ಪಿಎಂ ಶ್ರಮಯೋಗಿ ಯೋಜನೆ ಪ್ರಗತಿ ಸಾಧಿಸಿ

ಪ್ರಧಾನಮಂತ್ರಿ ಶ್ರಮಯೋಗಿ ಮಾನಧನ ಯೋಜನೆಯಡಿ ಕಲಬುರಗಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್​ ವಿಶೇಷ ನೋಂದಣಿ ಅಭಿಯಾನದ ಕರಪತ್ರ ಬಿಡುಗಡೆ ಮಾಡಿದರು. ಸಮದ್​ ಪಟೇಲ್​, ಶರಣಪ್ಪ ಹಳಿಮನಿ, ಮೊಹಮ್ಮದ್​ ಬಶೀರ್​ ಅನ್ಸಾರಿ, ಶಂಕ್ರಮ್ಮ ಢವಳಗಿ, ಸಂತೋಷ ಕುಲಕರ್ಣಿ ಇತರರಿದ್ದರು.
ಪ್ರಧಾನಮಂತ್ರಿ ಶ್ರಮಯೋಗಿ ಮಾನಧನ ಯೋಜನೆಯಡಿ ಕಲಬುರಗಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್​ ವಿಶೇಷ ನೋಂದಣಿ ಅಭಿಯಾನದ ಕರಪತ್ರ ಬಿಡುಗಡೆ ಮಾಡಿದರು. ಸಮದ್​ ಪಟೇಲ್​, ಶರಣಪ್ಪ ಹಳಿಮನಿ, ಮೊಹಮ್ಮದ್​ ಬಶೀರ್​ ಅನ್ಸಾರಿ, ಶಂಕ್ರಮ್ಮ ಢವಳಗಿ, ಸಂತೋಷ ಕುಲಕರ್ಣಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಿಸಿ ಬಿ.ಫೌಜಿಯಾ ತರನ್ನುಮ್​ ಸೂಚನೆ
  • ವಿಶೇಷ ನೋಂದಣಿ ಅಭಿಯಾನ ಸಭೆ
ಕಲಬುರಗಿ: ಜಿಲ್ಲೆಯ ಅಸಂಟಿತ ಕಾರ್ಮಿಕರ ಭವಿಷ್ಯಕ್ಕಾಗಿ ಪಿಎಂ ಶ್ರಮಯೋಗಿ ಮಾನಧನ (ಪಿಎಂಎಸ್​ವೈಎಂ) ಯೋಜನೆಯಡಿ ಜ.15ರಂದು ಶುರುವಾದ ವಿಶೇಷ ನೋಂದಣಿ ಪ್ರಕ್ರಿಯೆ ಮಾ.15ರೊಳಗೆ ಶೇ.100 ಪ್ರಗತಿ ಸಾಧಿಸಲು ವಿವಿಧ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್​ ಸೂಚಿಸಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಗುರುವಾರ ಕರೆದಿದ್ದ ವಿಶೇಷ ನೋಂದಣಿ ಅಭಿಯಾನ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ಕಾರ್ಮಿಕ ಹಾಗೂ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಜಿಲ್ಲೆಯ ಅಸಂಟಿತ ಕಾರ್ಮಿಕರಿಗೆ ಈ ಯೋಜನೆ ಕುರಿತು ಮಾಹಿತಿ ನೀಡಿ ನೋಂದಣಿಗೆ ಪ್ರೋತ್ಸಾಹಿಸಬೇಕು ಎಂದರು.
ಜಿಲ್ಲೆಯಲ್ಲಿ ಸುಮಾರು 8,014 ಕಾರ್ಮಿಕರು ನೋಂದಣಿಯಾಗಿದ್ದು, ಕನಿಷ್ಠ 30,000 ಕಾರ್ಮಿಕರ ನೋಂದಣಿ ಗುರಿ ಸಾಧಿಸಲು ಗ್ರಾಮ ಪಂಚಾಯಿತಿ, ಹೋಬಳಿ ಮತ್ತು ತಾಲೂಕು ಕೇಂದ್ರಗಳಲ್ಲಿ ವಿಶೇಷ ಶಿಬಿರ ಆಯೋಜಿಸಬೇಕು. ರಾಜ್ಯ ಸರ್ಕಾರದ ಗುರಿಗಿಂತ ಉತ್ತಮ ಸಾಧನೆ ಮಾಡಬೇಕು. 