ನೆಲಕ್ಕೆ ಅಪ್ಪಳಿಸಿದ ಪಪ್ಪಾಯಿ ಬೆಳೆ

ಶಹಾಪುರ ತಾಲೂಕಿನ ಗೋಗಿ ಸಮೀಪದ ಉಕ್ಕಿನಾಳ ತಾಂಡಾದಲ್ಲಿ ಭಾನುವಾರ ತಡರಾತ್ರಿ ಸುರಿದ ಭಾರೀ ಮಳೆಗೆ ನೆಲಕ್ಕೆ ಅಪ್ಪಳಿಸಿದ ಪಪ್ಪಾಯಿ.
ಶಹಾಪುರ ತಾಲೂಕಿನ ಗೋಗಿ ಸಮೀಪದ ಉಕ್ಕಿನಾಳ ತಾಂಡಾದಲ್ಲಿ ಭಾನುವಾರ ತಡರಾತ್ರಿ ಸುರಿದ ಭಾರೀ ಮಳೆಗೆ ನೆಲಕ್ಕೆ ಅಪ್ಪಳಿಸಿದ ಪಪ್ಪಾಯಿ.
Published on

ಪ್ರಮುಖ ಮುಖ್ಯಾಂಶಗಳು

  • ಗುಡುಗು ಮಿಶ್ರಿತ ಭಾರೀ ಮಳೆಗೆ
ಗೋಗಿ: ಗುಡುಗು, ಬಿರುಗಾಳಿ ಸಹಿತ ಭಾನುವಾರ ತಡರಾತ್ರಿ ಸುರಿದ ಭಾರೀ ಮಳೆಗೆ ಬರೋಬ್ಬರಿ ಮೂರು ಎಕರೆಗೂ ಅಧಿಕ ಪಪ್ಪಾಯಿ ಬೆಳೆ ಸಂಪೂರ್ಣ ನಾಶವಾದ ಟನೆ ಖೇಮುನಾಯಕ ತಾಂಡಾ ಉಕ್ಕಿನಾಳದಲ್ಲಿ ನಡೆದಿದೆ.
ಸುಧಾಕರ ರಾಠೋಡ್​ ಎಂಬುವವರಿಗೆ 3 ಎಕರೆ 37 ಗುಂಟೆ ಪಪ್ಪಾಯಿ ತೋಟದಲ್ಲಿದ್ದ ಪಪ್ಪಾಯಿ ಗಿಡಗಳು ನೆಲಕ್ಕುರುಳಿ ರೈತನಿಗೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಆರು ತಿಂಗಳ ಹಿಂದೆ ಎರಡು ಸಾವಿರ ಪಪ್ಪಾಯಿ ಸಸಿ ನಾಟಿ ಮಾಡಿದ್ದು, ಇನ್ನು ಒಂದು ವಾರದಲ್ಲಿ ಕಟಾವು ಮಾಡಬೇಕು ಎನ್ನುವಷ್ಟರಲ್ಲಿ ಈ ಅಕಾಲಿಕ ಮಳೆಗೆ ಬೆಳೆ ಸಂಪೂರ್ಣ ನಾಶವಾಗಿದೆ. ರಾಠೋಡ್​ ಈ ಬೆಳೆಯ ಮೇಲೆ ಸುಮಾರು ಎಂಟು ಲ ರೂ. ಸಾಲ ಮಾಡಿದ್ದಾರೆ. ಆದರೆ ಅನಿರೀತ ಮಳೆಯಿಂದ ಪ್ರತಿಯೊಂದು ಗಿಡದ ಎಲೆಗಳು ಉದುರಿ ಕಾಯಿಗಳು ಹಣ್ಣುಗಳು ಹಾಗೂ ಬುಡಸಮೇತ ಮುರಿದು ಬಿದ್ದ ಗಿಡಗಳು ಹಾನಿಗೊಂಡಿರುವುದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಮಳೆಗಾಳಿಯಿಂದ ನಮ್ಮ ಬದುಕನ್ನೇ ಮುರಾಬಟ್ಟಿ ಮಾಡಿದೆ ಎಂದು ಅವರು ಅಳಲುತೊಡಿಕೊಂಡಿದ್ದು, ಕೂಡಲೇ ಜಿಲ್ಲಾಡಳಿತ ಸೂಕ್ತ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಬೆಳೆ ಹಾನಿಯಾದ ಹೊಲಕ್ಕೆ ಕೃಷಿ ಇಲಾಖೆ ಅಧಿಕಾರಿಗಳು ತಣ ಭೇಟಿ ನೀಡಿ ಪಂಚನಾಮೆಯನ್ನು ನಡೆಸಿ, ಹಾಳಾದ ಬೆಳೆ ಕುರಿತು ವರದಿ ಸರ್ಕಾರಕ್ಕೆ ಸಲ್ಲಿಸಿ ಪರಿಹಾರ ಸಿಗುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕೆಂದು ಸುಧಾಕರ ಅವರು ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net