ಕಲ್ಯಾಣದಲ್ಲಿ ಕಾಂಗ್ರೆಸ್​ನಿಂದ ಪ್ರತಿಭಟನೆ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವಮಾನ ಮಾಡಿದ ಘಟನೆ ಖಂಡಿಸಿ ಬ್ಲಾಕ್​ ಕಾಂಗ್ರೆಸ್​ ಸಮಿತಿ ಹಾಗೂ ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟದಿಂದ ಬಸವಕಲ್ಯಾಣದ ಅಂಬೇಡ್ಕರ್​ವೃತ್ತದ ಬಳಿ ಪ್ರತಿಭಟನೆ ನಡೆಸಲಾಯಿತು. ಪ್ರಮುಖರಾದ ರವೀಂದ್ರ ಗಾಯಕವಾಡ, ದಿಲೀಪ ಶಿಂಧೆ, ಸುರೇಶ ಮೋರೆ, ಮನೋಹರ್​ ಮೈಸೆ, ರವೀಂದ್ರ ಬೋರಾಳೆ, ಅನ್ನಪೂರ್ಣಬಾಯಿ ಅಂಬಾರಾಯ, ಅನಸೂಯಾ ಮಂಠಾಳಕರ್​, ತಹಸಿನ್​ ಅಲಿ ಜಮಾದಾರ, ಸುಧಾಕರ್​ ಗುರ್ಜರ, ಯುವರಾಜ ಭೆಂಡೆ, ನಾಗನಾಥ ಮೇತ್ರೆ ಇತರರಿದ್ದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವಮಾನ ಮಾಡಿದ ಘಟನೆ ಖಂಡಿಸಿ ಬ್ಲಾಕ್​ ಕಾಂಗ್ರೆಸ್​ ಸಮಿತಿ ಹಾಗೂ ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟದಿಂದ ಬಸವಕಲ್ಯಾಣದ ಅಂಬೇಡ್ಕರ್​ವೃತ್ತದ ಬಳಿ ಪ್ರತಿಭಟನೆ ನಡೆಸಲಾಯಿತು. ಪ್ರಮುಖರಾದ ರವೀಂದ್ರ ಗಾಯಕವಾಡ, ದಿಲೀಪ ಶಿಂಧೆ, ಸುರೇಶ ಮೋರೆ, ಮನೋಹರ್​ ಮೈಸೆ, ರವೀಂದ್ರ ಬೋರಾಳೆ, ಅನ್ನಪೂರ್ಣಬಾಯಿ ಅಂಬಾರಾಯ, ಅನಸೂಯಾ ಮಂಠಾಳಕರ್​, ತಹಸಿನ್​ ಅಲಿ ಜಮಾದಾರ, ಸುಧಾಕರ್​ ಗುರ್ಜರ, ಯುವರಾಜ ಭೆಂಡೆ, ನಾಗನಾಥ ಮೇತ್ರೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಐಸಿಸಿ ಅಧ್ಯಕ್ಷ ಖರ್ಗೆ ಅವಮಾನಕ್ಕೆ ಖಂಡನೆ
  • ಬಿಜೆಪಿ, ಆರ್​ಎಸ್​ಎಸ್​ ವಿರುದ್ಧ ಘೋಷಣೆ
ಬಸವಕಲ್ಯಾಣ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವಮಾನ ಮಾಡಿದ ಘಟನೆ ಖಂಡಿಸಿ ಬ್ಲಾಕ್​ ಕಾಂಗ್ರೆಸ್​ ಸಮಿತಿ ಹಾಗೂ ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟದಿಂದ ಬುಧವಾರ ನಗರದ ಅಂಬೇಡ್ಕರ್​ ವೃತ್ತದ ಬಳಿ ಬೃಹತ್​ ಪ್ರತಿಭಟನೆ ನಡೆಸಲಾಯಿತು.
ವೃತ್ತದ ಬಳಿ ಜಮಾಯಿಸಿದ ಕಾಂಗ್ರೆಸ್​ ಪ್ರಮುಖರು, ಕಾರ್ಯಕರ್ತರು ಮತ್ತು ದಲಿತಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಕೆಲಕಾಲ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಮೋದಿ ಹಟಾವ್​ ದೇಶ ಬಜಾವ್​, ಬಿಜೆಪಿ, ಆರ್​ಎಸ್​ಎಸ್​ ವಿರುದ್ಧ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಭಾರತೀಯ ದಲಿತ ಪ್ಯಾಂಥರ್​ ತಾಲೂಕು ಅಧ್ಯಕ್ಷ, ಕಾಂಗ್ರೆಸ್​ ಮುಖಂಡ ರವೀಂದ್ರ ಗಾಯಕವಾಡ ಮಾತನಾಡಿ, ಮನುವಾದಿಗಳು ದೇಶದಲ್ಲಿ ಜನರ ಮಧ್ಯೆ ಒಡಕು ಮೂಡಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಬಿಜೆಪಿಯವರು ದೇಶದಲ್ಲಿ ಜಾತಿ, ಜಾತಿ, ಧರ್ಮ, ಧರ್ಮಗಳ ಮಧ್ಯೆ ಒಡಕು ಮೂಡಿಸುತ್ತಿದ್ದಾರೆ. ಇದನ್ನು ಒಗ್ಗಟ್ಟಿನಿಂದ ಖಂಡಿಸಬೇಕಾದ ಅಗತ್ಯವಿದೆ ಎಂದರು.
