ದೂರು ಬರದ ಹಾಗೆ ಕೆಲಸ ನಿರ್ವಹಿಸಿ

ಹುಲಸೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಸಿದ್ರಾಮ ಕಾಮಣ್ಣ ಅಧ್ಯಕ್ಷತೆಯಲ್ಲಿ ಸೋಮವಾರ ಕರೆದಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಪಂ ಇಒ ಮಹಾದೇವ ಜಮ್ಮು, ಸದಸ್ಯರಾದ ತ್ರಿಬಕರಾವ ಜಿವಾಯಿ, ವಿನಾಯಕ ಪವಾರ, ಶಿವರಾಜ ಇತರರಿದ್ದರು.
ಹುಲಸೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಸಿದ್ರಾಮ ಕಾಮಣ್ಣ ಅಧ್ಯಕ್ಷತೆಯಲ್ಲಿ ಸೋಮವಾರ ಕರೆದಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಪಂ ಇಒ ಮಹಾದೇವ ಜಮ್ಮು, ಸದಸ್ಯರಾದ ತ್ರಿಬಕರಾವ ಜಿವಾಯಿ, ವಿನಾಯಕ ಪವಾರ, ಶಿವರಾಜ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಿದ್ರಾಮ ಕಾಮಣ್ಣ ಸೂಚನೆ
  • ಹುಲಸೂರಿನಲ್ಲಿ ಗ್ಯಾರಂಟಿ ಯೋಜನೆ ಪ್ರಗತಿ ಪರಿಶೀಲನಾ ಸಭೆ
 ಹುಲಸೂರು: ಸರ್ಕಾರದ ಮಹತ್ವಕಾಂಕ್ಷಿ ಗ್ಯಾರಂಟಿ ಯೋಜನೆಗಳ ಸದುಪಯೋಗ ಎಲ್ಲರೂ ಪಡೆದುಕೊಳ್ಳಬೇಕು. ಅಧಿಕಾರಿಗಳು ಸಾರ್ವಜನಿಕರ ದೂರು ಬರೆದ ಹಾಗೆ ಕೆಲಸ ನಿರ್ವಹಿಸಬೇಕು ಎಂದು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಸಿದ್ರಾಮ ಕಾಮಣ್ಣ        ಸೂಚಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ಸೋಮವಾರ ಕರೆದಿದ್ದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಡವರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಬೇಕು ತಿಳಿಸಿದರು.
ತಾಲೂಕಿನಲ್ಲಿ ಒಟ್ಟು 10,140 ಪಡಿತರ ಚೀಟಿಗಳಿದ್ದು, ಇತ್ತೀಚೆಗೆ ನೂರಕ್ಕೂ ಹೆಚ್ಚು ಪಡಿತರ ಚೀಟಿಗಳು ಹೆಚ್ಚಳವಾಗಿವೆ. 10,289 ಗ್ರಹಲಕ್ಷಿ$್ಮ ಫಲಾನುಭವಿಗಳಿದ್ದು, ಮೇ ತಿಂಗಳಲ್ಲಿ 7,825 ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಮೀರಖಲ್​ ಗ್ರಾಮದಿಂದ ಬೀದರ್​ಗೆ ತಲುಪಲು ಸಂಜೆ ವೇಳೆ ಬಸ್​ ಸೌಲಭ್ಯ ಕಲ್ಪಿಸುವಂತೆ ಸದಸ್ಯರಿಂದ ವ್ಯಕ್ತವಾದ ಬೇಡಿಕೆಗೆ ಪ್ರತಿಕ್ರಿಯಿಸಿದ ಕೆಕೆಆರ್​ಟಿಸಿ ಅಧಿಕಾರಿಗಳು, ಆದಾಯ- ವೆಚ್ಚದ ವ್ಯತ್ಯಾಸದಿಂದ ಸದ್ಯಕ್ಕೆ ಹೊಸ ಬಸ್​ ಸಂಚಾರ ಆರಂಭಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
 ತಾಲೂಕಿನ ಜೆಸ್ಕಾಂ ಇಲಾಖೆಯಲ್ಲಿ ಕೇವಲ ಇಬ್ಬರು ಲೈನ್​ಮನ್​ಗಳು ಕಾರ್ಯನಿರ್ವಹಿಸುತ್ತಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್​ ಸಮಸ್ಯೆ ಪರಿಹಾರಕ್ಕೆ ವಿಳಂಬವಾಗುತ್ತಿದೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಇಇ ರಾಹುಲ್​ ಇಜಾರೆ, ಸರ್ಕಾರದಿಂದ ಹೊಸ ನೇಮಕಾತಿ ನಡೆಯದಿರುವುದರಿಂದ ಸಿಬ್ಬಂದಿ ಕೊರತೆ ಉಂಟಾಗಿದೆ ಎಂದರು.
ತಹಸೀಲ್ದಾರ್​ ಶಿವಾನಂದ ಮೇತ್ರೆ ಮಾತನಾಡಿ, ತಾಲೂಕಿನಲ್ಲಿ ಎಸ್​ಐಆರ್​ ಕಾರ್ಯ ಪೂರ್ಣಗೊಂಡಿದ್ದು, ಹೆಚ್ಚಿನ ಮಾಹಿತಿಗಾಗಿ ವೋಟರ್​ ಹೆಲ್ಪಲೈನ್​ ಬಳಸಬೇಕು. ಪ್ರತಿ ಮನೆಗೂ ಉಚಿತವಾಗಿ ಆದಾಯ ಮತ್ತು ಜಾತಿ ಪ್ರಮಾಣಪತ್ರ ನೀಡುವ ವ್ಯವಸ್ಥೆಯಿದ್ದು, ಅರ್ಹರು ಕಾಯಂ ನಿವಾಸ ಪ್ರಮಾಣಪತ್ರ ಪಡೆಯುವ ಕುರಿತು ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಇಒ ಮಹಾದೇವ ಜಮ್ಮು, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರಾದ ತ್ರಿಬಂಕರಾವ ಜಿವಾಯಿ, ವಿನಾಯಕ ಪವಾರ, ಗೌಸೋದ್ದೀನ್​ ಬಿರಿವಾಲೆ, ಈಶ್ವರ ಮೇತ್ರೆ, ಮಹೇಶ ಪಾಟೀಲ, ಸತೀಶ ಗಾಯಕವಾಡ, ಭಾಗವತ ಪುಂಡೆ, ವೆಂಕಟೇಶ ಗುತ್ತೇದಾರ, ಪ್ರಶಾಂತ ಪಾಟೀಲ, ಶಿವಕುಮಾರ ಕೋಳಿ, ಪ್ರೀತಮ್​ ಜಾಧವ, ಬಾಲಾಜಿ ಸೂರ್ಯವಂಶಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
======
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net