ಕೆಂಭಾವಿಯಲ್ಲಿ ಕೆರೆ ವ್ಯಾಪ್ತಿಯಲ್ಲಿನ ನಿವೇಶನ ಪರಿಶೀಲಿಸಿ, ಬೇರೆ ಕಡೆ ಭೂಮಿ ಲಭ್ಯತೆ ಬಗ್ಗೆ ವರದಿ ಸಲ್ಲಿಸಬೇಕು. ರಾಮಸಮುದ್ರದಲ್ಲಿ ಈ ಜನಾಂಗದ ಕಾಲನಿಗೆ ಥ್ರಿ ಫೇಸ್ ವಿದ್ಯುತ್ಲೈನ್ ಒದಗಿಸುವ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಿ. ಕೆಂಭಾವಿ, ಹುಣಸಗಿ, ವರ್ಕನಳ್ಳಿ ಗಿರಿನಗರ, ನಾಯ್ಕಲ್, ದೋರನಹಳ್ಳಿ, ಯಾದಗಿರಿ ಹೊಸಳ್ಳಿ ಕ್ರಾಸ್ ವ್ಯಾಪ್ತಿಯಲ್ಲಿ ರಸ್ತೆಗಳ ಮತ್ತು ಮನೆಗಳ ಸಮಸ್ಯೆ ಬಗ್ಗೆ ಸಮುದಾಯವರು ಗಮನಕ್ಕೆ ತಂದಿದ್ದು, ಈ ಕುರಿತು ಪರಿಶೀಲಿಸಿ ವರದಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.