2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿರೋಧ! second international airport!

ಕೊಡಿಯಾಲ ಕರೇನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ರೈತರು ಸಭೆ second international airport!ಯಲ್ಲಿ ರಾಜ್ಯ ರೈತ ಹಿತರಕ್ಷಣಾ ಸಂಘದ ಅಧ್ಯಕ್ಷ ನದೀಂ ಪಾಷಾ ಮಾತನಾಡಿದರು. ಸತೀಶ್, ಕೆಂಚಣ್ಣ,  ಸಿದ್ದರಾಜು, ಮುನಿ ನಾರಾಯಣಸ್ವಾಮಿ, ಶ್ರೀನಿವಾಸ್ ಇದ್ದರು.
ಕೊಡಿಯಾಲ ಕರೇನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ರೈತರು ಸಭೆ second international airport!ಯಲ್ಲಿ ರಾಜ್ಯ ರೈತ ಹಿತರಕ್ಷಣಾ ಸಂಘದ ಅಧ್ಯಕ್ಷ ನದೀಂ ಪಾಷಾ ಮಾತನಾಡಿದರು. ಸತೀಶ್, ಕೆಂಚಣ್ಣ, ಸಿದ್ದರಾಜು, ಮುನಿ ನಾರಾಯಣಸ್ವಾಮಿ, ಶ್ರೀನಿವಾಸ್ ಇದ್ದರು.
Published on
ಬಿಡದಿ :ಸಮಗ್ರ ಉಪನಗರ ಯೋಜನೆಯ ಪರ ಹಾಗೂ ವಿರೋಧದ ಹೋರಾಟಗಳು ಈಗಾಗಲೇ ನಡೆಯುತ್ತಿವೆ. ಇದೀಗ ಮತ್ತೆ ಮತ್ತೊಂದು ರೈತರ ಹೋರಾಟ ಪ್ರಾರಂಭವಾಗುವ ಮುನ್ಸೂಚನೆ ಕಾಣುತ್ತಿದ್ದು, ವಿಮಾನ ನಿಲ್ದಾಣದ ವಿರುದ್ಧ ಹೋರಾಟ ನಡೆಸಲು ರೈತರು ಸಭೆ ನಡೆಸಿದರು.
ಕೊಡಿಯಾಲ್ ಕರೇನಹಳ್ಳಿಯ ಲಕ್ಷ್ಮೀನಾರಾಯಣಸ್ವಾಮಿ ದೇವಸ್ಥಾನದ ಆವರಣದಲ್ಲಿ ಶನಿವಾರ ಹಲವು ಗ್ರಾಮಗಳ ರೈತರು ಸಭೆ ಸೇರಿ ಪೂರ್ವ ಭಾವಿಯಾಗಿ ಹೋರಾಟದ ಬಗ್ಗೆ ಚರ್ಚೆ ನಡೆಸಿದರು. ಹೋರಾಟದ ಸಾಧಕ-ಬಾಧಕಗಳ ಬಗ್ಗೆ ರೈತರಿಂದ ಅಭಿಪ್ರಾಯ ಸಂಗ್ರಹ ಮಾಡಲಾಯಿತು. second international airport!
ಸಭೆಯಲ್ಲಿ ಮಾತನಾಡಿದ ರೈತ ಮುಖಂಡ ಸತೀಶ್, ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಮ್ಮ ಗ್ರಾಮಗಳಲ್ಲಿ ಸರ್ವೇ ಕಾರ್ಯ ಮಾಡಿದ್ದಾರೆ. ನಮಗೆ ನಮ್ಮ ಜಮೀನು ಬೇಕು. ಅವರು ಕೊಡುವ ಪರಿಹಾರದ ಹಣ ಬೇಕಿಲ್ಲ. ನಿಲ್ದಾಣಕ್ಕೆಂದು ಗುರುತಿಸಲ್ಪಟ್ಟಿರುವ ಗ್ರಾಮಗಳಲ್ಲಿ ಹಾಗೂ ಅಕ್ಕ ಪಕ್ಕದ ಗ್ರಾಮಗಳಲ್ಲಿ ಜಮೀನು ಇಲ್ಲದವರು ನಮಗೆ ವಿಮಾನ ನಿಲ್ದಾಣ ಬೇಕು ಎಂದು ಹೇಳುತ್ತಿದ್ದಾರೆ ಎಂದರು.
