ವಾರ್ಡ್​ನ ಮೂಲ ಸೌಲಭ್ಯಕ್ಕೆ ಆದ್ಯತೆ

ಕಕ್ಕೇರಾ ಪುರಸಭೆ ವ್ಯಾಪ್ತಿಯ ವಾರ್ಡ್​ 18ರ ಬನದೊಡ್ಡಿಯಲ್ಲಿ 12ಲಕ್ಷ ರೂ.ವೆಚ್ಚದ ಸಾರ್ವಜನಿಕ ಹೈಟೆಕ್​ ಶೌಚಗೃಹಕ್ಕೆ ಸದಸ್ಯ ವೆಂಕಟೇಶನಾಯಕ ಜಹಾಗೀರದಾರ(ನವೀನ ಧಣಿ) ಸೋಮವಾರ ಗುದ್ದಲಿ ಪೂಜೆ ನೆರವೇರಿಸಿದರು. ಪರಮಣ್ಣ ಕಮತಗಿ, ಹಣಮಂತ ಸುಂಕಾಪುರ, ಪರಮಣ್ಣ ಕುಂಬಾರ, ಮಾನಪ್ಪ ಗೋನಾಲ್​, ರೇಣುಕಾ ಜಾಲಹಳ್ಳಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಪುರಸಭೆ ಸದಸ್ಯ ಜಹಾಗೀರದಾರ ಹೇಳಿಕೆ
  • ಕಕ್ಕೇರಾದಲ್ಲಿ ಹೈಟೆಕ್​ ಶೌಚಗೃಹಕ್ಕೆ ಗುದ್ದಲಿ ಪೂಜೆ
ಕಕ್ಕೇರಾ: ಪಟ್ಟಣದ ಪುರಸಭೆ ವ್ಯಾಪ್ತಿನ ವಾರ್ಡ್​ 18ರ ಬನದೊಡ್ಡಿ ಮೂಲ ಸೌಲಭ್ಯಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದು ಸದಸ್ಯ ವೆಂಕಟೇಶನಾಯಕ ಜಹಾಗೀರದಾರ (ನವೀನ ಧಣಿ) ಹೇಳಿದರು.
ಪಟ್ಟಣದ ಬನದೊಡ್ಡಿಯಲ್ಲಿ ಎಸ್​ಬಿಎಂ 2.0 ಅನುದಾನದಲ್ಲಿ 12ಲಕ್ಷ ರೂ ವೆಚ್ಚದ ಹೈಟೆಕ್​ ಶೌಚಗೃಹ ನಿರ್ಮಾಣಕ್ಕೆ ಸೋಮವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ನನ್ನ ವಾರ್ಡ್​ನಲ್ಲಿ ರಸ್ತೆ, ಕುಡಿಯುವ ನೀರು, ಶಿಕ್ಷಣ, ಆರೋಗ್ಯ, ವೈಯಕ್ತಿಕ ಶೌಚಗೃ ನಿರ್ಮಾಣ ಸೇರಿ ಎಲ್ಲ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.
ಗ್ರಾಮದಲ್ಲಿ ಬಯಲು ಮುಕ್ತ ಶೌಚ ಕೊನೆಗಾಣಿಸಲು ನನ್ನ ಸ್ವಂತ ಜಮೀನದಲ್ಲಿ 40&60 ಸೈಜ್​ದ ಜಾಗದಲ್ಲಿ ಎಸ್​ಬಿಎಂ 2.0 ಅನುದಾನದಲ್ಲಿ 12ಲಕ್ಷ ರೂ ವೆಚ್ಚದ ಸಾರ್ವಜನಿಕ ಹೈಟೆಕ್​ ಶೌಚಗೃಹ ನಿರ್ಮಾಣ ಮಾಡಲು ಮುಂದಾಗಿದ್ದೇನೆ. ಮುಂಬರುವ ದಿನಗಳಲ್ಲಿ ಶಾಸಕರೊಂದಿಗೆ ಚರ್ಚಿಸಿ ಹೆಚ್ಚಿನ ಅನುದಾನ ತಂದು ಬನದೊಡ್ಡಿ ಹಾಗೂ ೇತ್ರದ ವಿವಿಧ ದೊಡ್ಡಿಗಳಿಗೆ ಹೆಚ್ಚಿನ ಮೂಲಭೂತ ಸೌಲಭ್ಯಗಳಿಗೆ ಒತ್ತು ನೀಡಲಾಗುವುದು ಎಂದು ಹೇಳಿದರು.
ಪುರಸಭೆ ಅಧ್ಯಕ್ಷ ಪರಮಣ್ಣ ಕಮತಗಿ, ಗ್ರಾಮಸ್ಥರಾದ ಪರಮಣ್ಣ ಕುಂಬಾರ, ಹಣಮಂತ ಸುಂಕಾಪುರ, ಗಂಗಪ್ಪ, ಹಣಮಂತ ಅನೀಪ್​, ಬಸಣ್ಣ ಗಡ್ಡಿ, ಸಂಗಪ್ಪ ಜುಲ್​ಪುಲ್​, ಮಹಿಬೂಬ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net