ಮಹಿಳಾ ಉದ್ಯೋಗಿಗಳಿಗೆ ಕನಿಷ್ಠ ವೇತನ ಕೊಡಿ

 ಉದ್ಯೋಗ ಸೃಷ್ಟಿ ಮಾಡಬೇಕು, ಮಹಿಳಾ ಉದ್ಯೋಗಿಗಳಿಗೆ ಕನಿಷ್ಠ ವೇತನ ಮತ್ತು ಸಮಾನ ವೇತನ ಜಾರಿಯಾಗಬೇಕು ಎಂಬುದು ಸೇರಿ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವಿವಿಧ ಸಂಟನೆಗಳ ಜಂಟಿ ಸಮಿತಿ ಕಾರ್ಯಕರ್ತರು ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು. ಲವಿತ್ರಾ ವಸದ, ಎಂ.ಬಿ.ಸಜ್ಜನ್​, ಶಾಂತಾ ಂಟೆ, ಸುಜಾತಾ ವೈ, ಮಲ್ಲಮ್ಮ ಕೋಡ್ಲಿ ಇತರರಿದ್ದರು.
ಉದ್ಯೋಗ ಸೃಷ್ಟಿ ಮಾಡಬೇಕು, ಮಹಿಳಾ ಉದ್ಯೋಗಿಗಳಿಗೆ ಕನಿಷ್ಠ ವೇತನ ಮತ್ತು ಸಮಾನ ವೇತನ ಜಾರಿಯಾಗಬೇಕು ಎಂಬುದು ಸೇರಿ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವಿವಿಧ ಸಂಟನೆಗಳ ಜಂಟಿ ಸಮಿತಿ ಕಾರ್ಯಕರ್ತರು ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು. ಲವಿತ್ರಾ ವಸದ, ಎಂ.ಬಿ.ಸಜ್ಜನ್​, ಶಾಂತಾ ಂಟೆ, ಸುಜಾತಾ ವೈ, ಮಲ್ಲಮ್ಮ ಕೋಡ್ಲಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿವಿಧ ಸಂಟನೆಗಳ ಜಂಟಿ ಸಮಿತಿ ಪ್ರತಿಭಟನೆ
ಕಲಬುರಗಿ: ಉದ್ಯೋಗ ಸೃಷ್ಟಿ ಮಾಡಬೇಕು, ಮಹಿಳಾ ಉದ್ಯೋಗಿಗಳಿಗೆ ಕನಿಷ್ಠ ವೇತನ ಮತ್ತು ಸಮಾನ ವೇತನ ಜಾರಿಯಾಗಬೇಕು ಎಂಬುದು ಸೇರಿ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವಿವಿಧ ಸಂಟನೆಗಳ ಜಂಟಿ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಮಹಿಳೆಯರ ವೇತನ ರಹಿತ ಕೆಲಸ ಗುರುತಿಸುವುದು, ವೇತನ ನಿಗದಿಗಾಗಿ ಸಮಾನ ಕೆಲಸಕ್ಕೆ ಸಮಾನ ವೇತನ ಕಡ್ಡಾಯವಾಗಿ ನೀಡಬೇಕು, ಮಹಿಳಾ ವಿರೋಧಿ ಕಾರ್ಮಿಕ ಸಂಹಿತೆ ಹಿಂಪಡೆಯಬೇಕು, ಮಹಿಳಾ ಉದ್ಯೋಗಿಗಳಿಗೆ ಆರು ತಿಂಗಳು ಮಾತೃತ್ವ ರಜೆ, ಆರೈಕೆ ಕೊಠಡಿ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.
ಮಹಿಳೆಯರಿಗೆ ತಿಂಗಳಲ್ಲಿ ಎರಡು ದಿನ ಮುಟ್ಟಿನ ರಜೆ ಪ್ರತ್ಯೇಕ ವಿರಾಮ ಕೊಠಡಿ ಮತ್ತು ಶೌಚಗೃಹ ವ್ಯವಸ್ಥೆ ಮಾಡಬೇಕು, ಮಹಿಳೆಯರ ಮತ್ತು ಮಕ್ಕಳನ್ನು ರಾತ್ರಿ ವೇಳೆ ಮತ್ತು ಅಪಾಯಕಾರಿ ಕೆಲಸಗಳ್ಲಿ ದುಡಿಸುವುದನ್ನು ನಿಷೇಧಿಸಬೇಕು, ಮಹಿಳೆ ಮತ್ತು ಮಕ್ಕಳ ವಿರುದ್ಧ ದೌರ್ಜನ್ಯ ತಡೆಗಟ್ಟುವ ಮತ್ತು ಕಠಿಣ ಶಿಕ್ಷೆ ತ್ವರಿತವಾಗಿ ಜಾರಿಗೊಳಿಸಬೇಕು, ನ್ಯಾಯಮೂರ್ತಿ ವರ್ಮಾ ಸಮಿತಿ ಶಿಫಾರಸು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ದ್ವೇಷ, ಅಪರಾಧ ಹೇಳಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಪಿಡಿಎಸ್​ ವ್ಯವಸ್ಥೆ ಸಾರ್ವತ್ರಿಕಗೊಳಿಸಬೇಕು, ಶ್ರೀಮಂತರ ಮೇಲೆ ತೆರಿಗೆ ವಿಧಿಸುವುದು ಮತ್ತು ಸಾರ್ವಜನಿಕ ಸೇವೆಗಳಿಗೆ ಆರೋಗ್ಯ ಮತ್ತು ಶಿಕ್ಷಣಕ್ಕೆ ಅನುದಾನ ನೀಡಬೇಕು, ಮನ್​ರೇಗಾ ಉಳಿವಿಗೆ ನಗರಕ್ಕೂ ಉದ್ಯೋಗ ಖಾತ್ರಿ ಯೋಜನೆ ಜಾರಿಗಾಗಿ ವರ್ಷದಲ್ಲಿ 200 ದಿನ ಕೆಲಸ 600 ರೂ. ಕೂಲಿಗಾಗಿ, ಮಹಿಳಾ ಕೂಲಿಕಾರ ವಿರೋಧಿ ವಿಬಿಜಿ ರಾಮ್​ಜಿ ವಾಪಸ್​ ಪಡೆಯಬೇಕು, ಮರ್ಯಾದೆಗೇಡು ಹತ್ಯೆ ತಡೆಗೆ ತಕ್ಷಣ ವಿಶೇಷ ಕಾನೂನು ಜಾರಿಗೊಳಿಸಬೇಕು, ಯೋಜನಾ ಕಾರ್ಮಿಕರದ ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರಿಗೂ ರಜೆ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿಗಳಿಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿ ಮೂಲಕ ಸಲ್ಲಿಸಿದರು. ಡಿವೈಎಫ್​ಐ ಅಧ್ಯಕ್ಷೆ ಲವಿತ್ರಾ ವಸದ, ಸಿಯುಟಿಯು ಎಂ.ಬಿ.ಸಜ್ಜನ್​, ಶಾಂತಾ ಘಂಟೆ, ಎಸ್​ಎಫ್​ಐನ ಸುಜಾತಾ ವೈ, ಎಐಎಡಬ್ಲೂಯು ಮಲ್ಲಮ್ಮ ಕೋಡ್ಲಿ ಇತರರಿದ್ದರು. ಕೆಪಿಆರ್​ಎಸ್​, ಜೆಎಂಎಸ್​ ಸೇರಿ ಅನೇಕ ಸಂಟನೆಗಳು ಸಹಯೋಗ ನೀಡಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net