ಕಾಳಗಿ: ವಿದ್ಯಾರ್ಥಿಗಳು ತಂದೆ-ತಾಯಿ, ಗುರು-ಹಿರಿಯರಿಗೆ ಗೌರವ ನೀಡುವುದು ಕಲಿಯಬೇಕು. ಉತ್ತಮ ನಡವಳಿಕೆ, ಶಿಸ್ತು, ಪ್ರಾಮಾಣಿಕತೆ, ಕೌಶಲಗಳನ್ನು ಮೈಗೂಡಿಸಿಕೊಂಡು ಮುಂದೆ ಸಾಗಿದರೆ ಗುರಿ ತಲುಪಲು ಸಾಧ್ಯ ಎಂದು ಜೇವರ್ಗಿ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ಎಚ್.ಬಿ.ಪಾಟೀಲ್ ಹೇಳಿದರು. ಕಾಳೇಶ್ವರ ಪದವಿ ಕಾಲೇಜು ಮತ್ತು ಜೆ.ಎಸ್.ಬಸವೇಶ್ವರ ಪಿಯು ಕಾಲೇಜಿನಲ್ಲಿ ಭಾನುವಾರ ಏರ್ಪಡಿಸಿದ್ದ ಪಿಯುಸಿ ಮತ್ತು ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ, ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿ, ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು. ಆಚಾರ್ಯ ಪಿಯು ಕಾಲೇಜಿನ ಪ್ರಾಚಾರ್ಯ ಮಲ್ಲಿಕಾರ್ಜುನ ಬಿರಾದಾರ, ಪ್ರಾಚಾರ್ಯ ಅಂಬಾದಾಸ ಮದನೆ, ಚಿತ್ತಾಪುರದ ಎಂ.ಬಿ.ಪಾಟೀಲ್ ಪದವಿ ಕಾಲೇಜಿನ ಪ್ರಾಚಾರ್ಯ ಸೋಮಶೇಖರ ಕಲಶೆಟ್ಟಿ, ಅನನ್ಯ ಪದವಿ ಕಾಲೇಜಿನ ಪ್ರಾಚಾರ್ಯ ಶರಣು ಪೂಜಾರಿ ಮಾತನಾಡಿದರು. ಸಂಸ್ಥೆ ಅಧ್ಯ ಸಂಗಪ್ಪ ಅರಣಕಲ್ ಅಧ್ಯತೆ ವಹಿಸಿದ್ದರು. ಗೋಟೂರ ಗ್ರಾಪಂ ಮಾಜಿ ಅಧ್ಯ ಶಿವಕುಮಾರ ಕಮಕನೂರ ಇತರರಿದ್ದರು. ಭಾರತಿ ಪ್ರಾರ್ಥಿಸಿದರು. ರಾಧಿಕಾ ಸ್ವಾಗತಿಸಿದರು. ನಂದಿತಾ ನಿರೂಪಣೆ ಮಾಡಿದರು. ಪೂಜಾ ವಂದಿಸಿದರು. ಕಳೆದ ಸಾಲಿನಲ್ಲಿ ಉತ್ತಮ ಅಂಕದೊಂದಿಗೆ ಸಾಧನೆ ಮಾಡಿ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.