ಪವಾಸಿ ಸೌಲಭ್ಯ ಧ್ವನಿ ಬೆಳಕಿಗೆ ಡಿಪಿಆರ್​ ರೂಪಿಸಿ

ಕಲಬುರಗಿ ಕೋಟೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್​ ಗುರುವಾರ ಸಭೆ ನಡೆಸಿದರು. ಅವಿನಾಶ ಶಿಂಧೆ, ಅಡ್ಡೂರು ಶ್ರೀನಿವಾಸಲು, ಸಾಹಿತ್ಯ, ರಾಯಪ್ಪ ಹುಣಸಗಿ ಇದ್ದರು.
ಕಲಬುರಗಿ ಕೋಟೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್​ ಗುರುವಾರ ಸಭೆ ನಡೆಸಿದರು. ಅವಿನಾಶ ಶಿಂಧೆ, ಅಡ್ಡೂರು ಶ್ರೀನಿವಾಸಲು, ಸಾಹಿತ್ಯ, ರಾಯಪ್ಪ ಹುಣಸಗಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್​ ಸೂಚನೆ
  • ಪ್ರವಾಸಿಗರ ಆಕರ್ಷಣೆಗೆ ಕಲಬುರಗಿ ಕೋಟೆಗೆ ಕಾಯಕಲ್ಪ
ಕಲಬುರಗಿ: ನಗರದ ಬಹಮನಿ ಕೋಟೆಯಲ್ಲಿ ಪ್ರವಾಸಿ ಮೂಲಸೌಕರ್ಯ ಬಲಪಡಿಸುವುದರ ಜತೆಗ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಧ್ವನಿ&ಬೆಳಕು ಕಾರ್ಯಕ್ರಮದ ಮೂಲಕ ಕೋಟೆಗೆ ಕಾಯಕಲ್ಪ ಒದಗಿಸಬೇಕಿದೆ. ಈ ನಿಟ್ಟಿನಲ್ಲಿ ಡಿಪಿಆರ್​ ರೂಪಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್​ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಜಾಮಿಯಾ ಮಸೀದಿ, ಉದ್ದನೆಯ ತೋಪಿನಿಂದ ಕಲಬುರಗಿ ಕೋಟೆ ಪ್ರಖ್ಯಾತಿ ಹೊಂದಿವೆ. ಇತ್ತೀಚೆಗೆ ದೇಶ&ವಿದೇಶದಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವದರಿಂದ ಕೋಟೆಯನ್ನು ಜಾಗತಿಕ ಪ್ರವಾಸಿತಾಣವಾಗಿ ಅಭಿವೃದ್ದಿಪಡಿಸುವ ಅಗತ್ಯವಿದೆ ಎಂದರು.
ಕೋಟೆಗೆ ಬರುವ ಪ್ರವಾಸಿಗರಿಗೆ ಇತಿಹಾಸ ತಿಳಿಸುವ ಸ್ಥಳಿಯವಾಗಿ ಪ್ರವಾಸಿ ತಾಣಗಳ ಮಾಹಿತಿ ಲಭ್ಯವಾಗುವಂತೆ ಮಾಹಿತಿ ಕೇಂದ್ರಗಳು, ಶುದ್ಧ ಕುಡಿಯುವ ನೀರಿನ ಟಕ ಮತ್ತು ಶೌಚಗೃಹ ಸ್ಥಾಪನೆ, ವೀಲ್ಚೇರ್​ ಸ್ನೇಹಿ ಮಾರ್ಗ ಅಭಿವೃದ್ದಿಪಡಿಸಬೇಕು. ಪ್ರವಾಸಿಗರ ಭದ್ರತಾ ದೃಷ್ಠಿಯಿಂದ ಹೆಚ್ಚಿನ ಸಿಸಿಟಿವಿ ಅಳವಡಿಸಿ ತರಬೇತಿ ಪಡೆದ ಭದ್ರತಾ ಸಿಬ್ಬಂದಿ ಮತ್ತು ತುರ್ತು ಪ್ರತಿಕ್ರಿಯೆ ತಂಡಗಳ ನಿಯೋಜಿಸುವುದು ಸೂಕ ಎಂದು ಅಭಿಪ್ರಾಯಪಟ್ಟರು.
