ವ್ಯಕ್ತಿತ್ವ ವಿಕಸನಕ್ಕೆ ಎನ್​ಎಸ್​ಎಸ್​ ಸಹಕಾರಿ

ಇಟಗಿ ಗ್ರಾಮದ ಬಿ.ಎಂ.ಸಾಣಿಕೊಪ್ಪ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಎನ್​ಎಸ್​ಎಸ್​ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಆರ್​.ಬಿ.ಹುಣಶೀಕಟ್ಟಿ, ಬಸವರಾಜ ಸವದಿ, ಶಿವಾನಂದ ಸುಣಗಾರ, ಎಂ.ಆರ್​.ಶಹಾಪುರ, ಗಣೇಶ ದುರ್ಗಣ್ಣವರ, ಕೆ.ಡಿ.ಕರ್ಕಿ, ವಿದ್ಯಾರ್ಥಿಗಳು ಇದ್ದರು.

Published on
ಇಟಗಿ: ಸೇವಾ ಮನೋಭಾವ ಹಾಗೂ ನಾಯಕತ್ವ ಗುಣಗಳೊಂದಿಗೆ ಸರ್ವತೋಮುಖ ವ್ಯಕ್ತಿತ್ವ ವಿಕಸನಕ್ಕೆ ವೇದಿಕೆ ಕಲ್ಪಿಸುವಲ್ಲಿ ಎನ್​ಎಸ್​ಎಸ್​ ಸಹಕಾರಿಯಾಗಿದೆ ಎಂದು ಪ್ರೊ.ಈಶ್ವರ ಕರಮಳ್ಳನವರ ಹೇಳಿದರು. ಗ್ರಾಮದ ಜನತಾ ಶಿಣ ಪ್ರಸಾರ ಸಮಿತಿಯ ಬಿ.ಎಂ.ಸಾಣಿಕೊಪ್ಪ ಪದವಿ ಕಾಲೇಜಿನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಎನ್​ಎಸ್​ಎಸ್​ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಪ್ರಾಚಾರ್ಯ ಆರ್​.ಬಿ.ಹುಣಶೀಕಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಎನ್​ಎಸ್​ಎಸ್​ನಂತಹ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯ ಭಾಗವಹಿಸುವ ಮೂಲಕ ದೇಶದ ಪ್ರಗತಿ ಮತ್ತು ಸುಸ್ಥಿರ ಅಭಿವೃದ್ಧಿ ಪ್ರವರ್ತಕರಾಗಬೇಕು ಎಂದರು. ಕಲ್ಮೇಶ ಮೆಳವಂಕಿಗೆ ಅತ್ಯುತ್ತಮ ಎನ್​ಎಸ್​ಎಸ್​ ಸ್ವಯಂ ಸೇವಕ ಪ್ರಶಸ್ತಿ ಹಾಗೂ ಎಲ್ಲ ಶಿಬಿರಾರ್ಥಿಗಳಿಗೆ ಪ್ರಶಂಸನಾ ಪತ್ರ ವಿತರಿಸಲಾಯಿತು. ಎನ್​ಎಸ್​ಎಸ್​ ಶಿಬಿರಾಧಿಕಾರಿ ಬಸವರಾಜ ಸವದಿ, ಸಹಶಿಬಿರಾಧಿಕಾರಿ ಶಿವಾನಂದ ಸುಣಗಾರ, ಪ್ರಾಧ್ಯಾಪಕರಾದ ಎಂ.ಆರ್​.ಶಹಾಪುರ, ಗಣೇಶ ದುರ್ಗಣ್ಣವರ, ಲಲಿತಾ ಗೌಡ, ಬಿ.ಕೆ.ನಾವಲಗಟ್ಟಿ, ಶ್ರೀಧರ ಹಿರೇಮಠ ಇತರರಿದ್ದರು. ತೇಜಸ್ವಿನಿ ಹಂಚಿನಮನಿ ಸ್ವಾಗತಿಸಿದರು. ಸುಧಾರಾಣಿ ಶೆಟ್ಟೆನ್ನವರ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net