ಬೆಳಗಾವಿ: ಗಣೇಶೋತ್ಸವದಲ್ಲಿ ಪರಿಸರಕ್ಕೆ ಹಾನಿಯಾಗುವ ಪಿಒಪಿ ಮೂರ್ತಿಗಳ ಬಳಕೆ ನಿರ್ಬಂಧಿಸಿ, ಮಣ್ಣಿನ ಗಣಪತಿ ಬಳಕೆಗೆ ಜಿಲ್ಲಾಡಳಿತ ಜಾಗೃತಿ ಮೂಡಿಸಬೇಕು ಎಂದು ಬೆಳಗಾವಿ ಉತ್ತರ ವಲಯ ರೋಟರಿ ಕ್ಲಬ್ ಆಗ್ರಹಿಸಿದೆ.
ಈ ಸಂಬಂಧ ಬುಧವಾರ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್‌ಗೆ ಮನವಿ ಸಲ್ಲಿಸಿದ್ದು, ಪಿಒಪಿ ಮೂರ್ತಿಗಳು ಕರಗದೆ ಜಲಮೂಲ ಕಲುಷಿತಗೊಳಿಸುತ್ತಿವೆ.
ರಾಸಾಯನಿಕ ಬಣ್ಣಗಳಿಂದ ಜಲಚರ ಮತ್ತು ಪರಿಸರಕ್ಕೂ ಹಾನಿ. ಆದರೆ, ನೈಸರ್ಗಿಕವಾಗಿ ಮಣ್ಣಿನಿಂದ ತಯಾರಿಸಿದ ಮೂರ್ತಿಗಳು ನೀರಿನಲ್ಲಿ ಸುಲಭವಾಗಿ ಕರಗುತ್ತವೆ. ಆದ್ದರಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.