ಮಳೆಗಾಗಿ ಹನುಮಾನ ದೇವಸ್ಥಾನಗಳಿಗೆ ಪಾದಯಾತ್ರೆ

 ಬಸವಕಲ್ಯಾಣ ತಾಲೂಕಿನ  ಹಣಮಂತವಾಡಿ (ಆರ್​) ಗ್ರಾಮದ ಬಜರಂಗಬಲಿ ಭಜನಾ ಸಂಘ, ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಭಜನಾ ಹಾಗೂ ಕೋಲಾಟ ಸಂಘ ಮತ್ತು ಮಹಾ ಲಕ್ಷಿ$್ಮ ಭಜನಾ ಹಾಗೂ ಕೋಲಾಟ ಸಂಘದ ಸದಸ್ಯರು ಶನಿವಾರ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಿಂದ ಮಳೆಗಾಗಿ ಪ್ರಾರ್ಥಿಸಿ 11 ಗ್ರಾಮದ ಹನುಮಾನ ದೇವಸ್ಥಾನಗಳಿಗೆ ಪಾದಯಾತ್ರೆ ನಡೆಸಿದರು.

Published on
ಬಸವಕಲ್ಯಾಣ: ತಾಲೂಕಿನ ಹಣಮಂತವಾಡಿ (ಆರ್​) ಗ್ರಾಮದ ಬಜರಂಗಬಲಿ ಭಜನಾ ಸಂಘ, ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಭಜನಾ ಹಾಗೂ ಕೋಲಾಟ ಸಂಘ ಮತ್ತು ಮಹಾ ಲಕ್ಷ್ಮೀ ಭಜನಾ ಹಾಗೂ ಕೋಲಾಟ ಸಂಘದ ಸದಸ್ಯರು ಶನಿವಾರ ಮಳೆಗಾಗಿ ಪ್ರಾರ್ಥಿಸಿ 11 ಗ್ರಾಮದ ಹನುಮಾನ ದೇವಸ್ಥಾನಗಳಿಗೆ ಪಾದಯಾತ್ರೆ ನಡೆಸಿದರು. ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಿಂದ ಮಹಿಳೆ&ಪುರುಷರು ಸೇರಿ ಸುಮಾರು 40 ಜನರು ಹುಮನಾಬಾದ್​ ತಾಲೂಕಿನ ಮೊಳಕೇರಾ, ಗಡವಂತಿ, ಮಾಣಿಕನಗರ, ಧುಮ್ಮನಸೂರು, ಹುಮನಾಬಾದ್​, ವಾಂಜರಿ, ಬಸಂತಪುರ, ಬಸವಕಲ್ಯಾಣ ತಾಲೂಕಿನ ಯರಬಾಗ, ರಾಂಪುರವಾಡಿ ಹಾಗೂ ರಾಜೇಶ್ವರ ಗ್ರಾಮ ಹೀಗೆ ಹನ್ನೊಂದು ಗ್ರಾಮದ ಹನುಮಾನ ದೇವಸ್ಥಾನಕ್ಕೆ ಕಾಲು ನಡಿಗೆಯಲ್ಲಿ ಭಜನೆ ಮಾಡಿಕೊಂಡು ಹೋಗಿ ಮಹಾ ಮಂಗಳರಾತಿ ಮಾಡಿ ಮಳೆಗಾಗಿ ಪ್ರಾರ್ಥಿಸಿದರು. ವಿವಿಧ ಗ್ರಾಮಗಳಲ್ಲಿ ಪಾದಯಾತ್ರಿಕರಿಗೆ ಚಹಾ ಹಾಗೂ ಉಪಹಾರದ ವ್ಯವಸ್ಥೆ ಮಾಡಿ ತಮ್ಮ ಭಕ್ತಿ ಸೇವೆ ಸಲ್ಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net