ಜನಪದ ಕಲೆ ಉಳಿಸಿ ಬೆಳೆಸಿ

ಹುಮನಾಬಾದ್​ ತಾಲೂಕಿನ ಮಾಣಿಕನಗರದ ಶ್ರೀ ವೀರಭದ್ರೇಶ್ವರ ಚಿತ್ರಕಲಾ ಮಹಾವಿದ್ಯಾಲಯದಲ್ಲಿ  ಸೋಮವಾರ ಆಯೋಜಿಸಿದ್ದ ಜಾನಪದ ನೃತ್ಯ ಸಾಂಸತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿಭಾವಂತ ಮಕ್ಕಳಿಗೆ ಪಿಎಸ್​ಐ ಹುಲೇಪ್ಪ ಗೌಡಗೊಂಡ ಪ್ರಮಾಣ ಪತ್ರ ವಿತರಿಸಿದರು. ಪ್ರಮುಖರಾದ ಶಿವಾ ರಾಠೋಡ್​, ದಶರಥ ರಾಥೋಡ್​, ಗುಂಡಪ್ಪ ದೊಡ್ಡಮನಿ, ವಿರೇಶರಡ್ಡಿ ಇತರರಿದ್ದರು.
ಹುಮನಾಬಾದ್​ ತಾಲೂಕಿನ ಮಾಣಿಕನಗರದ ಶ್ರೀ ವೀರಭದ್ರೇಶ್ವರ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಜಾನಪದ ನೃತ್ಯ ಸಾಂಸತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿಭಾವಂತ ಮಕ್ಕಳಿಗೆ ಪಿಎಸ್​ಐ ಹುಲೇಪ್ಪ ಗೌಡಗೊಂಡ ಪ್ರಮಾಣ ಪತ್ರ ವಿತರಿಸಿದರು. ಪ್ರಮುಖರಾದ ಶಿವಾ ರಾಠೋಡ್​, ದಶರಥ ರಾಥೋಡ್​, ಗುಂಡಪ್ಪ ದೊಡ್ಡಮನಿ, ವಿರೇಶರಡ್ಡಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪಿಎಸ್​ಐ ಹುಲೇಪ್ಪ ಗೌಡಗೊಂಡ ಸಲಹೆ
  • ಮಾಣಿಕನಗರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ
ಹುಮನಾಬಾದ್​: ಜನಪದ ಕಲೆಗಳು ನಮ್ಮ ನಾಡಿನ ಸಂಸ್ಕೃತಿ, ಪರಂಪರೆ ಮತ್ತು ಜೀವನ ಶೈಲಿಯ ಪ್ರತಿಬಿಂಬವಾಗಿದ್ದು, ಗ್ರಾಮೀಣ ಬದುಕಿನ ಸೊಗಡು, ಜನರ ಭಾವನೆಗಳು ಹಾಗೂ ಇತಿಹಾಸವನ್ನು ಹೊತ್ತೊಯ್ಯುತ್ತವೆ ಎಂದು ಸಂಚಾರಿ ಠಾಣೆಯ ಪಿಎಸ್​ಐ ಹುಲೇಪ್ಪ ಗೌಡಗೊಂಡ ಹೇಳಿದರು.
ಮಾಣಿಕನಗರದ ಶ್ರೀ ವೀರಭದ್ರೇಶ್ವರ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಶಿವಾ ಕಲಾವಿದರ ಸಂಘ ಚಿಂಚೋಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಜಾನಪದ ನೃತ್ಯ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಆಧುನಿಕ ಯುಗದಲ್ಲಿ ಜನಪದ ಕಲೆಗಳು ನಿಧಾನವಾಗಿ ಮಾಯವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಡೊಳ್ಳು ಕುಣಿತ, ವೀರಗಾಸೆ, ಯಗಾನ, ಲಾವಣಿ, ಜಾನಪದ ಹಾಡುಗಳು, ಕೀಲುಗೊಂಬೆ ಆಟ ಸೇರಿ ಅನೇಕ ಕಲಾರೂಪಗಳು ಗ್ರಾಮೀಣ ಭಾಗಗಳಿಗೆ ಮಾತ್ರ ಸೀಮಿತವಾಗುತ್ತಿವೆ ಎಂದು ವಿಷಾದಿಸಿದರು.
ಶಿಕ್ಷಕ ದಶರಥ ರಾಥೋಡ ಮಾತನಾಡಿ, ಯುವಜನತೆ ಪಾಶ್ಚಾತ್ಯ ಸಂಸ್ಕೃತಿಯತ್ತ ಹೆಚ್ಚು ಆಕರ್ಷಿತರಾಗುತ್ತಿರುವುದರಿಂದ ಜನಪದ ಕಲೆಯ ಮಹತ್ವ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಸಮಾಜ ಎರಡೂ ಜನಪದ ಕಲಾವಿದರ ನೆರವಿಗೆ ಬರಬೇಕಾಗಿದೆ ಎಂದರು.
ಶಾಲಾ-ಕಾಲೇಜುಗಳಲ್ಲಿ ಜನಪದ ಕಲೆಗೆ ಹೆಚ್ಚಿನ ಪೋತ್ಸಾಹ ನೀಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಜನಪದ ಉತ್ಸವಗಳನ್ನು ಆಯೋಜಿಸಿ ಕಲಾವಿದರಿಗೆ ವೇದಿಕೆ ಕಲ್ಪಿಸಬೇಕು. ಜತೆಗೆ ಕಲಾವಿದರಿಗೆ ಆರ್ಥಿಕ ನೆರವು, ಮಾಸಾಶನ ಹಾಗೂ ತರಬೇತಿ ಕೇಂದ್ರಗಳನ್ನು ಸ್ಥಾಪಿಸುವ ಅಗತ್ಯವಿದೆ ಎಂದು ಹೇಳಿದರು.
ಪ್ರಮುಖರಾದ ಗುಂಡಪ್ಪ ದೊಡ್ಡಮನಿ, ವೀರೇಶರಡ್ಡಿ, ಭಾಗ್ಯಶ್ರೀ, ದೇವಿಕಾ ರಡ್ಡಿ, ರುಕ್ಮಣಿ ಬಾಯಿ, ಕಲಬುರಗಿ ಡ್ಯಾನ್ಸ್​ ಸಂದ ಅಯ ಎಂಕಪ್ಪಾ, ಶಿವ ರಾಥೋಡ್​, ಶಿವರಂಜನ, ದಿನೇಶ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net