ತೋಟಗಾರಿಕೆ ಕಾಲೇಜಿನಿಂದ ‘ಸಸ್ಯ ಸಂತೆ’

plant fair
plant fair
Published on

ಪ್ರಮುಖ ಮುಖ್ಯಾಂಶಗಳು

  • * ಜಿಕೆವಿಕೆಯಲ್ಲಿರುವ ಕಾಲೇಜಿನ ಆವರಣದಲ್ಲಿ 3 ದಿನ ಆಯೋಜನೆ
ಬೆಂಗಳೂರು: ಬೆಂಗಳೂರಿನ ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಹಾಗೂ ತೋಟಗಾರಿಕೆ ಮಹಾವಿದ್ಯಾಲಯ ಸಹಯೋಗದಲ್ಲಿ ಜು.10ರಿಂದ 12 ರವರೆಗೆ ನಗರದ ಜಿಕೆವಿಕೆ ಆವರಣದಲ್ಲಿ ಮೂರು ದಿನಗಳ ಕಾಲ ‘ಸಸ್ಯ ಸಂತೆ‘ ಆಯೋಜಿಸಲಾಗಿದೆ.
ಸಂಸದ ಡಾ. ಸಿ.ಎನ್. ಮಂಜುನಾಥ್ ಅವರು ಈ ಸಸ್ಯ ಸಂತೆಯನ್ನು ಉದ್ಘಾಟಿಸಲಿದ್ದಾರೆ. ಶಾಸಕ ಎಸ್.ಆರ್. ವಿಶ್ವನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ. ಬಿ. ಕ್ರುದೀನ್ ಮತ್ತು ವಿಸ್ತರಣಾ ನಿರ್ದೇಶಕ ಡಾ. ವೆಂಕಟೇಶಲು, ಬೆಂಗಳೂರು ತೋಟಗಾರಿಕೆ ಮಹಾವಿದ್ಯಾಲಯದ ವಿಶ್ರಾಂತ ಡೀನ್ ಡಾ. ಜಿ.ಎಸ್.ಕೆ. ಸ್ವಾಮಿ, ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟ ಕೇಂದ್ರದ ನಿರ್ದೇಶಕ ಡಾ. ಕೆ.ಆರ್. ವಾಸುದೇವ ಇತರರು ಭಾಗವಹಿಸಲಿದ್ದಾರೆ.
ಮೂರು ದಿನಗಳ ಈ ಸಂತೆಯಲ್ಲಿ ಜಾನಪದ ನೃತ್ಯ, ಮೆರವಣಿಗೆ, ಜಾನಪದ ಗಾಯನ ಹಾಗೂ ಭರತನಾಟ್ಯ ಪ್ರದರ್ಶನ ಇರಲಿದೆ. ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಲು 150ಕ್ಕೂ ಅಧಿಕ ಮಳಿಗೆಗಳ ವ್ಯವಸ್ಥೆ ಮಾಡಲಾಗಿದೆ. ಹಣ್ಣಿನ ಗಿಡಗಳು, ಹೂವು ಮತ್ತು ಅಲಂಕಾರಿಕ ಸಸ್ಯಗಳು, ಪ್ಲಾಂಟೇಶನ್, ಔಷಧೀಯ ಹಾಗೂ ಸುಗಂಧಿತ ಸಸ್ಯಗಳು ದೊರೆಯಲಿವೆ ಎಂದು ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net