ಬಿಎಸ್​ಐ ತಾಲೂಕು ಅಧ್ಯಕ್ಷ ಮನೋಹರ್​ ಮೈಸೆ ಮಾತನಾಡಿ, ಎಐಸಿಸಿ ಅಧ್ಯಕ್ಷರು, ರಾಷ್ಟ್ರೀಯ ನಾಯಕರು ಆಗಿರುವ ಮಲ್ಲಿಕಾರ್ಜೂನ ಖರ್ಗೆ ಅವರಿಗೆ ಅವಮಾನ ಮಾಡಿರುವ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಖರ್ಗೆ ಅವರಿಗೆ ಅವಮಾನ ಮಾಡಿರುವ ಅನುವಾದಿಗಳನ್ನು ಬಂಧಿಸಿ ಜೈಲಿಗೆ ಕಳಿಸಬೇಕು ಎಂದು ಒತ್ತಾಯಿಸಿದರು.
ವಾಯ್ಸ್​ ಆಫ್​ ಅಂಬೇಡ್ಕರ್​ ಸಂಘಟನೆಯ ರಾಜ್ಯಾಧ್ಯಕ್ಷ ಸುರೇಶ ಮೋರೆ ಮಾತನಾಡಿ, ಬಿಜೆಪಿ, ಆರ್​ಎಸ್​ಎಸ್​ ವಿರುದ್ಧ ವಾಗ್ದಾಳಿ ನಡೆಸಿದರು. ತಾಪಂ ಮಾಜಿ ಉಪಾಧ್ಯಕ್ಷ, ಮುಖಂಡ ದಿಲೀಪ ಸಿಂಧೆ, ಯುವ ಕಾಂಗ್ರೆಸ್​ ಅಧ್ಯಕ್ಷ ಎಂಡಿ ಜಾಬೇರ್​, ಬ್ಲಾಕ್​ ಕಾಂಗ್ರೆಸ್​ ಮಹಿಳಾ ಘಟಕದ ಅಧ್ಯಕ್ಷೆ ಅನಸೂಯಾ ಮಂಠಾಳಕರ್​, ವಿವಿಧ ಸಂಘಟನೆಗಳ ಪ್ರಮುಖರಾದ ಸಂದೀಪ ಮುಕಿಂದೆ, ಅರುಣ ಗಾಯಕವಾಡ, ನಿತ್ಯಾನಂದ ಮಾಠಾಳಕರ್​ ಮಾತನಾಡಿದರು.
ನಗರಸಭೆ ಮಾಜಿ ಸದಸ್ಯರಾದ ರವೀಂದ್ರ ಬೋರಾಳೆ, ಮಲ್ಲಿಕಾರ್ಜುನ ಬೊಕ್ಕೆ, ರಾಮ ಜಾಧವ, ಜಿಪಂ ಮಾಜಿ ಸದಸ್ಯೆ ಅನ್ನಪೂರ್ಣಬಾಯಿ ಅಂಬಾರಾಯ, ಕಾಂಗ್ರೆಸ್​ ಮುಖಂಡರಾದ ಸುಧಾಕರ್​ ಗುರ್ಜರ, ತಹಸಿನ್​ ಅಲಿ ಜಮಾದಾರ್​, ನಾಗನಾಥ ಮೇತ್ರೆ, ಸಂಘಟನೆಗಳ ಪ್ರಮುಖರಾದ ಯುವರಾಜ ಭೆಂಡೆ, ಮಹಾದೇವ ಗಾಯಕವಾಡ, ಪಿಂಟು ಕಾಂಬಳೆ, ಸಿಕಂದರ್​ ಶಿಂಧೆೆ, ದತ್ತು ಭೇಂಡೆ, ವಿಜಯಕುಮಾರ ಡಾಂಗೆ, ಸಂಜುಕುಮಾರ ಸಂಗನೂರೆ, ಅಶೋಕ ಸಂಗನೂರೆ, ಪಕ್ಷದ ಕಾರ್ಯಕರ್ತರು ಮತ್ತು ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net