ಬಂದಿಗಳ ಆರೋಗ್ಯ ರಕ್ಷಣೆಗೆ ಆದ್ಯತೆ

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಬಂದಿಗಳಿಗೆ ಇತ್ತೀಚೆಗೆ ಆಯೋಜಿಸಿದ್ದ ಹಲ್ಲಿನ ಉಚಿತ ತಪಾಸಣೆ ಶಿಬಿರಕ್ಕೆ ಫಾದರ್​ ವಿಲಿಯಮ್​ ಮಿರಿಂಡಾ ಚಾಲನೆ ನೀಡಿದರು. ಡಾ.ಸಂಗೀತಾ, ಡಾ.ಸಂತೋಷ, ಡಾ.ರವೀಂದ್ರ ಬನ್ನೇರಿ, ಚನ್ನಪ್ಪ, ಜೈಲರ್​ಗಳಾದ ಶ್ರೀಮಂತಗೌಡ ಪಾಟೀಲ್​, ಶ್ಯಾಮ ಬಿದ್ರಿ, ಸಹಾಯಕ ಆಡಳಿತಾಧಿಕಾರಿ ಭೀಮಾಶಂಕರ ಡಾಂಗೆ, ಕಲಬುರಗಿ ಅಲ್​ ಬದರ್​ ದಂತ ಆಸ್ಪತ್ರೆ ವೈದ್ಯಕಿಯ ಅಧೀಕ್ಷಕ ಡಾ.ಅಬ್ದುಲ್​ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಫಾದರ್​ ವಿಲಿಯಮ್​ ಮಿರಿಂಡಾ ಅನಿಸಿಕೆ
  • ಕೇಂದ್ರ ಕಾರಾಗೃಹದಲ್ಲಿ ದಂತ ತಪಾಸಣೆ ಶಿಬಿರ
ಕಲಬುರಗಿ: ಕಾರ್ಮಲ್​ ಜ್ಯೋತಿ ಪಬ್ಲಿಕ್​ ಚಾರಿಟೇಬಲ್​ ಟ್ರಸ್ಟ್​ ಹಾಗೂ ಅಲ್​ ಬ್ರದರ್​ ಡೆಂಟಲ್​ ಆಸ್ಪತ್ರೆ ಸಹಯೋಗದೊಂದಿಗೆ ಕೇಂದ್ರ ಕಾರಾಗೃಹದಲ್ಲಿ ಬಂದಿಗಳಿಗೆ ಹಲ್ಲಿನ ಉಚಿತ ತಪಾಸಣೆ ಶಿಬಿರ ಬುಧವಾರ ನಡೆಯಿತು.
ಕಡಗಂಚಿ ಕಾರ್ಮಲ್​ ಜ್ಯೋತಿ ಪಬ್ಲಿಕ್​ ಚಾರಿಟೇಬಲ್​ ಟ್ರಸ್ಟ್​ ಶಾಖೆ ಕಾರ್ಯದರ್ಶಿ ಫಾದರ್​ ವಿಲಿಯಮ್​ ಮಿರಿಂಡಾ ಶಿಬಿರ ಉದ್ಘಾಟಿಸಿ ಮಾತನಾಡಿ, ಆರೋಗ್ಯದ ಹಿತದೃಷ್ಟಿಯಿಂದ ಕಾರಾಗೃಹದ ಬಂದಿಗಳಿಗೆ ಹಲ್ಲಿನ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಇತರೆ ಆರೋಗ್ಯ ಸಮಸ್ಯೆಗಳಿಗೆ ಸ್ಪಂದಿಸಲು ಶೀಘ್ರ ಶಿಬಿರ ಆಯೋಜಿಸಲಾಗುತ್ತದೆ ಎಂದರು.
ಅಲ್​ ಬದರ್​ ಡೆಂಟಲ್​ ಆಸ್ಪತ್ರೆಯ (ಎಚ್​ಒಡಿ) ಡಾ.ಸಂಗೀತಾ ಮಾತನಾಡಿ, ಹಲ್ಲು ನಮ್ಮ ದೇಹದ ಮುಖ್ಯ ಅಂಗ, ಹೀಗಾಗಿ ನಿಯಮಿತವಾಗಿ ರಕ್ಷಣೆ ಮಾಡಬೇಕು. ಹಲ್ಲು ಇಲ್ಲದಿದ್ದರೆ ಮಾತನಾಡಲು, ಸೌಂದರ್ಯ, ಆಹಾರ ಅಗಿಯಲು ಸಾಧ್ಯವಾಗುವುದಿಲ್ಲ. ದೇಹದ ಆರೋಗ್ಯದ ಜತೆ ಹಲ್ಲಿನ ಆರೋಗ್ಯವೂ ಮುಖ್ಯ. ಪ್ರತಿದಿನ ಎರಡು ಬಾರಿ ಬ್ರಷ್​ ಮಾಡಬೇಕು ಎಂದು ಸಲಹೆ ನೀಡಿದರು.
ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ರಾಕೇಶ್​ ಕಾಂಬಳೆ ಅಧ್ಯಕ್ಷತೆ ವಹಿಸಿದ್ದರು.
ವೈದ್ಯಾಧಿಕಾರಿ ಡಾ.ಸಂತೋಷ, ಡಾ.ರವೀದ್ರ ಬನ್ನೇರಿ, ಸಹಾಯಕ ಅಧೀಕ್ಷಕ ಚನ್ನಪ್ಪ, ಜೈಲರ್​ಗಳಾದ ಶ್ರೀಮಂತಗೌಡ ಪಾಟೀಲ್​, ಶ್ಯಾಮ ಬಿದ್ರಿ, ಸಹಾಯಕ ಆಡಳಿತಾಧಿಕಾರಿ ಭೀಮಾಶಂಕರ ಡಾಂಗೆ, ಅಲ್​ ಬದಲ್​ ದಂತ ಆಸ್ಪತ್ರೆ ವೈದ್ಯಕಿಯ ಅಧೀಕ್ಷಕ ಡಾ.ಅಬ್ದುಲ್​ ಇತರರಿದ್ದರು.
ಶಿಬಿರದಲ್ಲಿ ಒಟ್ಟು 85 ಜನರನ್ನು ತಪಾಸಣೆ ಮಾಡಲಾಯಿತು. ಸಂಚಾರಿ ಬಸ್​ನಲ್ಲಿ ಸ್ಕ್ರೀನಿಂಗ್​ ತಪಾಸಣೆ ನಡೆಯಿತು. ಸಂಸ್ಥೆಯ ಸಹಾಯಕ ಅಧೀಕ್ಷಕ ಬಿ. ಸುರೇಶ್​ ಸ್ವಾಗತಿಸಿದರು. ಶಿಕ್ಷಕ ನಾಗರಾಜ ಮುಲಗೆ ನಿರೂಪಣೆ ಮಾಡಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net