ಸ್ಥಳೀಯ ಕಾರ್ಮಿಕರ ರಕ್ಷಣೆ ಅಗತ್ಯ

ಮಾಗಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ರಾಜ್ಯ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕ ಒಕ್ಕೂಟ ಮತ್ತು ಶ್ರೀರಂಗ ಪೇಂಟರ್ಸ್‌  ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ಸಭೆಯಲ್ಲಿ ಡಾ.ಪ್ರಸನ್ನಗೌಡ, ಲಕ್ಷ್ಮೀ ನರಸಿಂಹ, ವೆಂಕಟೇಶ್, ಅನಿಲ್ ಇತರರು ಇದ್ದರು.
ಮಾಗಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ರಾಜ್ಯ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕ ಒಕ್ಕೂಟ ಮತ್ತು ಶ್ರೀರಂಗ ಪೇಂಟರ್ಸ್‌ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ಸಭೆಯಲ್ಲಿ ಡಾ.ಪ್ರಸನ್ನಗೌಡ, ಲಕ್ಷ್ಮೀ ನರಸಿಂಹ, ವೆಂಕಟೇಶ್, ಅನಿಲ್ ಇತರರು ಇದ್ದರು.
Published on
ಮಾಗಡಿ :ಹೊರ ರಾಜ್ಯಕಾರ್ಮಿಕರನ್ನು ತೊಲಗಿಸಿ ಸ್ಥಳೀಯ ಕಾರ್ಮಿಕರನ್ನು ರಕ್ಷಿಸಬೇಕೆಂದು ಅಸಂಘಟಿತ ಕಾರ್ಮಿಕ ಒಕ್ಕೂಟ ಅಧ್ಯಕ್ಷ ಡಾ. ಪ್ರಸನ್ನಗೌಡ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ರಾಜ್ಯ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕ ಒಕ್ಕೂಟ ಮತ್ತು ಶ್ರೀರಂಗ ಪೇಂಟರ್ಸ್‌ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ಹೊರರಾಜ್ಯ ಕಾರ್ಮಿಕರು ಹಾಗೂ ಮೇಸಿಗಳು, ಸ್ಥಳೀಯ ಕಟ್ಟಡ ಕಾರ್ಮಿಕರ ಜೀವನೋಪಾಯಕ್ಕೆ ತೊಂದರೆ ಉಂಟು ಮಾಡುತ್ತಿದ್ದಾರೆ. ಸ್ಥಳೀಯ ಕಾರ್ಮಿಕರು ಹಾಗೂ ಮೇಸಿಗಳ ಹಿತ ಕಾಯುವುದು ನಮ್ಮ ಮುಖ್ಯ ಉದ್ದೇಶ ಎಂದರು.
ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ ತಡೆಹಿಡಿದಿರುವುದು ಹಾಗೂ ಕಾರ್ಮಿಕ ಇಲಾಖೆಯಿಂದ ನೀಡಲಾಗುತ್ತಿರುವ ಕಳಪೆ ಮಟ್ಟದ ಟೂಲ್ ಕಿಟ್ ನೀಡಿ ವಂಚಿಸುತ್ತಿದ್ದಾರೆ. ಕಿಟ್‌ಗಳಿಗೆ ನೀಡುವ ಕೋಟ್ಯಂತರ ರೂ. ದುರುಪಯೋಗವಾಗುತ್ತಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಹೊರರಾಜ್ಯದ ಕಾರ್ಮಿಕರು 300 ರಿಂದ 400 ರೂ. ಕೂಲಿ ಕೆಲಸ ಮಾಡುತ್ತಿದ್ದಾರೆ. ಇವರಿಂದ ಸ್ಥಳೀಯ ಕಾರ್ಮಿಕರಿಗೆ ಕೆಲಸ ಸಿಗದಂತಾಗಿದೆ. ತಾಲೂಕಿನಲ್ಲಿ ಸುಮಾರು 10 ಸಾವಿರ ಸ್ಥಳೀಯ ಕಾರ್ಮಿಕರು ಹಾಗೂ 1500ಕ್ಕೂ ಹೆಚ್ಚು ಮೇಸಿಗಳಿದ್ದು, ಅವರ ರಕ್ಷಣೆಗೆ ಸಂಘಟನೆ ಬದ್ಧ ಎಂದರು.
ಶ್ರೀರಂಗ ಪೇಂಟರ್ಸ್‌ ಕ್ಷೇಮಾಭಿವೃದ್ದಿ ಸಂಘದ ತಾಲೂಕು ಅಧ್ಯಕ್ಷ ಲಕ್ಷ್ಮೀನರಸಿಂಹ ಮಾತನಾಡಿ, ನೆರೆ ರಾಜ್ಯ ಅಗ್ಗದ ಕೂಲಿ ಕಾರ್ಮಿಕರ ದಾಳಿಯಿಂದ ರಾಜ್ಯದ ಕಟ್ಟಡ ಪೇಂಟರ್‌ಗಳ ಜೀವನೋಪಾಯ ಕಳೆದುಕೊಂಡು ಕಂಗಾಲಾಗಿದ್ದೀವಿ, ಕಷ್ಟಪಟ್ಟು ದುಡಿದರೂ ಕುಟುಂಬ ನಿರ್ವಹಣೆ ಸಾಧ್ಯವಾಗದೆ.
ಸರ್ಕಾರ ತಕ್ಷಣವೇ ನಮ್ಮ ನೆರವಿಗೆ ಧಾವಿಸದಿದ್ದರೆ, ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ದಾರಿ ಎಂದರು.
ತಾಲೂಕು ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷ ಗಿರೀಶ್, ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ, ಕಾರ್ಯದರ್ಶಿ ಅನಿಲ್, ಸಂಘಟನಾ ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ಚಿಕ್ಕನರಸಪ್ಪ, ನಿರ್ದೆಶಕ ರೇವಣ್ಣ ಸಿದ್ದಪ್ಪ, ಫಾರೂಕ್, ನರಸಿಂಹರಾಜು, ರಂಗನಾಥ್, ಗಣೇಶ್, ನಾರಾಯಣ, ಸತೀಶ್, ರಾಜು, ಕೇಶವ, ರಘು, ರವಿ, ರವಿಕುಮಾರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net