ಎಸ್​ಐಆರ್​ ವಿರೋಧಿಸಿ ಕಲ್ಯಾಣದಲ್ಲಿ ಪ್ರತಿಭಟನೆ

 ಎಸ್​ಐಆರ್​ ವಿರೋಧಿಸಿ ವಿವಿಧ ಸಂಟನೆಗಳಿಂದ ಬಸವಕಲ್ಯಾಣದಲ್ಲಿ ಪ್ರತಿಭಟನೆ ನಡೆಸಿ ಗ್ರೇಡ್​&2 ತಹಸೀಲ್ದಾರ್​ ಡಾ.ರಮೇಶಬಾಬು ಹಾಲು ಅವರಿಗೆ ಸಲ್ಲಿಸಲಾಯಿತು. ಪ್ರಮುಖರಾದ ಸಂದೀಪ ಮುಕಿಂದೆ, ಇಕ್ರಮೋದ್ದಿನ್​ ಖಾದಿವಾಲೆ, ಸುರೇಶ ಮೋರೆ, ಚೇತನ ಕಾಡೆ, ನಿತ್ಯಾನಂದ ಮಂಠಾಳಕರ್​, ನಾಗೇಶ ಮೇತ್ರೆ, ದತ್ತು ಭೆಂಡೆ ಇತರರಿದ್ದರು.
ಎಸ್​ಐಆರ್​ ವಿರೋಧಿಸಿ ವಿವಿಧ ಸಂಟನೆಗಳಿಂದ ಬಸವಕಲ್ಯಾಣದಲ್ಲಿ ಪ್ರತಿಭಟನೆ ನಡೆಸಿ ಗ್ರೇಡ್​&2 ತಹಸೀಲ್ದಾರ್​ ಡಾ.ರಮೇಶಬಾಬು ಹಾಲು ಅವರಿಗೆ ಸಲ್ಲಿಸಲಾಯಿತು. ಪ್ರಮುಖರಾದ ಸಂದೀಪ ಮುಕಿಂದೆ, ಇಕ್ರಮೋದ್ದಿನ್​ ಖಾದಿವಾಲೆ, ಸುರೇಶ ಮೋರೆ, ಚೇತನ ಕಾಡೆ, ನಿತ್ಯಾನಂದ ಮಂಠಾಳಕರ್​, ನಾಗೇಶ ಮೇತ್ರೆ, ದತ್ತು ಭೆಂಡೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗ್ರೇಡ್​-2 ತಹಸೀಲ್ದಾರ್​ ಡಾ.ರಮೇಶಬಾಬು ಹಾಲು ಅವರಿಗೆ ಮನವಿಪತ್ರ ಸಲ್ಲಿಕೆ
ಬಸವಕಲ್ಯಾಣ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್​ಐಆರ್​) ವಿರೋಧಿಸಿ ಜನಪರ ಸಂಘಟನೆಗಳ ಒಕ್ಕೂಟ ಕರ್ನಾಟಕ, ಎದ್ದೇಳು ಕರ್ನಾಟಕ, ಗ್ರಾಮ ಕ್ರಾಂತಿ ಸೇನೆ, ಹೊಸ ರೈತ ಸಂಘಟನೆ, ಭೀಮ್​ ಆರ್ಮಿ, ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ), ವಾಯ್ಸ್​ ಆಫ್​ ಅಂಬೇಡ್ಕರ್​, ಜಮಾತ್​ ಎ ಇಸ್ಲಾಮಿ&ಹಿಂದ್​, ತೇಹರಿಕ್​ ಟಿಪ್ಪು ಸುಲ್ತಾನ್​, ಆದಿ ಜಾಂಬವ, ಎನ್​ಎಸ್​ಯುಐ, ಯುಥ್​ ಕಾಂಗ್ರೆಸ್​, ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಯಿತು.
ಶನಿವಾರ ನಗರದ ಗಾಂಧಿ ವೃತ್ತದಿಂದ ಅಂಬೇಡ್ಕರ್​ ವೃತ್ತದವರೆಗೆ ಪ್ರತಿಭಟನ ಮೆರವಣಿಗೆ ನಡೆಸಿ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗೆ ಹಾಗೂ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಸ್ಥಳಕ್ಕೆ ಭೇಟಿ ನೀಡಿದ ಗ್ರೇಡ್​-2 ತಹಸೀಲ್ದಾರ್​ ಡಾ.ರಮೇಶಬಾಬು ಹಾಲು ಅವರಿಗೆ ಸಲ್ಲಿಸಲಾಯಿತು.
