ಪೂಜೇನಹಳ್ಳಿ ಪ್ಯಾಕ್‌ಹೌಸ್ ಕೆಪೆಕ್‌ನಿಂದ ನಿರ್ವಹಣೆ

ವಿಧಾನಸೌಧ
ವಿಧಾನಸೌಧ
Published on
ಬೆಂಗಳೂರು: ದೇವನಹಳ್ಳಿಯ ಪೂಜೇನಹಳ್ಳಿಯಲ್ಲಿರುವ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ (ಕೆಪೆಕ್) ಸಮಗ್ರ ಶೀತಲ ಸರಪಳಿ ಘಟಕವನ್ನು ವಶಕ್ಕೆ ಪಡೆಯಲು ಸರ್ಕಾರ ಮುಂದಾಗಿದೆ.
ರೈತರು, ರೈತ-ಉತ್ಪಾದಕ ಸಂಸ್ಥೆಗಳು ಮತ್ತು ತೋಟಗಾರಿಕೆ ರಫ್ತುದಾರರಿಗೆ ಹಣ್ಣು ಮತ್ತು ತರಕಾರಿಗಳ ಸಂಸ್ಕರಣೆ, ಸಂಗ್ರಹಣೆ ಮತ್ತು ರಫ್ತಿಗೆ ಅನುಕೂಲವಾಗಲಿ ಎಂಬ ಉದ್ದೇಶಕ್ಕೆ ಕೆಪೆಕ್, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಪೂಜೇನಹಳ್ಳಿಯಲ್ಲಿ ಸಮಗ್ರ ಶೀತಲ ಸರಪಳಿ ಘಟಕವನ್ನು ಸ್ಥಾಪಿಸಿದೆ. 5 ಎಕರೆ ವಿಸ್ತೀರ್ಣದಲ್ಲಿ 29 ಕೋಟಿ ರೂ. ವೆಚ್ಚದಲ್ಲಿ ಪ್ಯಾಕ್‌ಹೌಸ್ ನಿರ್ಮಿಸಲಾಗಿದೆ.
ಇದರ ನಿರ್ವಹಣೆಯನ್ನು ಫಿಜಾ ಗ್ಲೋಬಲ್ ಆಗ್ರೋವೆಂಚರ್ಸ್ ಪ್ರೈವೇಟ್ ಲಿಮಿಟೆಡ್‌ಗೆ ವಹಿಸಲಾಗಿತ್ತು. ಈ ಕಂಪನಿ ಹಣ್ಣಿನ ಸಂಸ್ಕರಣ ಸಭಾಂಗಣವನ್ನು ಸಿದ್ಧ ಉಡುಪು ಸಂಗ್ರಹಕ್ಕೆ ಬಳಕೆ ಮತ್ತು ಬಾಡಿಗೆ ಪಾವತಿ ಮಾಡದೆ ನಿಯಮ ಉಲ್ಲಂಸಿತ್ತು. ಈ ಬಗ್ಗೆ ಹಲವು ಬಾರಿ ನೋಟಿಸ್ ನೀಡಿದ್ದರೂ ನಿಗದಿತ ಪ್ರಯೋಜನವಾಗಿರಲಿಲ್ಲ.
ಆದರಿಂದ ಫಿಜಾ ಗ್ಲೋಬಲ್ ಆಗ್ರೋವೆಂಚರ್ಸ್ ಪ್ರೈ.ಲಿ.ನಿಂದ ಪ್ಯಾಕ್‌ಹೌಸ್‌ನ್ನು ವಾಪಸ್ ಪಡೆಯುವ ಉದ್ದೇಶದಿಂದ ಕೃಷಿ ಇಲಾಖೆಯೂ ಕೆಪೆಕ್ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್ ಅವರನ್ನು ತೆರವು ಅಧಿಕಾರಿಯನ್ನಾಗಿ ನೇಮಕ ಮಾಡಿದೆ. ಕರ್ನಾಟಕ ಸಾರ್ವಜನಿಕ ಆವರಣಗಳ (ಅನಧಿಕೃತ ನಿವಾಸಿಗಳ ತೆರವು ಅಧಿನಿಯಮ, 1974 (1974ರ ಕರ್ನಾಟಕ ಅಧಿನಿಯಮ 32ರ) ಸೆಕ್ಷನ್ 3(ಎ)ರ ಅನ್ವಯ ಅಧಿಕಾರವನ್ನು ಚಲಾಯಿಸಿ ಘಟಕವನ್ನು ವಾಪಸ್ ಕೆಪೆಕ್ ಸುಪರ್ದಿಗೆ ಪಡೆಯಲು ಅಧಿಕಾರಿಯೂ ಮುಂದಾಗಿದ್ದಾರೆ.
ಆನಂತರ ರೈತರ ತೋಟಗಾರಿಕ ಉತ್ಪನ್ನಗಳಿಗೆ ಪ್ಯಾಕ್‌ಹೌಸ್ ಮತ್ತು ಕೋಲ್ಡ್ ಚೈನ್‌ನಲ್ಲಿ ಸಂಸ್ಕರಣೆ, ಪ್ಯಾಕಿಂಗ್, ಸಂಗ್ರಹ ಸೌಲಭ್ಯ ಕಲ್ಪಿಸಲಿದೆ. ಈ ಮೂಲಕ ವಿದೇಶಕ್ಕೆ ರ್ತು ಮಾಡಲು ರೈತರಿಗೆ ಮತ್ತು ರೈತ ಸಂಸ್ಥೆಗಳಿಗೆ ಅನುಕೂಲಕರ ವಾತಾವರಣ ನಿರ್ಮಾಣಕ್ಕೆ ಕೆಪೆಕ್ ಹೊಸ ಯೋಜನೆಯನ್ನು ರೂಪಿಸಿದೆ.

