ಬಡವರ ಕೆಲಸ ಮಾಡುವುದೇ ರಾಜಕಾರಣ

ಮುಖ್ಯಮಂತ್ರಿ ವಿಶೇಷ ಅನುದಾನದಡಿ ಶಹಾಪುರ ಬಾಪುಗೌಡ ಬಡಾವಣೆಯಲ್ಲಿ ಪ್ರಗತಿಯಲ್ಲಿರುವ ಕನಕ ಮತ್ತು ವೀರಶೈವ ಭವನ ಕಟ್ಟಡಗಳ ಕಾಮಗಾರಿಯನ್ನು ಮಂಗಳವಾರ ಶಾಸಕ ಶರಣಬಸಪ್ಪ ದರ್ಶನಾಪುರ ಪರಿಶೀಲಿಸಿದರು. ಗೌಡಪ್ಪಗೌಡ ಆಲ್ದಾಳ, ಶಿವುಮಹಾಂತ ಚಂದಾಪುರ, ಯಲ್ಲಪ್ಪ ನರಿ, ಈರಣಗೌಡ ಮಲ್ಲಾಬಾದಿ, ಶಾಂತಗೌಡ ನಾಗನಟಿಗಿ, ಭೀಮಾಶಂಕರ ಹುಲ್ಕಲ್​ ಇತರರಿದ್ದರು.
ಮುಖ್ಯಮಂತ್ರಿ ವಿಶೇಷ ಅನುದಾನದಡಿ ಶಹಾಪುರ ಬಾಪುಗೌಡ ಬಡಾವಣೆಯಲ್ಲಿ ಪ್ರಗತಿಯಲ್ಲಿರುವ ಕನಕ ಮತ್ತು ವೀರಶೈವ ಭವನ ಕಟ್ಟಡಗಳ ಕಾಮಗಾರಿಯನ್ನು ಮಂಗಳವಾರ ಶಾಸಕ ಶರಣಬಸಪ್ಪ ದರ್ಶನಾಪುರ ಪರಿಶೀಲಿಸಿದರು. ಗೌಡಪ್ಪಗೌಡ ಆಲ್ದಾಳ, ಶಿವುಮಹಾಂತ ಚಂದಾಪುರ, ಯಲ್ಲಪ್ಪ ನರಿ, ಈರಣಗೌಡ ಮಲ್ಲಾಬಾದಿ, ಶಾಂತಗೌಡ ನಾಗನಟಿಗಿ, ಭೀಮಾಶಂಕರ ಹುಲ್ಕಲ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ದರ್ಶನಾಪುರ ಅಭಿಮತ
  • ಶಹಾಪುರದಲ್ಲಿ ವೀರಶೈವ ಭವನದ ಕಾಮಗಾರಿ ಪರಿಶೀಲನೆ
ಶಹಾಪುರ: ಆರೋಗ್ಯವಂತ ಸಮಾಜ ಕಟ್ಟುವುದು ಮತ್ತು ಬಡವರ ಏಳಿಗೆಗಾಗಿ ಕೆಲಸ ಮಾಡುವುದೇ ನಿಜವಾದ ರಾಜಕಾರಣವಾಗಿದ್ದು, ಎಲ್ಲ ಸಮುದಾಯದವರಿಗೂ ಭವನ ನಿರ್ಮಾಣಕ್ಕೆ ಆದ್ಯತೆ ನೀಡಿ ಬಡವರಿಗೆ ಸಭೆ ಸಮಾರಂಭ ಮಾಡಲು ಭವನಗಳು ಪೂರಕವಾಗಲಿದೆ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಹೇಳಿದರು.
ನಗರದ ಬಾಪುಗೌಡ ಬಡಾವಣೆಯಲ್ಲಿ ನಡೆಯುತ್ತಿರುವ ಮುಖ್ಯಮಂತ್ರಿ ವಿಶೇಷ ಅನುದಾನದಡಿ 2.20 ಕೋಟಿ ರೂ. ವೆಚ್ಚದಲ್ಲಿ ಕನಕ ಭವನ ಮತ್ತು 2 ಕೋಟಿ ರೂ. ವೆಚ್ಚ ವೀರಶೈವ ಭವನ, ಆಶ್ರಯ ಲೇಔಟ್​ ಸರ್ವೇ ನಂ. 120ರಲ್ಲಿ 2 ಕೋಟಿ, ಐಡಿಎಸ್​ಎಂಟಿ ಲೇಜೌಟ್​ 70 ಲಕ್ಷ್ಯ ರೂ. ವೆಚ್ಚದ ಕಾಮಗಾರಿ ಪರಿಶೀಲಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಈಗಾಗಲೇ ಗ್ರಾಮೀಣ ಭಾಗಗಳಲ್ಲಿ ಬಹುತೇಕ ಗ್ರಾಮಗಳಲ್ಲಿ ಆಯಾ ಸಮುದಾಯದಗಳ ಭವನ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದ್ದು, ಇದೀಗ ಕೋಟ್ಯಂತರ ರೂ. ವೆಚ್ಚದಲ್ಲಿ ನಗರ ಪ್ರದೇಶದಲ್ಲಿ ಭವನಗಳು ಸಜ್ಜುಗೊಳ್ಳಲಿದ್ದು, ನಗರ ವ್ಯಾಪ್ತಿಯ ಜನತೆಗೆ ಅನುಕೂಲವಾಗಲಿದೆ. ಸುಸಜ್ಜಿತ ಕಟ್ಟಡದ ಜತೆಗೆ ಮೂಲ ಸೌಕರ್ಯ ಒಳಗೊಂಡಿದೆ. ಅಂದಾಜು ಪಟ್ಟಿಯ ತಕ್ಕಂತೆ ಕಾಮಗಾರಿ ಮಾಡಲು ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರದಲ್ಲಿರುವ ಸಂಗೂಳ್ಳಿ ರಾಯಣ್ಣರ ಮೂರ್ತಿ ಉದ್ಘಾಟನೆಗೆ ಮುಖ್ಯಮಂತ್ರಿ ಡಿ.