ಶಾಸಕರ ದಿನಾಚರಣೆಗೆ ಸಿದ್ಧತೆ

ವಿಧಾನಸೌಧ
ವಿಧಾನಸೌಧ
Published on

ಬೆಂಗಳೂರು: ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರಿಗಾಗಿ 2027ರಲ್ಲಿ ಶಾಸಕರ ದಿನಾಚರಣೆ ನಡೆಸಲು ನಿರ್ಧರಿಸಿದ್ದು, ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ದಿನಾಂಕ ನಿಗದಿ ಮಾಡುವುದಾಗಿ ಸಭಾಪತಿ ಸಲೀಂ ಅಹ್ಮದ್ ಭರವಸೆ ನೀಡಿದರು.

ವಿಧಾನ ಪರಿಷತ್ತಿನಲ್ಲಿ ಉಪ ಸಭಾಪತಿ ಉಮಾಶ್ರೀ ಅವರಿಗೆ ಅಭಿನಂದನೆ ಸಲ್ಲಿಸುವಾಗ ಶಾಸಕರ ದಿನಾಚರಣೆ ನಡೆಸಬೇಕು ಎಂಬ ಸದಸ್ಯರು ಮನವಿಗೆ ಒಪ್ಪಿದ ಅವರು, ಮುಂದಿನ ಜಂಟಿ ಅಧಿವೇಶನದ ಸಮಯದಲ್ಲಿ ಮೂರು ದಿನ ದಿನಾಚರಣೆ ನಡೆಸುವುದರ ಬಗ್ಗೆ ಚರ್ಚೆ ನಡೆದಿದೆ. ಮೂರು ದಿನಗಳಲ್ಲಿ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ.

"

ಡಾ.ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿ. ಕನ್ನಡದ ಪ್ರಸಿದ್ಧ ಚಲಿಸುವ ಮೊಡಗಳು ಸಿನಿಮಾದ ‘ಜೇನಿನ ಹೊಳೆಯೋ ಹಾಲಿನ ಮಳೆಯೋ’ ಈ ಸುಂದರ ಹಾಡು ಅಚ್ಚುಮೆಚ್ಚು.

— ಸಲೀಂ ಅಹ್ಮದ್, ಸಭಾಪತಿ

ಈ ಮೂಲಕ ಎರಡೂ ಮನೆ ಸದಸ್ಯರಲ್ಲಿರುವ ಕಲೆ, ಸಂಸ್ಕೃತಿ ಮತ್ತು ಕ್ರೀಡಾ ಪ್ರತಿಭೆ ಅನಾವರಣ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಭಾಗವಹಿಸಬೇಕೆಂಬುದು ನನ್ನ ಆಶಯವಾಗಿದೆ ಎಂದು ಸಲೀಂ ಅಹ್ಮದ್ ಸದನಕ್ಕೆ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net