ಕೋಟೆಯ ಇತಿಹಾಸದ ಗತವೈಭವ ಕಣ್ಣೆದರು ಕಟ್ಟಿಕೊಡುವ ನಿಟ್ಟಿನಲ್ಲಿ ಧ್ವನಿ&ಬೆಳಕು ವ್ಯವಸ್ಥೆ ಮಾಡಿದಲ್ಲಿ ಕೋಟೆಗೆ ಪ್ರವಾಸಿಗರು ಭೇಟಿ ನೀಡುವ ಸಂಖ್ಯೆ ಹೆಚ್ಚಾಗಲಿದೆ. ಇದು ಪ್ರವಾಸಿ ತಾಣವನ್ನಾಗಿ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಕೋಟೆ ಆವರಣದಲ್ಲಿ ಲ್ಯಾಂಡ್​ಸ್ಕೇಪಿಂಗ್​ ಮಾಡಿದಲ್ಲಿ ಕೋಟೆ ಸೌಂದರ್ಯ ಹೆಚ್ಚಲಿದೆ. ಒಟ್ಟಿನಲ್ಲಿ ಪಾರಂಪರಿಕ ಕಟ್ಟಡಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆ ಬಾರದಂತೆ ಭಾರತೀಯ ಪುರಾತತ್ವ ಇಲಾಖೆಯ ಅನುಮತಿಯೊಂದಿಗೆ ಕಾರ್ಯಕ್ರಮ ಜಾರಿಗೊಳಿಸಬೇಕಿರುವ ಕಾರಣ ಡಿಪಿಆರ್​ ತಯ್ಯಾರಿಸಬೇಕೆಂದು ಸೂಚಿಸಿದರು.
ಸಾಂಸತಿಕ ಕಾರ್ಯಕ್ರಮ ಆಯೋಜಿಸಿ
ವಾರಾಂತ್ಯ ಮತ್ತು ವಿಶೇಷ ಸಂದರ್ಭದಲ್ಲಿ ಕಲಬುರಗಿ ಕೋಟೆ ಜತೆಗೆ ಸಾಥ್​ ಗುಂಬಜ್​, ಶೋರ್​ ಗುಂಬಜ್​, ಹೋಳಕುಂದಾ ಸ್ಮಾರಕ ಸ್ಥಳಗಳಲ್ಲಿ ಸಾಂಸತಿಕ ಸಂಜೆ ಕಾರ್ಯಕ್ರಮ ಆಯೋಜಿಸಬೇಕು. ಈ ಮೂಲಕ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಕುರಿತು ಜನರಲ್ಲಿ ಅರಿವು ಮೂಡಿಸಬೇಕು. ಇದರಿಂದ ಸ್ಥಳಿಯ ಆರ್ಥಿಕ ಚೇತರಿಕೆಗೂ ಬೂಸ್ಟ್​ ಸಿಗಲಿದ್ದು, ಜತೆಗೆ ಸ್ಥಳಿಯ ಕಲಾವಿದರಿಗೆ ಉತ್ತಮ ವೇದಿಕೆ ರೂಪುಗೊಳ್ಳಲಿದೆ. ಮುಂದಿನ ವಾರದಿಂದಲೆ ಆಯೋಜಿಸುವಂತೆ ಸೂಚಿಸಿದರು.
ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತ ಅವಿನಾಶ ಶಿಂಧೆ ಮಾತನಾಡಿದರು. ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತೆ ಸಾಹಿತ್ಯ, ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕ ಡಾ.ಎಸ್​.ತಿಪ್ಪೇಸ್ವಾಮಿ, ಉಪ ನಿರ್ದೇಶಕಿ ಬೇಬಿ ಮೊಗೇರ, ರಾಜ್ಯ ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕ ರಾಜಾರಾಮ್​, ಭಾರತೀಯ ಪುರಾತತ್ವ ಇಲಾಖೆಯ ಸಹಾಯಕ ಸರ್ವೇಕ್ಷಣಾಧಿಕಾರಿ ಅಜಯ ಕುಮಾರ ಇದ್ದರು.
"

ಕೋಟೆಯ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆಯಿಂದ 1 ಕೋಟಿ ರೂ. ಮತ್ತು ಮಹಾನಗರ ಪಾಲಿಕೆಯಿಂದ ಕೋಟೆಯಲ್ಲಿನ ಪ್ರವಾಸಿ ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಆಕರ್ಷಣೆಗೆ 16 ಕೋಟಿ ರೂ. ಯೋಜನೆ ರೂಪಿಸಿ ಎ.ಎಸ್​.ಐ ಅನುಮೋದನೆಗಾಗಿ ಪ್ರಸ್ಥಾವನೆ ಸಲ್ಲಿಸಿದೆ. ಪ್ರಸ್ತಾವನೆ ಅನುಮೋದನೆಯಾಗಿ ಬಂದಲ್ಲಿ ಪ್ರವಾಸಿ ಮೂಲಸೌಕರ್ಯ ಕೆಲಸಗಳು ನಡೆಯಲಿವೆ.

ಅವಿನಾಶ ಶಿಂಧೆ,

ಆಯುಕ್ತ, ಮಹಾನಗರ ಪಾಲಿಕೆ, ಕಲಬುರಗಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net