ಕೆ.ಶಿವುಕುಮಾರ್​ ಹಾಗೂ ಸಿದ್ದರಾಮಯ್ಯ ಅವರ ಬಳಿ ದಿನಾಂಕ ಪಡೆದು ಉದ್ಘಾಟನೆ ಮಾಡಲಾಗುವುದು. ಈಗಾಗಲೇ ಪ್ರಗತಿಯಲ್ಲಿರುವ ಬಹುತೇಕ ಅಭಿವೃದ್ಧಿ ಕಾಮಗಾರಿಗಳು 2026ರ ಅಂತ್ಯದೊಳಗೆ ಪೂರ್ಣಗೊಂಡು ಚಾಲನೆ ಸಿಗಲಿವೆ ಎಂದು ಆಶಾಭಾವ ವ್ಯಕ್ತಪಿಡಿಸಿದರು.
ಈ ವೇಳೆ ಗೌಡಪ್ಪಗೌಡ ಆಲ್ದಾಳ, ಶಿವುಮಹಾಂತ ಚಂದಾಪುರ, ಕುರುಬ ಸಮಾಜದ ತಾಲೂಕು ಅಧ್ಯಕ್ಷ ಯಲ್ಲಪ್ಪ ನರಿ, ಈರಣಗೌಡ ಮಲ್ಲಾಬಾದಿ, ಶಾಂತಗೌಡ ನಾಗನಟಿಗಿ, ಭೀಮಾಶಂಕರ ಹುಲ್ಕಲ್​, ಮಲ್ಲಣಗೌಡ ತಿಪ್ಪನಹಳ್ಳಿ, ಯಮನಪ್ಪ ಅಗಸ್ಥಾಳ, ಶರಣಗೌಡ ಚಾಮನಾಳ, ಭೀಮನಗೌಡ ದರಿಯಾಪುರ, ರಾಯಪ್ಪ ಚುಲವಾದಿ, ಶರಣಬಸವ ಸೈದಾಪುರ, ಸಿದ್ದಪ್ಪ ಕನ್ಯಾಕೊಳ್ಳೂರ , ರವಿ ರಾಜಾಪುರ ಇತರರಿದ್ದರು.
ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧ
ಸಮುದಾಯದ ನಾಯಕರ ಮನವಿಗೆ ತಕ್ಕಂತೆ ಅಗತ್ಯಕ್ಕನುಗುಣವಾದ ಸೌಕರ್ಯ ಸಹ ಕಲ್ಪಿಸಲಾಗಿದೆ. ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿಯಲ್ಲಿ ಬಹುತೇಕ ಮಠ, ಮಂದಿರ, ಕಲ್ಯಾಣ ಮಂಟಪಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಕುರುಬ ಸಮಾಜಕ್ಕೆ ಹೆಚ್ಚಿನ ಒತ್ತು ನೀಡಿ ಅನುದಾನ ಒದಗಿಸಲಾಗುತ್ತಿದೆ. ನಮ್ಮ ಸರ್ಕಾರ ನುಡಿದಂತೆ ನಡೆಯುವುದರ ಜತೆಗೆ ಅಭಿವೃದ್ಧಿಗೆ ಬದ್ಧವಾಗಿದ್ದೇವೆ ಶಾಸಕ ದರ್ಶನಾಪುರ ಹೇಳಿದರು.
ಗುಣಮಟ್ಟದ ಕಾಮಗಾರಿ ಮಾಡಿ
ಕನಕ ಭವನ ವೀಕ್ಷಣೆ ಬಳಿಕ ಸರ್ವೇ ನಂ. 120ರ ಆಶ್ರಯ ಲೇಜೌಟ್​ನಲ್ಲಿ ಪ್ರಗತಿಯಲ್ಲಿರುವ ರಸ್ತೆ, ಚರಂಡಿ ಕಾಮಗಾರಿ ವೀಸಿ ಗುಣಮಟ್ಟದ ವಸ್ತಗಳನ್ನು ಬಳಸಿ ಕಾಮಗಾರಿ ಮಾಡಲು ಶಾಸಕರು ಸಂಭಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ಗುರುನಾಥರೆಡ್ಡಿ ಹಳಿಸಗರ, ಆಶ್ರಯ ಸಮಿತಿ ಅಧ್ಯಕ್ಷ ವಸಂತ ಸುರಪುರಕರ್​, ಎಇಇ ನಾನಾಸಾಬ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net