ಎದ್ದೇಳು ಕರ್ನಾಟಕದ ಜಿಲ್ಲಾ ಸಂಯೋಜಕ, ಗ್ರಾಮ ಕ್ರಾಂತಿ ಸೇನೆಯ ರಾಜ್ಯಾಧ್ಯಕ್ಷ ಸಂದೀಪ ಮುಕಿಂದೆ ಮಾತನಾಡಿ, ನಾವು ಚುನಾವಣಾ ಆಯೋಗಕ್ಕೆ ಸ್ಪಷ್ಟ ಸಂದೇಶ ನೀಡಿದ್ದೇವೆ. ಮತದಾರರ ಪಟ್ಟಿಯ ಪರಿಷ್ಕರಣೆ ಹೆಸರಿನಲ್ಲಿ ನಡೆಯುತ್ತಿರುವ ಎಸ್​ಐಆರ್​ ಪ್ರಕ್ರಿಯೆ ಪಾರದರ್ಶಕವಾಗಿಲ್ಲ. ಯಾವುದೇ ಅರ್ಹ ಮತದಾರನ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನವನ್ನು ನಾವು ಒಪ್ಪುವುದಿಲ್ಲ. ಇದು ಮತದಾನದ ಹಕ್ಕು ಮತ್ತು ಪ್ರಜಾಪ್ರಭುತ್ವವನ್ನು ರಸುವ ಹೋರಾಟವಾಗಿದೆ ಎಂದರು.
ವಾಯ್ಸ್​ ಆಫ್​ ಅಂಬೇಡ್ಕರ ಸಂಟನೆಯ ಅಧ್ಯಕ್ಷ ಸುರೇಶ ಮೋರೆ, ಎದ್ದೇಳು ಕರ್ನಾಟಕದ ತಾಲೂಕು ಸಂಯೋಜಕ ಇಕ್ರಾಮ್​ ಖಾದಿವಾಲೆ, ಭೀಮ್​ ಆರ್ಮಿ ಅಧ್ಯಕ್ಷ ಚೇತನ ಕಾಡೆ, ಯುಥ್​ ಕಾಂಗ್ರೆಸ್ಸಿನ ನಗರ ಅಧ್ಯಕ್ಷ ಎಂಡಿ ಜಾಬೇರ್​, ರಿಯಾಜ್​ ಪಟೇಲ್​, ಇಫ್ತಿಕಾರ್​ ಅಹಮದ್​ ಹಾಗೂ ವಿವಿಧ ಸಂಟನೆಯ ಪ್ರಮುಖರು ಮಾತನಾಡಿ, ಬೇಡಿಕೆ ಗಂಭೀರವಾಗಿ ಪರಿಗಣಿಸಬೇಕು. ಯಾವುದೇ ಅರ್ಹ ಮತದಾರ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದರು.
ಆಮಾತ್​ ಏ- ಇಸ್ಲಾಮಿ ಹಿಂದ್​ ತಾಲೂಕು ಅಧ್ಯಕ್ಷ ಅಸ್ಲಮ್​ ಜನಾಬ್​, ಆದಿ ಜಾಂಬವ ಸಂಟನೆಯ ಜಿಲ್ಲಾ ಉಪಾಧ್ಯಕ್ಷ ಯುವರಾಜ ಬೆಂಡೆ, ತಾಲೂಕು ಅಧ್ಯಕ್ಷ ದತ್ತು ಭೆಂಡೆ, ಮುಖಂಡರಾದ ನಾಗೇಶ ಮೇತ್ರೆ, ನಿತ್ಯಾನಂದ ಮಂಠಾಳಕರ್​, ಮಿರ್ಜಾ ಖಾಸೀಂ ಬೇಗ, ಹುಜೂರ್​ ಪಾಶಾ ಇತರರು ಭಾಗವಹಿಸಿದ್ದರು.
=========
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net