ಹುಮನಾಬಾದ್ ಹೊರವಲಯದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ ನೂತನ ನಿರ್ವಾಹಕರಿಗಾಗಿ ಗುರುವಾರ ಆಯೋಜಿಸಿದ್ದ ಪರಿಚಯಾತ್ಮ ಕಾರ್ಯಕ್ರಮ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಮುಖ್ಯ ಕಾನೂನು ಅಧಿಕಾರಿ ಎಸ್.ಡಿ. ಭಾವಿಕಟ್ಟಿ ಉದ್ಘಾಟಿಸಿದರು. ಸಿ.ಎಸ್. ಫುಲೇಕರ್, ಮಲ್ಲಿಕಾರ್ಜುನ ದೇಗಲ್ಮಡಿ, ಮಹಾದೇವಪ್ಪ ಉಪ್ಪಿನ, ಸುಭಾಫಿ ಬಿರಾದಾರ್, ಬಸವರಾಜ ಚಾಮರಡ್ಡಿ ಇದ್ದರು.
ಹುಮನಾಬಾದ್: ಬಸ್ ನಿರ್ವಾಹಕರು ಮತ್ತು ಚಾಲಕರು ಶಿಸ್ತು, ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದಾಗ ಮಾತ್ರ ಪ್ರಯಾಣಿಕರಿಗೆ ಸುರಕ್ಷಿತ ಹಾಗೂ ಗುಣಮಟ್ಟದ ಸೇವೆ ಒದಗಿಸಲು ಸಾಧ್ಯ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಮುಖ್ಯ ಕಾನೂನು ಅಧಿಕಾರಿ ಎಸ್.ಡಿ. ಭಾವಿಕಟ್ಟಿ ಹೇಳಿದರು.
ಪಟ್ಟಣದ ಹೊರವಲಯದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ ನೂತನ ನಿರ್ವಾಹಕರಿಗಾಗಿ ಗುರುವಾರ ಆಯೋಜಿಸಿದ್ದ ಪರಿಚಯಾತ್ಮಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವುದು, ಸಮಯಪ್ರಜ್ಞೆ ಪಾಲಿಸುವುದು ಹಾಗೂ ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸುವುದು ಪ್ರತಿಯೊಬ್ಬ ನಿರ್ವಾಹಕ ಮತ್ತು ಚಾಲಕರ ಜವಾಬ್ದಾರಿಯಾಗಿದೆ. ಸಂಸ್ಥೆಯ ಗೌರವ ಹೆಚ್ಚಿಸುವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಸಂಸ್ಥೆಯ ಸಂಚಾರ ವ್ಯವಸ್ಥಾಪಕ ಸಿ.ಎಸ್.ಫುಲೇಕರ್, ಪ್ರಾದೇಶಿಕ ತರಬೇತಿ ಕೇಂದ್ರದ ಪ್ರಾಂಶುಪಾಲ ಮಲ್ಲಿಕಾರ್ಜುನ ದೇಗಲ್ಮಡಿ, ಮಹಾದೇವಪ್ಪ ಉಪ್ಪಿನ, ಸುಭಾಷ ಬಿರಾದಾರ್, ಬಸವರಾಜ ಚಾಮರಡ್ಡಿ ಇತರರಿದ್ದರು.