ಔಷಧಿ ಆನ್ಲೈನ್ ವಹಿವಾಟು ನಿಷೇಧಿಸುವುದೂ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಲಬುರಗಿ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂದ ಕಾರ್ಯಕರ್ತರು ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು. ರವೀಂದ್ರ ಜೋಶಿ, ವಿಜಯಕುಮಾರ ಹವಾಲ್ದಾರ್, ಪ್ರಹ್ಲಾದ್ ಪೂಜಾರಿ, ಮಹೇಶ ನಾಡಗೌಡ, ಅವಿನಾಶ, ಶಿವಲಿಂಗಪ್ಪ, ವಿಶ್ವನಾಥ ಕೋರವಾರ್, ನಾಗಭೂಷಣ ಇತರರಿದ್ದರು.
ಕಲಬುರಗಿ: ಔಷಧಿ ಆನ್ಲೈನ್ ವಹಿವಾಟು ನಿಷೇಧಿಸುವುದೂ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಲಬುರಗಿ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಕಾರ್ಯಕರ್ತರು ವ್ಯಾಪಾರ ವಹಿವಾಟು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಇಂರ್ಟನೆಟ್ ಮೂಲಕ ಅವೈಜ್ಞಾನಿಕವಾಗಿ ಔಷಧಿ ಮಾರಾಟ ಮಾಡುವುದನ್ನು ತಣವೇ ನಿಲ್ಲಿಸಬೇಕು. ಆನ್ಲೈನ್ ಫಾರ್ಮಸಿಗಳು ವೈದ್ಯರ ಚೀಟಿ ಇಲ್ಲದೆ ಅಥವಾ ಒಂದೇ ಚೀಟಿಯನ್ನು ಪದೇ ಪದೇ ಬಳಸಿ ಔಷಧಿ ನೀಡುವುದರಿಂದ ರೋಗಿಗಳ ಸುರಕ್ಷತೆ ಮತ್ತು ಸಮಾಜದ ಸ್ವಾಸ್ಥ್ಯಕ್ಕೆ ದೊಡ್ಡ ಧಕ್ಕೆಯಾಗುತ್ತಿದೆ ಎಂದು ದೂರಿದರು.
ಕಾರ್ಪೊರೇಟ್ ಕಂಪನಿಗಳು ನೀಡುತ್ತಿರುವ ಅತಿಯಾದ ರಿಯಾಯಿತಿ ವ್ಯಾಪಾರದಿಂದ ಸಾಂಪ್ರದಾಯಿಕ ಸಣ್ಣ ಪುಟ್ಟ ಔಷಧಿ ಅಂಗಡಿಯವರ ಬದುಕು ದುಸ್ತರವಾಗುತ್ತಿದೆ. ಸ್ಥಳಿಯ ವ್ಯಾಪಾರಿಗಳ ಅಸ್ತಿತ್ವಕ್ಕೆ ಸಂಚಕಾರ ಬಂದಿದೆ. ಮಾರುಕಟ್ಟೆಯಲ್ಲಿ ನಕಲಿ ಔಷಧಿಗಳ ಹಾವಳಿ ತಡೆದು, ಕಟ್ಟುನಿಟ್ಟಾದ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಪ್ರಾಮಾಣಿಕ ವ್ಯಾಪಾರಿಗಳ ಹಿತರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಜಿಲ್ಲಾಧಿಕಾರಿಗೆ ಮನವಿಪತ್ರ ಸಲ್ಲಿಸಿದರು. ಸಂಘದ ಅಧ್ಯಕ್ಷ ದತ್ತಾತ್ರೇಯ ಸಿ.ಪಾಟೀಲ್, ಕಾರ್ಯದರ್ಶಿ ರವೀಂದ್ರ ಜೋಶಿ, ವಿಜಯಕುಮಾರ ಹವಾಲ್ದಾರ್, ಪ್ರಹ್ಲಾದ್ ಪೂಜಾರಿ, ಮಹೇಶ ನಾಡಗೌಡ, ಅವಿನಾಶ, ಶಿವಲಿಂಗಪ್ಪ, ವಿಶ್ವನಾಥ ಕೋರವಾರ್, ನಾಗಭೂಷಣ ಇತರರಿದ್ದರು.