ಸ್ಮಶಾನಭೂಮಿಗಾಗಿ ರಸ್ತೆಯಲ್ಲಿ ಶವವಿಟ್ಟು ಪ್ರತಿಭಟನೆ

 ಯಡ್ರಾಮಿ ತಾಲೂಕಿನ ಯತ್ನಾಳದಲ್ಲಿ ಬುಧವಾರ ಸ್ಮಶಾನಭೂಮಿ ಒದಗಿಸುವಂತೆ ಆಗ್ರಹಿಸಿ ಗ್ರಾಮಸ್ಥರು ರಸ್ತೆಯಲ್ಲಿ ಶವವಿಟ್ಟು ಪ್ರತಿಭಟನೆ ನಡೆಸಿದರು.  ಶರಣಗೌಡ ಪೊಲೀಸ್​ ಪಾಟೀಲ್​, ಬಸವರಾಜಗೌಡ ಕೋನಸಿರಸಗಿ, ಸ್ವಾಮಪ್ಪ ಬಡಗೇರ, ನಿಂಗಪ್ಪ ಕಾಂಬಳೆ ಇತರರಿದ್ದರು.
ಯಡ್ರಾಮಿ ತಾಲೂಕಿನ ಯತ್ನಾಳದಲ್ಲಿ ಬುಧವಾರ ಸ್ಮಶಾನಭೂಮಿ ಒದಗಿಸುವಂತೆ ಆಗ್ರಹಿಸಿ ಗ್ರಾಮಸ್ಥರು ರಸ್ತೆಯಲ್ಲಿ ಶವವಿಟ್ಟು ಪ್ರತಿಭಟನೆ ನಡೆಸಿದರು. ಶರಣಗೌಡ ಪೊಲೀಸ್​ ಪಾಟೀಲ್​, ಬಸವರಾಜಗೌಡ ಕೋನಸಿರಸಗಿ, ಸ್ವಾಮಪ್ಪ ಬಡಗೇರ, ನಿಂಗಪ್ಪ ಕಾಂಬಳೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬೇಡಿಕೆಗೆ ಸ್ಪಂದಿಸದ್ದಕ್ಕೆ ಯತ್ನಾಳ್​ ಗ್ರಾಮಸ್ಥರ ಆಕ್ರೋಶ
  • ಶೀಘ್ರ ಜಾಗ ಕೊಡದಿದ್ದರೆ ಉಗ್ರ ಹೋರಾಟ
ಯಡ್ರಾಮಿ: ಶವಸಂಸ್ಕಾರಕ್ಕಾಗಿ ಸ್ಮಶಾನಭೂಮಿ ಒದಗಿಸುವಂತೆ ಆಗ್ರಹಿಸಿ ಯತ್ನಾಳ್​ ಗ್ರಾಮದಲ್ಲಿ ಬುಧವಾರ ರಸ್ತೆಯಲ್ಲಿ ಶವವಿಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಊರಲ್ಲಿ ಅಂತ್ಯಕ್ರಿಯೆಗೆ ರ್ನಿದಿಷ್ಟವಾದ ಸ್ಥಳ ಇಲ್ಲ. ಸ್ಥಿತಿವಂತರು ಸ್ವಂತ ಜಮೀನಿನಲ್ಲಿ ಶವಸಂಸ್ಕಾರ ಮಾಡಿದರೆ, ಜಮೀನು ಹೊಂದಿರದ ಜನ ಗ್ರಾಮಕ್ಕೆ ಹೊಂದಿಕೊಂಡಿರುವ ಬೇರೊಬ್ಬರ ಹೊಲದಲ್ಲಿ ಅಂತ್ಯಕ್ರಿಯೆ ನೆರವೇರಿಸುತ್ತ ಬಂದಿದ್ದಾರೆ. ಬುಧವಾರ ಗ್ರಾಮದ ನಿವಾಸಿ ಚಂದಪ್ಪ ಬಡಿಗೇರ ನಿಧನ ಹೊಂದಿದ್ದು, ರೂಢಿಯಂತೆ ಊರಿಗೆ ಹೊಂದಿಕೊಂಡಿರುವ ಜಮೀನಿನಲ್ಲಿ ಅಂತ್ಯಸಂಸ್ಕಾರ ನೆರವೇರಿಸಲು ಮುಂದಾದಾಗ ಮಾಲಿಕ ಬೇಡ ಎಂದಿದ್ದರಿಂದ ಶವವನ್ನು ರಸ್ತೆ ಮೇಲಿಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಸ್ಮಶಾನಭೂಮಿ ಇಲ್ಲದ್ದರಿಂದ ಯಾರಾದರೂ ಅಸುನೀಗಿದರೆ ಅಂತ್ಯಸಂಸ್ಕಾರಕ್ಕೆ ಪರದಾಡುವಂತಹ ಪರಿಸ್ಥಿತಿ ಇದೆ. ಈ ಕುರಿತು ಹಲವು ಬಾರಿ ತಹಸೀಲ್ದಾರ್​ಗೆ ಮನವಿಪತ್ರ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸ್ಥಳಕ್ಕೆ ಅಧಿಕಾರಿಗಳು ಬಂದು ರ್ನಿದಿಷ್ಟ ಜಾಗ ನೀಡುವವರೆಗೆ ಅಂತ್ಯಸಂಸ್ಕಾರ ಮಾಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು.
ತಹಸಿಲ್​ ಸಿಬ್ಬಂದಿ ಆಗಮಿಸಿ ಮನವಿ ಸ್ವೀಕರಿಸಿದರೂ ಒಪ್ಪಲಿಲ್ಲ. ಬಳಿಕ ಗ್ರಾಮದ ಯಮನಗೌಡ ಮಾಲಿಪಾಟೀಲ್​ ತಮ್ಮ ಜಮೀನಿನಲ್ಲಿ ಮಾಡುವಂತೆ ಮನವೊಲಿಸಿದ ಬಳಿಕ ಪ್ರತಿಭಟನೆ ಹಿಂಪಡೆದು ಅಂತ್ಯಸಂಸ್ಕಾರ ನೆರವೇರಿಸಿದರು. ಆದಷ್ಟು ಬೇಗ ಗ್ರಾಮದಲ್ಲಿ ಸ್ಮಶಾನಭೂಮಿಗೆ ಜಾಗ ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತಾಲೂಕು ಕೇಂದ್ರದಲ್ಲಿ ಶವವಿಟ್ಟು ಪ್ರತಿಭಟಿಸುವುದಾಗಿ ಎಚ್ಚರಿಸಿದರು.
ಪ್ರಮುಖರಾದ ಶರಣಗೌಡ ಪೊಲೀಸ್​ ಪಾಟೀಲ್​, ಬಸವರಾಜಗೌಡ ಕೋನಸಿರಸಗಿ, ಸ್ವಾಮಪ್ಪ ಬಡಗೇರ, ನಿಂಗಪ್ಪ ಕಾಂಬಳೆ, ಕೆಂಚಪ್ಪ ಪೂಜಾರಿ, ದೇವಾನಂದ ಶಿರಗುಂಡ, ಮಾಂತಗೌಡ ನಗನೂರ, ಭೀಮನಗೌಡ ಕುಡಲಿ, ಮಲ್ಲಿಕಾರ್ಜುನ ದೇಸಾಯಿ, ಶರಣಬಸಪ್ಪ ನಾಯ್ಕೋಡಿ, ಗೊಲ್ಲಾಳಪ್ಪ ಮೇಲಿನಮನಿ, ಮಾಂತಪ್ಪ ದೊಡಮನಿ, ಈರಪ್ಪ ಬಡಗೇರ, ನಾಗಪ್ಪ ಬಡಗೇರ, ನಿಂಗಪ್ಪ ಕಾಂಬಳೆ ಇತರರಿದ್ದರು.
"