ವಿಮಾನ ನಿಲ್ದಾಣದ ವಿಚಾರದಲ್ಲಿ ಜಿಲ್ಲೆಯ ಮೂರು ಪಕ್ಷದ ಜಿಲ್ಲಾಧ್ಯಕ್ಷರು ವಿಮಾನ ನಿಲ್ದಾಣ ಬೇಕೆನ್ನುತ್ತಾರೆ. ಈ ವಿಚಾರದಲ್ಲಿ ಇಂದಿನಿಂದಲೇ ಹೋರಾಟ ಪ್ರಾರಂಭಮಾಡಬೇಕು. ರೈತರೆಲ್ಲ ಸೇರಿ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ನಿಲ್ದಾಣ ಮಾಡಬಾರದೆಂದು ಮನವಿ ಸಲ್ಲಿಸಬೇಕಾಗಿದೆ. ನಮಗೆ ವಿಮಾನನಿಲ್ದಾಣ ಬೇಕು ಎಂದು ಕೇಳಿಲ್ಲ. ಬಂಡವಾಳ ಶಾಹಿಗಳಿಗೆ ಅನುಕೂಲ ಮಾಡಿಕೊಡಲು ನಾವು ಏಕೆ ಭೂಮಿ ಕೊಡಬೇಕೆಂದು ಪ್ರಶ್ನೆ ಮಾಡಿದರು.
ರಾಜ್ಯ ರೈತ ಹಿತರಕ್ಷಣಾ ಸಂಘದ ಅಧ್ಯಕ್ಷ ನದೀಂ ಪಾಷಾ ಮಾತನಾಡಿ, ಈ ಭಾಗದಲ್ಲೇ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಸಾಧ್ಯತೆ ಹೆಚ್ಚಾಗಿದೆ. ತುಂಡು ಭೂಮಿ ಇಟ್ಟುಕೊಂಡಿರುವವರು ಬೀದಿಗೆ ಬರುತ್ತಾರೆ. ಅವರು ಕೊಡುವ ಪರಿಹಾರ ನಮ್ಮ ಕೈಯಲ್ಲಿ ಇರುವುದಿಲ್ಲ. ಪ್ರತಿ ಗ್ರಾಮದಲ್ಲಿ ಗ್ರಾಮಸಭೆ ಮಾಡಿ ರೈತರ ಅಭಿಪ್ರಾಯ ಸಂಗ್ರಹಿಸಿ ನಂತರ ಹೋರಾಟ ಮಾಡುವ ಬಗ್ಗೆ ತೀರ್ಮಾನ ಮಾಡಲಾಗುತ್ತದೆ ಎಂದರು.
ರೈತ ಮುಖಂಡ ಬಿ.ಗೋಪಾಲ್ ಮಾತನಾಡಿ, ವಿಮಾನ ನಿಲ್ದಾಣವಾದರೆ ನಾವು ಯಾವುದೇ ಗ್ರಾಮಗಳನ್ನು ಮುಟ್ಟಲ್ಲ ಎಂದು ಹೇಳುತ್ತಾರೆ. ಒಂದು ವೇಳೆ ನಿಲ್ದಾಣವಾದರೆ ಅಲ್ಲಿನ ಶಬ್ದಕ್ಕೆ 10 ಕಿ.ಮೀ ವ್ಯಾಪ್ತಿಯಲ್ಲಿ ವಾಸ ಮಾಡಲು ಆಗುವುದಿಲ್ಲ. ಶಬ್ದಮಾಲಿನ್ಯ ಅಷ್ಟರ ಮಟ್ಟಕ್ಕೆ ಇರುತ್ತದೆ ಎಂದರು.
ಸಭೆಯಲ್ಲಿ ರೈತ ಮುಖಂಡರಾದ ಶಾಂತಣ್ಣ, ಮುದ್ದೇಗೌಡ, ಪುಟ್ಟ ಗೋವಿಂದಣ್ಣ, ವೆಂಕಟಪ್ಪ, ವೆಂಕಟೇಶ್, ಕಾಂತರಾಜು ಸೇರಿ ಹಲವು ರೈತರು ಭಾಗವಹಿಸಿದ್ದರು.
ಇವತ್ತು ಭೂ ಮಾಲೀಕರಾಗಿದ್ದೇವೆ, ಭೂಮಿ ಬಿಟ್ಟುಕೊಟ್ಟರೆ ಅವರ ಜೀತಾದಳುಗಳಾಗಿ ಇರಬೇಕಾಗುತ್ತದೆ. ಸ್ವಾಭಿಮಾನದಿಂದ ಬದುಕುತ್ತಿದ್ದೇವೆ. ನಮ್ಮ ಭೂಮಿ ಕೊಟ್ಟರೆ ನಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತೇವೆ. ನಿಲ್ದಾಣದ ಸುತ್ತ 10 ಕಿ. ಮೀ ವ್ಯಾಪ್ತಿಯಲ್ಲಿ ಜೀವನ ನಡೆಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಸೋಮನಹಳ್ಳಿ ಬಳಿ ಟೆಂಟ್ ಹಾಕಿ ಒಂದೊಂದು ದಿನ ಒದೊಂದು ಗ್ರಾಮದ ರೈತರು ಪ್ರತಿಭಟನೆ ನಡೆಸುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ ಎಂದು ರಾಜ್ಯ ರೈತ ಹಿತರಕ್ಷಣಾ ಸಂಘದ ಅಧ್ಯಕ್ಷ ನದೀಂ ಪಾಷಾ ತಿಳಿಸಿದರು.
25 ಬಿಡದಿ1
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net