ಅತ್ಯಾಧುನಿಕ ಉಪಕರಣ ಇರುವ ಪ್ಯಾಕ್‌ಹೌಸ್ :

ಪ್ಯಾಕ್‌ಹೌಸ್ ಒಳಗೆ ರೈತರ ಉತ್ಪನ್ನಗಳು ಬಂದ ಕೂಡಲೇ ಕ್ಲೀನಿಂಗ್, ಶ್ರೇಣೀಕರಣ, ಸಂಸ್ಕರಣೆ ಮಾಡಿ ಪ್ಯಾಕ್ ಆಗಿ ಶೀತಲ ಕೊಠಡಿಗೆ ಹೋಗಲಿದೆ. ಆನಂತರ ವಿದೇಶಕ್ಕೆ ರ್ತು ಅಥವಾ ಸ್ಥಳೀಯ ಮಾರುಕಟ್ಟೆಗೆ ರವಾನಿಸಲಾಗುತ್ತದೆ ಎಂದು ಸಿ.ಎನ್. ಶಿವಪ್ರಕಾಶ್ ವಿವರಿಸಿದರು.
ಇದರಲ್ಲಿ ಪ್ರಮುಖವಾಗಿ ಮಾವು, ದಾಳಿಂಬೆ, ಬಾಳೆ ಹಣ್ಣು, ಎಲೆ ಒಳಗೊಂಡ ತರಕಾರಿಗಳನ್ನು ಸಂಸ್ಕರಣೆ ಮಾಡಲಾಗುತ್ತದೆ. ಮಾವಿನ ಹಣ್ಣಿನ ತೊಟ್ಟು ಮುರಿದು ಹಾಲು ಹೊರಗೆ ತೆಗೆದು ತೊಳೆದು ಗಾತ್ರ ಶ್ರೇಣೀಕರಣ ಮಾಡಲಾಗುವುದು. ವಿದೇಶದಿಂದ ತಂದಿರುವ ಯಂತ್ರದ ಮೂಲಕ ಮಾವಿನ ಹಣ್ಣಿನ ಒಳಗಿರುವ ೈಬರ್ ಪತ್ತೆ ಮಾಡಲಾಗುತ್ತದೆ. ಪ್ಯಾಕಿಂಗ್ ಮಾಡಿ ರ್ತು ಮಾಡಲಾಗುತ್ತದೆ. ದಾಳಿಂಬೆ, ಬಾಳೆ ಹಣ್ಣು, ತರಕಾರಿಗಳು ಸಂಸ್ಕರಣೆ ಮಾಡಲಾಗುತ್ತದೆ. ಇದರ ನಿರ್ವಹಣೆಗೆ ತೋಟಕಾರಿಗೆ, ಕೃಷಿ ಇಲಾಖೆಯಲ್ಲಿ ಅಧಿಕಾರಿಗಳು ಇದ್ದಾರೆ. ಮಾವು ಅಭಿವೃದ್ಧಿ ನಿಗಮ ಜತೆಗೆ ಸೇರಿಕೊಂಡು ನಿರ್ವಹಣೆ ಮಾಡಲು ಸಿದ್ಧತೆ ನಡೆಸಲಾಗಿದೆ ಎಂದು ಸಿ.ಎನ್. ಶಿವಪ್ರಕಾಶ್ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net