ಮನಸ್ಸಿನ ಒತ್ತಡ ಕಡಿಮೆ ಮಾಡುವ ಚಿತ್ರಕಲೆ

ಕಲಬುರಗಿ ಕೇಂದ್ರೀಯ ವಿವಿಯಲ್ಲಿ ಮಂಗಳವಾರ ಆಯೋಜಿಸಿದ್ದ ಚಿತ್ರಕಲಾ ಮಹೋತ್ಸವದಲ್ಲಿ ಪ್ರೊ.ಆರ್​.ಆರ್​.ಬಿರಾದಾರ್​, ಪ್ರೊ.ವಿಕ್ರಮ ವಿಸಾಜಿ, ಡಾ.ಪರಶುರಾಮ ಕಟ್ಟಿಮನಿ, ಡಾ.ಶಿವಾನಂದ ಬಂಟನೂರ್​ ಇತರರಿದ್ದರು.
ಕಲಬುರಗಿ ಕೇಂದ್ರೀಯ ವಿವಿಯಲ್ಲಿ ಮಂಗಳವಾರ ಆಯೋಜಿಸಿದ್ದ ಚಿತ್ರಕಲಾ ಮಹೋತ್ಸವದಲ್ಲಿ ಪ್ರೊ.ಆರ್​.ಆರ್​.ಬಿರಾದಾರ್​, ಪ್ರೊ.ವಿಕ್ರಮ ವಿಸಾಜಿ, ಡಾ.ಪರಶುರಾಮ ಕಟ್ಟಿಮನಿ, ಡಾ.ಶಿವಾನಂದ ಬಂಟನೂರ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕುಲಸಚಿವ ಪ್ರೊ.ಆರ್​.ಆರ್​.ಬಿರಾದಾರ್​ ಅಭಿಮತ
  • ಸಿಯುಕೆದಲ್ಲಿ ಯುಗಾದಿ ಮಹೋತ್ಸವ
ಕಲಬುರಗಿ: ಭಾವನೆ ಮತ್ತು ಅನುಭವಗಳ ಅಭಿವ್ಯಕ್ತಿಯ ಮಾಧ್ಯಮ ಚಿತ್ರಕಲೆಯಾಗಿದ್ದು, ಹೀಗಾಗಿ ಅದೊಂದು ಜಾಗತಿಕ ಭಾಷೆಯಾಗಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಆರ್​.ಆರ್​.ಬಿರಾದಾರ ಅಭಿಪ್ರಾಯಪಟ್ಟರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಂಗೀತ ಮತ್ತು ಲಲಿತಕಲೆ ವಿಭಾಗದಲ್ಲಿ ಮಂಗಳವಾರ ಆಯೋಜಿಸಿದ್ದ ದೃಶ್ಯಕಲಾ ಪ್ರದರ್ಶನ ಉದ್ಘಾಟಿಸಿ, ಕಲಾಕೃತಿ ವೀಸಿ ಮಾತನಾಡಿದ ಅವರು, ಯಾವುದೇ ಬಗೆಯ ಕಲೆ ಮನುಷ್ಯನಿಗೆ ಆನಂದ ಮತ್ತು ಸಂಸ್ಕಾರ ನೀಡುತ್ತವೆ. ಮನಸ್ಸಿನ ಒತ್ತಡ ಕಡಿಮೆ ಮಾಡುತ್ತವೆ. ಆರೋಗ್ಯ ವೃದ್ಧಿಸುವುದರ ಜತೆಗೆ ಜನರನ್ನು ಒಂದುಗೂಡಿಸುತ್ತವೆ. ಹೀಗಾಗಿ ಪ್ರತಿಯೊಬ್ಬರೂ ಕಲೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.
ಗ್ರಂಥಾಲಯ ಮುಖ್ಯಸ್ಥ ಡಾ.ಪರಶುರಾಮ ಕಟ್ಟಿಮನಿ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆ ಅತ್ಯಂತ ಸೃಜನಶೀಲವಾದದ್ದು, ಅವರ ಕಲಾಕೃತಿಗಳಲ್ಲಿ ಸ್ಪಷ್ಟವಾಗಿ ಅಭಿವ್ಯಕ್ತಗೊಂಡಿದೆ. ಭವಿಷ್ಯದಲ್ಲಿ ಉತ್ತಮ ಕಲಾವಿದರಾಗಿ ಬೆಳೆಯುವ ಎಲ್ಲ ಲಕ್ಷಣಗಳು ಇವರ ಕಲಾಕೃತಿಗಳಲ್ಲಿ ಬಿಂಬಿತವಾಗಿವೆ. ಹೀಗಾಗಿ ದೇಶದ ಸಾಂಸತಿಕ ಆಸ್ತಿಯಾಗುವುದರಲ್ಲಿ ಸಂದೇಹವಿಲ್ಲ ಎಂದು ಅಭಿಪ್ರಾಯಪಟ್ಟರು.
ವಿಭಾಗದ ಮುಖ್ಯಸ್ಥರೂ ಆದ ಮಾನವಿಕ ಮತ್ತು ಭಾಷಾ ನಿಕಾಯದ ಡೀನ್​ ಪ್ರೊ.ವಿಕ್ರಮ ವಿಸಾಜಿ ಮಾತನಾಡಿ, ಒಬ್ಬೊಬ್ಬರಲ್ಲಿ ಒಂದೊಂದು ಸಾಮರ್ಥ್ಯ ಅಡಗಿರುತ್ತದೆ. ಅದು ಬಣ್ಣ, ನಾದ, ಕಲ್ಲು, ಕೊರಡು ಅಥವಾ ಶಬ್ದಗಳ ಮೂಲಕ ಕಲಾಕೃತಿಗಳಾಗಿ ಹೊರಹೊಮ್ಮಿ, ನೋಡುಗರ ಹೃದಯಗಳೆರಡನ್ನೂ ಸಂಸ್ಕಾರಗೊಳಿಸುತ್ತವೆ. ದೇಶದ ಬೇರೆ&ಬೇರೆ ಪ್ರದೇಶಗಳಿಂದ ಬಂದಿರುವ ಈ ಎಲ್ಲ ವಿದ್ಯಾರ್ಥಿಗಳು ಅತ್ಯಂತ ಪ್ರತಿಭಾಶಾಲಿಗಳಾಗಿದ್ದಾರೆ ಎಂದು ಶ್ಲಾಸಿದರು.
ಕಲಾ ಪ್ರದರ್ಶನದ ಸಂಯೋಜಕ ಡಾ.ಶಿವಾನಂದ ಬಂಟನೂರ ಮಾತನಾಡಿದರು.
"

