ಪಾರ್ಥೇನಿಯಂ ಕೃಷಿಗೆ ಸೂಕ್ತವಲ್ಲ

ಕುದೂರು ಹೋಬಳಿಯ ತೊರೆರಾಮನಹಳ್ಳಿಯಲ್ಲಿ ಬೆಂಗಳೂರಿನ ಜಿಕೆವಿಕೆ ಅಂತಿಮ ವರ್ಷದ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಕೃಷಿ ವಿದ್ಯಾರ್ಥಿಗಳ ಕಾರ್ಯಾನುಭವ ಶಿಬಿರದಲ್ಲಿ ಪಾರ್ಥೇನಿಯಂ ಗೊಬ್ಬರದ ಕುರಿತು ವಿಜ್ಞಾನಿಗಳು ಮಾಹಿತಿ ನೀಡಿದರು. ಬೆಂಗಳೂರಿನ ಜಿಕೆವಿಕೆ ಡಾ.ಎಸ್.ಆರ್ ಆನಂ, ಕೃಷಿ ವಿಶ್ವವಿದ್ಯಾನಿಲಯ ಪ್ರಾಧ್ಯಾಪಕ ಡಾ. ಶ್ರೀಕಾಂತ್, ಡಾ. ಅರವಿಂದ್, ಯಾದವ್, ಡಾ.ಮನು ಗಂಗಾಧರ, ರೈತರಾದ ನರಸಿಂಹಮೂರ್ತಿ, ಆರ್.ಬಿ, ಗಂಗಣ್ಣ ಇದ್ದರು.

Published on

ಕುದೂರು :

ಪಾರ್ಥೇನಿಯಂ ಆಕ್ರಮಣಕಾರಿ ಕಳೆಯಾಗಿದ್ದು, ಇದು ಬೆಳೆಗಳೊಂದಿಗೆ ನೀರು, ಪೋಷಕಾಂಶ, ಬೆಳಕು ಹಾಗೂ ಸ್ಥಳಕ್ಕಾಗಿ ಸ್ಪರ್ಧಿಸುತ್ತದೆ ಎಂದು ಬೆಂಗಳೂರಿನ ಜಿಕೆವಿಕೆ ಡಾ.ಎಸ್.ಆರ್ ಆನಂದ್ ತಿಳಿಸಿದರು.

ಹೋಬಳಿ ತೊರೆರಾಮನಹಳ್ಳಿಯ ಬೆಂಗಳೂರಿನ ಜಿಕೆವಿಕೆ ಅಂತಿಮ ವರ್ಷದ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಕೃಷಿ ವಿದ್ಯಾರ್ಥಿಗಳ ಕಾರ್ಯಾನುಭವ ಶಿಬಿರದಲ್ಲಿ ಮಾತನಾಡಿ, ಪಾರ್ಥೇನಿಯಂನಲ್ಲಿ ಪಾರ್ಥೇನಿನ್ ಎಂಬ ರಾಸಾಯನಿಕವಿದ್ದು, ಇದು ಇತರ ಸಸ್ಯಗಳ ಬೆಳವಣಿಗೆ ತಡೆಯುವ ಶಕ್ತಿ ಹೊಂದಿದೆ. ಆದ್ದರಿಂದ ತಾಜಾ ಪಾರ್ಥೇನಿಯಂ ಹೊಲಕ್ಕೆ ಗೊಬ್ಬರವಾಗಿ ಹಾಕುವುದು ಸೂಕ್ತವಲ್ಲ ಎಂದು ಸೂಚಿಸಿದರು.
ಸಣ್ಣ ತುಂಡುಗಳಾಗಿ ಕತ್ತರಿಸಿ ಕಾಂಪೋಸ್ಟ್ ಗುಂಡಿಯಲ್ಲಿ ಹಾಕಿದ ನಂತರ ಅದರ ಮೇಲೆ ಹಸುವಿನ ಸಗಣಿ ತೆಳು ಪದರ ಹಾಕುವುದರಿಂದ ಸೂಕ್ಷ್ಮಜೀವಿ ಚಟುವಟಿಕೆ ಹೆಚ್ಚಿಸಿ, ಕೊಳೆಯುವಿಕೆ ವೇಗಗೊಳಿಸುತ್ತದೆ. ಕಾಂಪೋಸ್ಟ್ ರಾಶಿಯಲ್ಲಿ ಸಾಕಷ್ಟು ತೇವಾಂಶವಿರಬೇಕು. ಮಣ್ಣು ಹಾಗೂ ಹುಲ್ಲಿನ ಸೂಕ್ತ ಮುಚ್ಚಳದಿಂದ ಮುಚ್ಚಿ 15 ದಿನಗಳಿಗೊಮ್ಮೆ ತಿರುಗಿಸುವುದರಿಂದ ಗಾಳಿ ಸಂಚಾರ ಹೆಚ್ಚಿ ಕೊಳೆಯುತ್ತದೆ ಎಂದರು.
ಇದರಿಂದ ಸಾವಯವ ವಸ್ತುವಿನ ಪ್ರಮಾಣ ಹೆಚ್ಚಿ, ಮಣ್ಣಿನ ಭೌತಿಕ ಗುಣ ಸುಧಾರಿಸುತ್ತದೆ. ನೀರು ಹಿಡಿದಿಡುವ ಸಾಮರ್ಥ್ಯಕ್ಕೆ ಸಹಾಯ ಮಾಡುತ್ತದೆ. ಸೂಕ್ಷ್ಮಜೀವಿಗಳ ಚಟುವಟಿಕೆಗೆ ಸಹಕಾರಿಯಾಗಿ ಮಣ್ಣಿಗೆ ಪೋಷಕಾಂಶ ಒದಗಿಸುತ್ತದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net