ಯತ್ನಾಳ ಗ್ರಾಮದಲ್ಲಿ ಸರ್ಕಾರಿ ಜಮೀನು ಲಭ್ಯವಿಲ್ಲದ ಕಾರಣ ಖಾಸಗಿ ಜಮೀನು ಖರಿದಿಸಿ ಗ್ರಾಮಸ್ಥರಿಗೆ ಸ್ಮಶಾನ ಭೂಮ್​ಿ ಒದಗಿಸಬೇಕಿದೆ. ಈ ಕುರಿತು ಮೇಲಧಿಕಾರಿಗಳಿಗೆ ಪ್ರಸ್ತಾವನೆ ಕೂಡಾ ಸಲ್ಲಿಸಲಾಗಿದೆ. ಆದರೆ ಸರ್ಕಾರ ನಿಗದಿಗೊಳಿಸಿದ ದರಕ್ಕೆ ಜಮೀನು ಮಾಲೀಕರು ಒಪ್ಪದ ಕಾರಣ ಪ್ರಕ್ರಿಯೆ ವಿಳಂಭವಾಗುತ್ತಿದೆ. ಆದಷ್ಟು ಬೇಗ ಪರಿಹಾರ ಒದಗಿಸಲಾಗುವುದು.

> ಯಲ್ಲಪ್ಪ ಸುಬೇದಾರ

ತಹಸೀಲ್ದಾರ್​ ಯಡ್ರಾಮಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net