ವಿದ್ಯಾರ್ಥಿಗಳು ರಚಿಸಿದ ಎಲ್ಲ ಕಲಾಕೃತಿಗಳಲ್ಲಿ ಸಾಮಾಜಿಕ ಸಂವೇದನೆ, ಪರಿಸರದ ಕಾಳಜಿ ಇತರೆ ಸಂಗತಿ ಅಭಿವ್ಯಕ್ತಗೊಂಡಿದ್ದು, ನೋಡುಗರಲ್ಲಿ ಪ್ರಕೃತಿ, ಪ್ರಾಣಿ -ಪಕ್ಷಿಗಳ ಬಗ್ಗೆ ಪ್ರೀತಿ, ಅಭಿಮಾನ ಮೂಡಿಸುತ್ತವೆ. ದೇಶ, ಭಾಷೆ, ಸಂಸ್ಕೃತಿಯ ಬಗ್ಗೆಯೂ ಅರಿವು, ಅಭಿಮಾನ ಮೂಡಿಸುವಂತಹ ಕಲಾಕೃತಿಗಳನ್ನೂ ರಚಿಸಬೇಕು.

> ಪ್ರೊ.ಆರ್​.ಆರ್​.ಬಿರಾದಾರ್​, ಕುಲಸಚಿವ, ಸಿಯುಕೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net