ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ಸೌಲಭ್ಯ ಹಾಗೂ ವಸತಿ ನಿಲಯ ಪ್ರಾರಂಭಿಸುವಂತೆ ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಔರಾದ್ ಪಾಲಿಟೆಕ್ನಿಕ್ ಕಾಲೇಜು ಹತ್ತಿರ ಅಂತಾರಾಜ್ಯ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ಮಾಡಿದರು. ಪವನ ಕುಂಬಾರ, ತುಕಾರಾಮ ಭೋಸ್ಲೆ, ನಾಗರಾಜ ಸುಲ್ತಾನಪುರ, ಅನೀಲ ಮೇತ್ರೆ, ಕಲ್ಲೇಶ ಬಿರಾದಾರ, ಸುರೇಶ ಮರತುಳೆ, ಸಂಗಮೇಶ ದ್ಯಾಡೆ, ಪ್ರಶಾಂತ ಮೇತ್ರೆ, ಮಾರುತಿ ಉದಗಿರೆ, ಪೂಜಾ , ಕಾವೇರಿ ಇತರರಿದ್ದರು.
ಔರಾದ್ : ತಾಲೂಕಿನ ವಿವಿಧ ಗ್ರಾಮಗಳಿಂದ ಬರುವ ವಿದ್ಯಾರ್ಥಿಗಳಿಗೆ ಸಮರ್ಪಕ ಸಾರಿಗೆ ಸೌಲಭ್ಯ ಹಾಗೂ ವಸತಿ ನಿಲಯ ಪ್ರಾರಂಭಿಸುವಂತೆ ಒತ್ತಾಯಿಸಿ ಎಬಿವಿಪಿ ತಾಲೂಕು ಶಾಖೆಯಿಂದ ಸೋಮವಾರ ಪಾಲಿಟೆಕ್ನಿಕ್ ಕಾಲೇಜು ಹತ್ತಿರ ಅಂತಾರಾಜ್ಯ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ಮಾಡಲಾಯಿತು.
ಅನೇಕ ಗ್ರಾಮಗಳಿಂದ ಹಾಗೂ ಶಾಲಾ&ಕಾಲೇಜುಗಳ ಅವಧಿ ವೇಳೆ ಸಮರ್ಪಕವಾಗಿ ಬಸ್ ಸೌಲಭ್ಯ ಇಲ್ಲದ ತೊಂದರೆ ಅನುಭವಿಸುತ್ತಿದ್ದಾರೆ. ಪಟ್ಟಣದ ಬಸ್ ನಿಲ್ದಾಣದಿಂದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸುಮಾರು 3 ಕಿಮೀ ದೂರವಿದ್ದು ಔರಾದ್& -ಬೀದರ್ ಮಾರ್ಗ ಹೊರಡುವ ಎಲ್ಲ ಬಸ್ಸುಗಳು ನಿಲ್ಲಿಸಿ ವಿದ್ಯಾರ್ಥಿಗಳಿಗೆ ಅನುವು ಮಾಡಿ ಕೊಡಬೇಕು ಹಾಗೂ ಕಾಲೇಜು ಆವರಣದಲ್ಲಿರುವ ಬಿಸಿಎಂ ವಸತಿ ನಿಲಯವು ಸುಮಾರು ಒಂದು ವರ್ಷಗಳಿಂದ ಪ್ರಾರಂಭ ಮಾಡದೆ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದ್ದು, ವಸತಿ ನಿಲಯ ಪ್ರಾರಂಭಿಸಬೇಕು ಎಂದು ಎಬಿವಿಪಿ ವಿಭಾಗ ಸಂಚಾಲಕ ಪವನ ಕುಂಬಾರ ಆಗ್ರಹಿಸಿದರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ವಿಭಾಗ ನಿಯಂತ್ರಣ ಅಧಿಕಾರಿಗೆ ಬರೆದ ಮನವಿಪತ್ರವನ್ನು ಔರಾದ ಘಟಕ ವ್ಯವಸ್ಥಾಪಕ ಮಲ್ಲಿಕಾರ್ಜುನ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸುನೀತಾ ಶಿವಾನಂದ ಅವರಿಗೆ ಸಲ್ಲಿಸಲಾಯಿತು.
ಬಿಸಿಎಂ ತಾಲ್ಲೂಕು ಅಧಿಕಾರಿ ತುಕಾರಾಮ ಭೋಸ್ಲೆ, ಎಬಿವಿಪಿ ಜಿಲ್ಲಾ ಸಂಚಾಲಕ ನಾಗರಾಜ ಸುಲ್ತಾನಪುರ, ಅನೀಲ ಮೇತ್ರೆ, ಕಲ್ಲೇಶ ಬಿರಾದಾರ, ಸುರೇಶ ಮರತುಳೆ, ಸಂಗಮೇಶ ದ್ಯಾಡೆ, ಪ್ರಶಾಂತ ಮೇತ್ರೆ, ಮಾರುತಿ ಉದಗಿರೆ, ಮಹಾದೇವ, ಪ್ರಸನ್ನಜಿತ ಭಂಗಾರೆ, ಪೂಜಾ, ಕಾವೇರಿ ಇತರರು ಭಾಗವಹಿಸಿದ್ದರು.