18&40 ವರ್ಷದ ಅಸಂಟಿತ ಕಾರ್ಮಿಕರ ಮಾಸಿಕ ಆದಾಯ 15,000ಕ್ಕಿಂತ ಕಡಿಮೆ ಇರಬೇಕು. ಆದಾಯ ತೆರಿಗೆ ವ್ಯಾಪ್ತಿಗೆ ಬರುವವರು ಅರ್ಹರಲ್ಲ. ವಯಸ್ಸಿಗೆ ಅನುಗುಣ ಮಾಸಿಕ 55&200 ರೂ. ವಂತಿಗೆ ಪಾವತಿಸಬೇಕು. ಕೇಂದ್ರ ಸರ್ಕಾರದ ಅಷ್ಟೇ ವಂತಿಗೆ ಬ್ಯಾಂಕ್​ ಖಾತೆಯಲ್ಲಿ ಸಂಗ್ರಹಿಸಲಾಗುತ್ತದೆ. 60 ವರ್ಷ ಪೂರ್ಣಗೊಂಡ ನಂತರ ಮಾಸಿಕ 3,000 ರೂ. ಪಿಂಚಣಿ ಸೌಲಭ್ಯ ಪಡೆಯಬಹುದು. 60 ವರ್ಷದೊಳಗೆ ಫಲಾನುಭಮಿ ಮರಣ ಹೊಂದಿದ್ದಲ್ಲಿ ಸಂಗಾತಿಗೆ ಶೇ.50 ಕುಟುಂಬ ಪಿಂಚಣಿ ಸೌಲಭ್ಯ ಸಿಗಲಿದೆ ಎಂದು ತಿಳಿಸಿದರು.
ಆಧಾರ್​ ಕಾರ್ಡ್​, ಮೊಬೈಲ್​ ಸಂಖ್ಯೆ (ಆಧಾರ್​ಗೆ ಲಿಂಕ್​) ಮತ್ತು ಇ&ಶ್ರಮ ಕಾರ್ಡ್​ನೊಂದಿಗೆ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ನೋಂದಾಯಿಸ್ಳಬಹುದು. ಮೊದಲ ಕಂತಿನ ಮೊತ್ತವನ್ನು ಕಾರ್ಮಿಕರು ಪಾವತಿಸಬೇಕಿದ್ದು, ನಂತರದ ಕಂತುಗಳು ಬ್ಯಾಂಕ್​ ಖಾತೆಯಿಂದ ಆಟೋ&ಡೆಬಿಟ್​ ಆಗಲಿದೆ. ಹೆಚ್ಚಿನ ಮಾಹಿತಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆ ಕಚೇರಿ, ಎಲ್​ಐಸಿ, ಇಪಿಎಫ್​ಒ ಮತ್ತು ಇಎಫ್​ಐಸಿ ಕಚೇರಿ ಹಾಗೂ ಕಾರ್ಮಿಕ ಸಹಾಯವಾಣಿ 155214 , ಟೋಲ್​ಫ್ರಿ 1800&267&6888ಗೆ ಸಂಪರ್ಕಿಸಬಹುದು ಎಂದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಶರಣಪ್ಪ ಹಳಿಮನಿ ಕಾರ್ಯಕ್ರಮ ಕುರಿತು ಪಿಪಿಟಿ ಮೂಲಕ ವಿವರಿಸಿದರು. ಸಹಾಯಕ ಕಾರ್ಮಿಕ ಆಯುಕ್ತ ಮೊಹಮ್ಮದ್​ ಬಶೀರ್​ ಅನ್ಸಾರಿ, ಜಂಟಿ ಕೃಷಿ ನಿರ್ದೇಶಕ ಸಮದ್​ ಪಟೇಲ್​, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಶಂಕ್ರಮ್ಮ ಢವಳಗಿ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ನಿರ್ದೇಶಕ ಸಂತೋಷ ಕುಲಕರ್ಣಿ ಇತರರಿದ್ದರು.
"

ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ಸಿಬ್ಬಂದಿ, ನರೇಗಾ ಕಾರ್ಮಿಕರು, ಆಟೋರಿಾ ಚಾಲಕರು, ಮೀನುಗಾರರು ಮತ್ತು ಕೃಷಿ ಕಾರ್ಮಿಕರ ಸಂಟನೆಗಳು ತಮ್ಮ ಸದಸ್ಯರಲ್ಲಿ ಜಾಗೃತಿ ಮೂಡಿಸಿ ನೋಂದಣಿಗೆ ಸಹಕರಿಸಬೇಕು

.> ಬಿ.ಫೌಜಿಯಾ ತರನ್ನುಮ್

​ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net