡಾ.ಮಹೇಶ್​ ಪಾಟೀಲ್​ ಮಾತನಾಡಿ, ವೈದ್ಯೋ ನಾರಾಯಣೋ ಹರಿ@ ಎಂದರೆ ವೈದ್ಯರು ಸಾಕ್ಷಾತ್​ ಭಗವಂತನ ಸ್ವರೂಪ ಎಂರ್ಬಥವಿದೆ. ರೋಗಿಗಳ ನೋವನ್ನು ನಿವಾರಿಸಿ ಜೀವ ಉಳಿಸುವ ವೈದ್ಯರನ್ನು ನಮ್ಮ ದೇಶದಲ್ಲಿ ದೇವರಿಗೆ ಸಮಾನವಾಗಿ ಕಾಣಲಾಗುತ್ತದೆ. ಸಮಾಜದಲ್ಲಿ ವೈದ್ಯರು ಮತ್ತು ಮಹಿಳೆಯರ ಸುರಕ್ಷತೆ ಅತ್ಯಂತ ಜರೂರಾಗಿದೆ ಎಂದು ಹೇಳಿದರು.
ಬಿಕೆಒಜಿಎಸ್​ ಅಧ್ಯಕ್ಷೆ ಡಾ.ಶಾಂತಾ ದುರ್ಗೆ ಮಾತನಾಡಿ, ಮಹಿಳೆಯರ ಮೇಲಿನ ದೌರ್ಜನ್ಯಗಳು ಸ್ವಾಸ್ಥ$್ಯಸಮಾಜಕ್ಕೆ ಮಾರಕವಾಗಿವೆ. ಆರೋಗ್ಯವಂತ ಸಮಾಜದ ನಿಮಾರ್ಣಕ್ಕಾಗಿ ವೈದ್ಯರು ಹಾಗೂ ಮಹಿಳಾ ಆರೋಗ್ಯ ಕಾರ್ಯಕರ್ತರಿಗೆ ಸಾಮಾಜಿಕ ಭದ್ರತೆ ಸಿಗಬೇಕು ಎಂದರು.
ನಿವೃತ್ತ ಟಿಎಚ್​ಒ ಡಾ.ಜಿ.ಎಸ್​.ಭುರಳೆ ಮಾತನಾಡಿ, ವೈದ್ಯರು ಮತ್ತು ವಿಶೇಷವಾಗಿ ಮಹಿಳಾ ವೈದ್ಯರಿಗೆ, ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಸಿಬ್ಬಂದಿಗೆ ಆಸ್ಪತ್ರೆಗಳಲ್ಲಿ ಸುರಕ್ಷಿತ ಕೆಲಸದ ವಾತಾವರಣವನ್ನು ನಿರ್ಮಿಸುವುದು ಅವಶ್ಯಕ ಎಂದು ಹೇಳಿದರು.
ಸಿಪಿಐ ಅಲಿಸಾಬ್​, ಅನುಭವ ಮಂಟಪದ ಕಾರ್ಯದರ್ಶಿ ಡಾ. ಎಸ್​.ಬಿ.ದುರ್ಗೆ, ನಿವೃತ್ತ ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ.ಸುಶೀಲಾ ಹೊಳಕುಂದೆ, ನಿವೃತ್ತ ಟಿಎಚ್​ಒ ಡಾ.ವಿ.ಎಸ್​.ಮಠಪತಿ, ಐಎಂಎ ಕಾರ್ಯದರ್ಶಿ ಡಾ.ಶಿವರಾಜ್​ ಮಾಲಿಪಾಟೀಲ್​, ಡಾ.ಬಸವರಾಜ್​ ಸ್ವಾಮಿ, ಉಮೇಶ ಶೀಲವಂತ, ಡಾ.ಜ್ಯೋತಿ ಹಂಚಾಟೆ, ಡಾ.ದೀಪಾ ಹೊಳಕುಂದೆ, ಡಾ.ಬಬಿತಾ ಬಿರಾದಾರ್​, ಡಾ.ನಂದಿನಿ ಮಾಲಿಪಾಟೀಲ್​ ಹಾಗೂ ಸ್ಕೌಟ್ಸ್​ ತಾಲೂಕು ಕಾರ್ಯದರ್ಶಿ ಅನಿಲ್​ ಶಾಸ್ತ್ರಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net