ಗ್ರಾಮ ಆಡಳಿತಾಧಿಕಾರಿಗಳ ಸಂಘದಿಂದ ಪ್ರತಿಭಟನೆ

ಗ್ರಾಮ ಆಡಳಿತಾಧಿಕಾರಿ ಮಹಾದೇವ ಪಿಲ್ಲಂಗೋಲೆ ಆತ್ಮಹತ್ಯೆಗೆ ಕಾರಣರಾಗಿರುವ ಮೇಲಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತಾಧಿಕಾರಿಗಳ ಸಂದಿಂದ ಬಸವಕಲ್ಯಾಣ ತಹಸಿಲ್​ ಎದುರು ಶುಕ್ರವಾರ ಧರಣಿ ನಡೆಯಿತು.
ಗ್ರಾಮ ಆಡಳಿತಾಧಿಕಾರಿ ಮಹಾದೇವ ಪಿಲ್ಲಂಗೋಲೆ ಆತ್ಮಹತ್ಯೆಗೆ ಕಾರಣರಾಗಿರುವ ಮೇಲಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತಾಧಿಕಾರಿಗಳ ಸಂದಿಂದ ಬಸವಕಲ್ಯಾಣ ತಹಸಿಲ್​ ಎದುರು ಶುಕ್ರವಾರ ಧರಣಿ ನಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಮಹಾದೇವ ಪಿಲ್ಲಂಗೋಲೆ ಆತ್ಮಹತ್ಯೆ ಪ್ರಕರಣ
  • ಮೇಲಧಿಕಾರಿಗಳ ವಿರುದ್ಧ ಕ್ರಮಕೆ ಒತ್ತಾಯ
ಬಸವಕಲ್ಯಾಣ
ಗ್ರಾಮ ಆಡಳಿತಾಧಿಕಾರಿ ಮಹಾದೇವ ಪಿಲ್ಲಂಗೋಲೆ ಆತ್ಮಹತ್ಯೆಗೆ ಕಾರಣರಾದ ಮೇಲಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿ ಕರ್ನಾಟಕ ಗ್ರಾಮ ಆಡಳಿತಾಧಿಕಾರಿಗಳ ಸಂದ ತಾಲೂಕು ಟಕದಿಂದ ತಹಸಿಲ್​ ಕಚೇರಿ ಎದುರು ಶುಕ್ರವಾರ ಧರಣಿ ನಡೆಯಿತು.
ಕೆಲಸದ ಒತ್ತಡ ಹಾಗೂ ಮೇಲಧಿಕಾರಿಗಳ ಕಿರುಕುಳದಿಂದಲೇ ಮಹಾದೇವ ಆತ್ಮಹತ್ಯೆ ಮಡಿಕೊಂಡಿದ್ದಾರೆ ಎಂದು ಸಂದ ರಾಜ್ಯಾಧ್ಯಕ್ಷ ಯೋಗೇಶ್​ ನಾಯ್ಕ್​ ನೇತೃತ್ವದಲ್ಲಿ ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.
ಇ&ಪೌತಿ ಖಾತಾ ಯೋಜನೆ ಜಾರಿ ಸಂದರ್ಭದಲ್ಲಿ ಬಸವಕಲ್ಯಾಣ ಮತ್ತು ಹುಲಸೂರು ತಹಸೀಲ್ದಾರರು ಅನಗತ್ಯ ಒತ್ತಡ ಹೇರಿದ್ದು, ಪ್ರತಿದಿನ ನಿಗದಿತ ಸಂಖ್ಯೆ ಪ್ರಕರಣಗಳನ್ನು ಪೂರ್ಣಗೊಳಿಸುವಂತೆ ಒತ್ತಾಯಿಸಿ ಅಮಾನತು ಮಾಡುವ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದರು.
ರಾಜ್ಯ ಉಪಾಧ್ಯಕ್ಷ ಹರೀಶ್​, ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಾನಂದ ನಾಯ್ಕ್​, ರಾಜ್ಯ ಖಜಾಂಚಿ ರಾಜು ಕನ್ನವ್ವರ್​, ಬೀದರ್​ ಜಿಲ್ಲಾಧ್ಯಕ್ಷ ಬಬ್ರುವಾಹನ ಬೆಳಮಗಿ, ತಾಲೂಕು ಅಧ್ಯಕ್ಷ ಕಾಶೀನಾಥ ಚಂಡಕಾಪುರೆ, ಕಂದಾಯ ನೌಕರರ ಸಂದ ಜಿಲ್ಲಾಧ್ಯಕ್ಷ ರಾಹುಲ್​ ದೇವ್​ ಇತರರಿದ್ದರು.
ಕೋಟ್​
ಗ್ರಾಮ ಆಡಳಿತಾಧಿಕಾರಿ ಮಹಾದೇವ ಆತ್ಮಹತ್ಯೆಗೆ ಕೆಲಸದ ಒತ್ತಡ ಹೇರುವ ಜತೆಗೆ ಮಾನಸಿಕ ಕಿರುಕುಳ ನೀಡಿರುವ ಅಧಿಕಾರಿಗಳೇ ನೇರ ಕಾರಣರು. ಇಲಾಖಾ ವಿಚಾರಣೆ ನಡೆಸಿ ಕಠಿಣ ಕ್ರಮ ಜರುಗಿಸಬೇಕು.
> ಯೋಗೇಶ ನಾಯ್ಕ್​
ಅಧ್ಯಕ್ಷ, ಕರ್ನಾಟಕ ರಾಜ್ಯ ಗ್ರಾಮ ಆಡಳಿತಾಧಿಕಾರಿಗಳ ಸಂ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net