ಕಳೆದ ಮೂರು ವರ್ಷಗಳಿಂದ 37 ಸಾವಿರ ಕೋಟಿ ರೂ. ಬಿಡುಗಡೆ ಆಗದೆ ಗುತ್ತಿಗೆದಾರರು ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೆ, 2017-18ರಿಂದ 2020ರ ವರೆಗೆ ಕೈಗೊಂಡ ಕಾಮಗಾರಿಗಳಿಗೆ ವ್ಯಾಟ್-ಜಿಎಸ್‌ಟಿಯಲ್ಲಿ ಶೇ.12 ವ್ಯತ್ಯಾಸದ ಶೇ.8 ಜಿಎಸ್‌ಟಿ ಹಣವನ್ನು ವಾಪಸ್ ಕೊಡಿಸುವ ಸಂಬಂಧ 7 ವರ್ಷಗಳಿಂದ ರಾಜ್ಯ ಗುತ್ತಿಗೆದಾರರ ಸಂಘವು ಸರ್ಕಾರದ ಜತೆಗೆ ಚರ್ಚೆ ನಡೆಸುತ್ತಲೇ ಇವೆ. ಆದರೆ, ಇಲ್ಲಿಯವರೆಗೂ ಆಗಿಲ್ಲ.