ಕಲಬುರಗಿ ಪ್ರೀಯದರ್ಶಿನಿ ಇಂದಿರಾಗಾಂಧಿ ಕೈಗಾರಿಕಾ ತರಬೇತಿ ಕಾಲೇಜಿನಲ್ಲಿ ಶಿವಬಸವ ಸಾಂಸತಿಕ ಸಂಸ್ಥೆಯಿಂದ ಯುಗಾದಿ ಹಾಗೂ ರಂಜಾನ್ ಹಬ್ಬಗಳ ನಿಮಿತ್ತ ಇತ್ತೀಚಿಗೆ ಆಯೋಜಿಸಿದ್ದ ಭಾವೈಕ್ಯ ಬೆಸುಗೆ ಭಾರತ ವಿಶೇಷ ಭಾವ ಸಮ್ಮಿಲನ ಕಾರ್ಯಕ್ರಮಕ್ಕೆ ಡಾ.ಕೆ.ಗಿರಿಮಲ್ಲ ಚಾಲನೆ ನೀಡಿದರು. ಪ್ರೊ.ಯಶವಂತರಾಯ ಅಷ್ಟಗಿ, ಡಾ.ರೆಹೆಮಾನ್ ಪಟೇಲ್, ಪೂಜ್ಯ ಶ್ರೀ ಗುರು ರಾಜೇಂದ್ರ ಶೀವಯೋಗಿಗಳು, ಸಿದ್ದಣ್ಣ ಭಾವಿಕಟ್ಟಿ, ವಿಶ್ವನಾಥ ತೋಟ್ನಳ್ಳಿ ಇತರರಿದ್ದರು.
ಕಲಬುರಗಿ: ಭಾರತೀಯ ಇತಿಹಾಸ ಮತ್ತು ಪರಂಪರೆ ಅವಲೋಕಿಸಿದಾಗ ಹಿಂದು ಮತ್ತು ಮುಸ್ಲಿಂ ಧರ್ಮದವರು ಸಹೋದರತೆಯಿಂದ ಬಾಳುವ ಮೂಲಕ ನಮ್ಮ ನಾಡು ಭಾವೈಕ್ಯತೆಯ ನೆಲೆವೀಡಾಗಿಸಿದ್ದು ಭಾರತೀಯರಾದ ನಮಗೆ ಹೆಮ್ಮೆಯ ಸಂಗತಿ ಎಂದು ಸಾಹಿತಿ ಹಾಗೂ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಯ ಪ್ರಾಂಶುಪಾಲ ಡಾ.ಕೆ.ಗಿರಿಮಲ್ಲ ಹೇಳಿದರು.
ನಗರದ ಪ್ರೀಯದರ್ಶಿನಿ ಇಂದಿರಾಗಾಂಧಿ ಕೈಗಾರಿಕಾ ತರಬೇತಿ ಕಾಲೇಜಿನಲ್ಲಿ ಶಿವಬಸವ ಸಾಂಸತಿಕ ಸಂಸ್ಥೆಯಿಂದ ಯುಗಾದಿ ಹಾಗೂ ರಂಜಾನ್ ಹಬ್ಬಗಳ ನಿಮಿತ್ತ ಇತ್ತೀಚಿಗೆ ಆಯೋಜಿಸಿದ್ದ ಭಾವೈಕ್ಯ ಬೆಸುಗೆ ಭಾರತ ವಿಶೇಷ ಭಾವ ಸಮ್ಮಿಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಖ್ಯಾತ ಚಿತ್ರ ಕಲಾವಿದ ಡಾ.ರೆಹೆಮಾನ್ ಪಟೇಲ್ ಮಾತನಾಡಿ, ಭಾವೈಕ್ಯತೆ, ಸಹಬಾಳ್ವೆಯು ಸಮಾಜದ ಸುಸ್ಥಿರ ಅಭಿವೃದ್ಧಿಗೆ ಮತ್ತು ರಾಷ್ಟ್ರೀಯ ಏಕತೆಗೆ ಅತ್ಯಂತ ಅವಶ್ಯಕ ಎಂದು ಹೇಳಿದರು.
ನದಿಸಿನ್ನೂರಿನ ಮಹಾಲಕ್ಷಿ$್ಮ ಗುರುಪೀಠ ಹಾಗೂ ಶರಣ ಹೂಗಾರ ಮಾದಯ್ಯ ಗುರುಪೀಠದ ಪೀಠಾಧಿಪತಿ ಪೂಜ್ಯ ಶ್ರೀ ಗುರು ರಾಜೇಂದ್ರ ಶೀವಯೋಗಿಗಳು ಸಾನ್ನಿಧ್ಯ ವಹಿಸಿದ್ದರು.
ಕೃಷಿಶ್ರೀ ಪ್ರಶಸ್ತಿ ಪುರಸತ ಲೇಖಕ ಪ್ರೊ.ಯಶವಂತರಾಯ ಅಷ್ಠಗಿ, ಕವಿ ಖಾಜಾ ಪಟೇಲ್ ಭಂಕುರ, ಸಮಾಜ ಸೇವಕ ರಮೇಶ ತೆಗ್ಗಿನಮನಿ ಮಾತನಾಡಿದರು.
ತರಬೇತಿ ಕಾಲೇಜಿನ ಪ್ರಾಂಶುಪಾಲ ಸಿದ್ದಣ್ಣ ಭಾವಿಕಟ್ಟಿ ಅಧ್ಯತೆ ವಹಿಸಿದ್ದರು. ಶಿವಬಸವ ಸಾಂಸತಿಕ ಸಂಸ್ಥೆಯ ಕಾರ್ಯದರ್ಶಿ ಹಾಗೂ ಜಾನಪದ ಕಲಾವಿದ ವಿಶ್ವನಾಥ ತೋಟ್ನಳ್ಳಿ ನಿರೂಪಿಸಿದರು. ಸಂಜು ಹಾಗರಗಿ ಸ್ವಾಗತಿಸಿದರು. ನಾಗೇಂದ್ರ ಭಜಂತ್ರಿ ವಂದಿಸಿದರು. ದತ್ತಪ್ಪ, ಕಲ್ಲಪ್ಪ, ಕಲಾವಿದ ರಾಮು ಇತರರು ಪಾಲ್ಗೊಂಡಿದ್ದರು.
ಹಿಂದೂ&ಮುಸ್ಲಿಂ ಭಾವೈಕ್ಯತೆಯು ಭಾರತದ ಸಾಂಸತಿಕ ಪರಂಪರೆಯ ಭಾಗವಾಗಿದ್ದು, ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸೌಹಾರ್ದತೆಯಿಂದ ಬದುಕುವುದು ಇದರ ಮೂಲ ತತ್ವವಾಗಿದೆ.