ರೋಗಿಗಳು ವೈದ್ಯರಿಗೆ ದೇವರು : ಡಾ.ಕಾಮರೆಡ್ಡಿ

,
,
Published on
ಕಲಬುರಗಿ: ರೋಗಿಗಳು ನಮಗೆ ದೇವರ ರೂಪದಲ್ಲಿ ನೊಡುತ್ತಾರೆ ನಾವು ಕೂಡ ರೋಗಿಗೆ ಚಿಕಿತ್ಸೆ ನೀಡುವಾಗ ದೇವರ ರೂಪದಲ್ಲಿ ನೋಡಬೇಕು ಎಂದು ಕಾಮರಡ್ಡಿ ಆಸ್ಪತ್ರೆಯ ಮುಖ್ಯಸ್ಥ ಕಲಬುರಗಿ ಜಿಲ್ಲೆಯ ಖ್ಯಾತ ವೈದ್ಯರಾದ ಡಾ.ಎಸ್.ಬಿ. ಕಾಮರೆಡ್ಡಿ ಹೇಳಿದರು.
ಕಲಬುರಗಿ ನಗರದ ಕಾಮರಡ್ಡಿ ಆಸ್ಪತ್ರೆಯಲ್ಲಿರುವ ವೈದ್ಯರ ದಿನಾಚರಣೆ ಕಾರ್ಯಕ್ರಮವನ್ನು ರೊಗಿಗಳ ಸಮ್ಮುಖದಲ್ಲಿ ಕೆಕ್ ಕತ್ತರಿಸಿ ಉದ್ಘಾಟಿಸಿ ಮಾತನಾಡಿ
ರೋಗಿಗಳೊಂದಿಗೆ ವೈದ್ಯರು ಹೆಚ್ಚು ಹೊತ್ತು ಮಾತನಾಡಿದಷ್ಟು ಆತ್ಮವಿಶ್ವಾಸ ರೋಗಿಗಳಲ್ಲಿ ಬೆಳೆಯುತ್ತದೆ. ಕಾಯಿಲೆಯ ಬಗ್ಗೆ ವೈದ್ಯರಿಗೂ ಸ್ಪಷ್ಟತೆ ಸಿಗುತ್ತದೆ. ಇದರಿಂದಾಗಿ ಅಗತ್ಯ ಚಿಕಿತ್ಸೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ನೀಡಲು ಸಹಾಯವಾಗಲಿದೆ. ಹೀಗಾಗಿ, ರೋಗಿಗಳೊಂದಿಗೆ ವೈದ್ಯರು ಸಾಧ್ಯವಾದಷ್ಟು ನಿಖರ, ಮುಕ್ತವಾಗಿ ಸಂವಹನ ನಡೆಸಬೇಕು ಎಂದು ಹೇಳಿದರು.
ಕಾಮರಡ್ಡಿ ಆಸ್ಪತ್ರೆಯ ನಿರ್ದೆಶಕಿ ಡಾ. ಪ್ರತಿಮಾ ಕಾಮರಡ್ಡಿ ಮಾತನಾಡಿ ಇಂದು ಸಾರ್ವಜನಿಕರು ಎಲ್ಲಾ ಬಗೆಯ ಕಾಯಿಲೆ ಹಾಗೂ ವೈದ್ಯಕೀಯ ಚಿಕಿತ್ಸೆಯ ಬಗ್ಗೆ ಹೆಚ್ಚಿನ ಅರಿತಿದ್ದಾರೆ. ಎಲ್ಲವನ್ನೂ ಪ್ರಶ್ನಿಸುವುದು ಹಾಗೂ ತಿಳಿಯಲು ಬಯಸುತ್ತಾರೆ. ಗ್ರಾಮೀಣ ಪ್ರದೇಶದ ಜನರು ತಾವು ಅನುಭವಿಸುತ್ತಿರುವ ಸಂಕಟ ಮಾತ್ರ ತಿಳಿಸಿ, ರೋಗ ನಿರ್ಣಯ ಚಿಕಿತ್ಸೆ ಹೀಗೆ ಎಲ್ಲವೂ ವೈದ್ಯರ ಸೂಚನೆಯಂತೆಯೇ ಪಾಲಿಸಲು ಮುಂದಾಗುತ್ತಾರೆ. ಅವರಿಗೂ ಸಹ ಸಂಪೂರ್ಣ ಮಾಹಿತಿ ನೀಡಿ, ಆತ್ಮವಿಶ್ವಾಸ ಮೂಡಿಸಬೇಕು ಹಾಗೂ ಚಿಕಿತ್ಸೆಯ ಆಯ್ಕೆಗಳನ್ನು ಅವರಿಗೇ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಬಸವರಾಜಪ್ಪ ಕಾಮರಡ್ಡಿ , ಡಾ. ಅಮರೇಶ ಬಿರಾದರ, ಡಾ. ನವಿನ ಬಿರಾದರ, ಸತಿಶ ಪಾಟೀಲ್, ಡಾ. ಸುನೀಲ್,ಸೇರಿದಂತೆ ಅನೇಕರು ಉಪಸ್ಥಿತರಿದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net