ಕೋಟೆ ಪುನಶ್ಚೇತನ ಯೋಜನೆಗೆ ಅನುಮೋದನೆ ನೀಡಿ

ಕಲಬುರಗಿ ಐತಿಹಾಸಿಕ ಕೋಟೆ ಸಂರಣೆ ಮತ್ತು ಪುನಶ್ಚೇತನಕ್ಕಾಗಿ ರೂಪಿಸಲಾದ 20 ಕೋಟಿ ರೂ. ವೆಚ್ಚದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡುವಂತೆ ಸಂಸದ ರಾಧಾಕೃಷ್ಣ ದೊಡ್ಡಮನಿ ಕೇಂದ್ರ ಸಂಸತಿ ಸಚಿವ ಗಜೇಂದ್ರಸಿಂಗ್​ ಶೇಖಾವತ್​ ಅವರಿಗೆ ದೆಹಲಿಯಲ್ಲಿ ಸೋಮವಾರ ಮನವಿ ಸಲ್ಲಿಸಿದರು.

Published on

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಸಚಿವರ ಶೇಖಾವತ್​ಗೆ ಸಂಸದ ರಾಧಾಕೃಷ್ಣ ದೊಡ್ಡಮನಿ ಮನವಿ
ಕಲಬುರಗಿ: ಐತಿಹಾಸಿಕ ಕಲಬುರಗಿ ಕೋಟೆ ಸಂರಣೆ ಮತ್ತು ಪುನಶ್ಚೇತನಕ್ಕಾಗಿ 20 ಕೋಟಿ ರೂ.ವೆಚ್ಚದ ಯೋಜನೆ ರೂಪಿಸಿದ್ದು, ತಣ ಆಡಳಿತಾತ್ಮಕ ಅನುಮೋದನೆ ನೀಡಬೇಕು ಎಂದು ಸಂಸದ ರಾಧಾಕೃಷ್ಣ ದೊಡ್ಡಮನಿ ಒತ್ತಾಯಿಸಿದ್ದಾರೆ.
ಈ ಕುರಿತು ದೆಹಲಿಯಲ್ಲಿ ಕೇಂದ್ರ ಸಂಸತಿ ಸಚಿವ ಗಜೇಂದ್ರಸಿಂಗ್​ ಶೇಖಾವತ್​ ಅವರಿಗೆ ಸೋಮವಾರ ಮನವಿಪತ್ರ ಸಲ್ಲಿಸಿದ್ದು, ಅಮೃತ್​ 2.0 ಅಡಿ ಈ ಯೋಜನೆ ಪ್ರಸ್ತಾಪಿಸಲಾಗಿದ್ದು, ಕೋಟೆ ಕಂದಕದ ಜಲಮೂಲ ಮರುಜೀವಗೊಳಿಸುವುದು, ಉದ್ಯಾನವನ ಅಭಿವೃದ್ಧಿ, ಭೂದೃಶ್ಯ ನಿರ್ಮಾಣ (ಲ್ಯಾಂಡ್​ ಸ್ಕೇಪಿಂಗ್​), ಸಸಿ ನೆಡುವುದು ಹಾಗೂ ವಿವಿಧ ಪರಿಸರ ಸುಧಾರಣಾ ಕಾಮಗಾರಿ ಒಳಗೊಂಡಿದೆ. ಸ್ಮಾರಕವನ್ನು ಸಂರಸುವುದರ ಜತೆಗೆ ಇದನ್ನು ಹಸಿರು ಪಾರಂಪರಿಕ ತಾಣವಾಗಿ ಅಭಿವೃದ್ಧಿಪಡಿಸುವುದು ಇದರ ಮುಖ್ಯ ಉದ್ದೇಶ ಎಂದು ವಿವರಿಸಿದ್ದಾರೆ.
ಈ ಪ್ರಸ್ತಾವನೆ ಪ್ರಸ್ತುತ ಭಾರತೀಯ ಪುರಾತತ್ವ ಸರ್ವೇಣಾ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಬಾಕಿಯಿದ್ದು, ಕೇಂದ್ರ ಸಂಸತಿ ಸಚಿವರು ಮಧ್ಯಪ್ರವೇಶಿಸಿ ಶ್ರೀ ಆಡಳಿತಾತ್ಮಕ ಮಂಜೂರಾತಿ ದೊರಕಿಸಿಕೊಡಲು ಎಎಸ್​ಐ ಜತೆ ಸಮನ್ವಯ ಸಾಧಿಸಬೇಕು ಎಂದು ಮನವಿ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net